ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಎ ಲೆಜೆಂಡ್ ಚಾಪ್ಟರ್ 1 ಬಿಡುಗಡೆಯಾಗಿ ಎರಡು ವಾರಗಳ ಅಮೋಘ ಪ್ರದರ್ಶವನ್ನು ಪೂರೈಸಿ ಇದೀಗ ಯಶಸ್ವಿ ಮೂರನೇ ವಾರಕ್ಕೆ ಕಾಲಿಟ್ಟಿದೆ.
ಬಿಡುಗಡೆಯಾದಾಗಿನಿಂದ ಇಲ್ಲಿಯವರೆಗೂ ಮೆಚ್ಚುಗೆಯ ಮಹಾಪೂರವನ್ನು ಪಡೆದುಕೊಳ್ಳುತ್ತಾ ಸಾಗಿರುವ ಕಾಂತಾರ ಚಾಪ್ಟರ್ 1 ಬಾಕ್ಸ್ ಆಫೀಸ್ ಗಳಿಕೆಯಲ್ಲಿಯೂ ಸಹ ಅಷ್ಟೇ ಮಟ್ಟದ ಸದ್ದನ್ನು ಮಾಡಿದೆ.
ಮೊದಲ ವಾರ ವಿಶ್ವದಾದ್ಯಂತ 509.25 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದ್ದ ಕಾಂತಾರ ಚಾಪ್ಟರ್ 1 ಚಿತ್ರ ಎರಡು ವಾರ ಪೂರೈಸುವಷ್ಟರಲ್ಲಿ 717.50 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ.
ಈ ಮೂಲಕ ಈ ವರ್ಷದಲ್ಲಿ ಒಳ್ಳೆಯ ಗಳಿಕೆ ಮಾಡಿದ್ದ ಕೂಲಿ, ಸೈಯಾರ ಚಿತ್ರಗಳನ್ನು ಹಿಂದಿಕ್ಕಿರುವ ಕಾಂತಾರ ಚಾಪ್ಟರ್ 1 ಸದ್ಯ 2025ರಲ್ಲಿ ಅತಿಹೆಚ್ಚು ಗಳಿಕೆ ಮಾಡಿದ ಚಿತ್ರ ಎನಿಸಿಕೊಂಡಿರುವ ಛಾವಾ ಚಿತ್ರವನ್ನು ಹಿಂದಿಕ್ಕುವ ಸನಿಹದಲ್ಲಿದೆ.
ಫೆಬ್ರವರಿ 14ರಂದು ತೆರೆಗೆ ಬಂದಿದ್ದ ಛಾವಾ ಅಂತಿಮವಾಗಿ ವಿಶ್ವದಾದ್ಯಂತ 810 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿತ್ತು. ಹೀಗಾಗಿ 2 ವಾರಗಳಲ್ಲಿ 717.50 ಕೋಟಿ ರೂ ಗ್ರಾಸ್ ಕಲೆಕ್ಷನ್ ಮಾಡಿರುವ ಕಾಂತಾರ ಚಾಪ್ಟರ್ 1 ಛಾವಾ ಹಿಂದಿಕ್ಕಿ 2025ರಲ್ಲಿ ಅತಿಹೆಚ್ಚು ಗಳಿಕೆ ಮಾಡಿದ ಚಿತ್ರ ಎನಿಸಿಕೊಳ್ಳಲು ಇನ್ನೂ 92.5 ಕೋಟಿ ರೂ ಗಳಿಸಬೇಕಿದೆ.
ಇನ್ನು ದೀಪಾವಳಿ ಪ್ರಯುಕ್ತ ರಜೆ ಇರುವ ಕಾರಣ ಮನೆ ಮಂದಿ ಒಟ್ಟಿಗೆ ಸೇರುವ ಕಾರಣ ಕಾಂತಾರ ವೀಕ್ಷಣೆ ಈ ವಾರವೂ ತುಸು ಹೆಚ್ಚೇ ನಡೆಯಲಿದ್ದು, ಈ ಗಳಿಕೆಯನ್ನು ಮಾಡಿ ದಾಖಲೆ ಬರೆಯುವ ಸಾಧ್ಯತೆಗಳು ಹೆಚ್ಚಿವೆ.
ಅವರೇ ಸಿದ್ದರಾಮಯ್ಯನವರ ಉತ್ತರಾಧಿಕಾರಿಯಾಗಲಿ ಬಿಡಿ ನಮ್ಮ ಬಯಕೆಯೂ ಅದೇ ಎಂದ ಕೆಎನ್ ರಾಜಣ್ಣ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


