ಅಫ್ಘಾನಿಸ್ತಾನ ಹಾಗೂ ಪಾಕಿಸ್ತಾನಗಳ ನಡುವಿನ ಗಡಿ ಬಿಕ್ಕಟ್ಟಿನಿಂದ ಉಂಟಾದ ದಾಳಿಯಲ್ಲಿ ಅಫ್ಘಾನಿಸ್ತಾನದ ಯುವ ಕ್ರಿಕೆಟಿಗರು ಬಲಿಯಾಗಿದ್ದಾರೆ.
ದಾಳಿಯಲ್ಲಿ ಕನಿಷ್ಟ 10 ಮಂದಿ ಸಾವನ್ನಪ್ಪಿದ್ದು, ಈ ಪೈಕಿ ಮೂವರು ಕ್ರಿಕೆಟಿಗರು ಸೇರಿದ್ದಾರೆ ಎಂದು ಅಫ್ಘಾನಿಸ್ತಾನ ಕ್ರಿಕೆಟ್ ಬೋರ್ಡ್ ತಿಳಿಸಿದೆ. ಫ್ರೆಂಡ್ಲಿ ಪಂದ್ಯದಲ್ಲಿ ಆಡುವ ಸಲುವಾಗಿ ಉರ್ಗುನ್ನಿಂದ ಪೂರ್ವ ಪಕ್ಟಿಕಾ ಪ್ರಾಂತ್ಯದಲ್ಲಿರುವ ಶರಾನಾಗೆ ಪ್ರಯಾಣ ಬೆಳೆಸಿದ್ದ ಮೂವರು ಕ್ರಿಕೆಟಿಗರಾದ ಕಬೀರ್, ಸಿಬ್ಘತುಲ್ಲಾ ಹಾಗೂ ಹರೂನ್ ಮೃತರು.
ಹೀಗೆ ಕ್ರಿಕೆಟ್ ಆಡಲೆಂದು ತೆರಳಿದ್ದವರು ಪಾಕಿಸ್ತಾನದ ದಾಳಿಗೆ ಬಲಿಯಾಗಿದ್ದು, ಈ ಕುರಿತು ಐಸಿಸಿ ಅಧ್ಯಕ್ಷ ಜಯ್ ಶಾ ಪ್ರತಿಕ್ರಿಯಿಸಿದ್ದಾರೆ. ಈ ಯುವ ಕ್ರಿಕೆಟಿಗರ ಸಾವಿನ ಸುದ್ದಿ ಕೇಳಿ ಮನಸ್ಸಿಗೆ ನೋವಾಯಿತು ಎಂದಿರುವ ಜಯ್ ಶಾ ಪಾಕಿಸ್ತಾನದ ಅರ್ಥಹೀನ ಹಿಂಸಾತ್ಮಕ ದಾಳಿಯಿಂದ ಅವರ ಕನಸು ನುಚ್ಚು ನೂರಾಗಿದೆ ಎಂದು ಪಾಕ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಯುವ ಕ್ರಿಕೆಟಿಗರ ಸಾವು ಕೇವಲ ಅಫ್ಘಾನಿಸ್ತಾನ ಕ್ರಿಕೆಟ್ಗೆ ಮಾತ್ರವಲ್ಲ ಇಡೀ ವಿಶ್ವ ಕ್ರಿಕೆಟ್ಗೆ ನಷ್ಟ, ಅಫ್ಘಾನಿಸ್ತಾನ ಕ್ರಿಕೆಟ್ ಜತೆ ನಾವು ನಿಲ್ಲಲಿದ್ದೇವೆ ಎಂದು ಜಯ್ ಶಾ ಬರೆದುಕೊಂಡಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


