Friday, November 6, 2026
spot_img
More
    spot_img
    HomeSportsCricketನನಗೆ ಏಕದಿನ ತಂಡದ ನಾಯಕತ್ವ ಬೇಕು ಎಂದ ಭಾರತದ ಆಟಗಾರ; ನೀನು ಮಾತ್ರ ಬೇಡ ಸ್ವಾಮಿ...

    ನನಗೆ ಏಕದಿನ ತಂಡದ ನಾಯಕತ್ವ ಬೇಕು ಎಂದ ಭಾರತದ ಆಟಗಾರ; ನೀನು ಮಾತ್ರ ಬೇಡ ಸ್ವಾಮಿ ಎಂದ ನೆಟ್ಟಿಗರು!

    ನಾಳೆಯಿಂದ ( ಅಕ್ಟೋಬರ್‌ 19 ) ಬಹು ನಿರೀಕ್ಷಿತ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ 3 ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದೆ.

    ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಟೆಸ್ಟ್‌ ಹಾಗೂ ಟಿ ಟ್ವೆಂಟಿ ಎರಡೂ ಮಾದರಿಗಳಿಗೂ ರಾಜೀನಾಮೆ ನೀಡಿರುವುದರಿಂದ ಕೇವಲ ಏಕದಿನ ಮಾದರಿಯಲ್ಲಿ ಆಡುತ್ತಿದ್ದು, ಈ ಸರಣಿಯಲ್ಲಿ ಅವರ ಭಾಗವಹಿಸುವಿಕೆ ಇರುವುದರಿಂದ ಈ ಸರಣಿ ಭಾರೀ ಸದ್ದು ಮಾಡುತ್ತಿದೆ.

    ಇನ್ನು ಏಕದಿನ ತಂಡದ ನಾಯಕತ್ವದಿಂದ ರೋಹಿತ್‌ ಶರ್ಮಾ ಕೆಳಗಿಳಿದಿದ್ದು, ಈ ಸರಣಿಯಲ್ಲಿ ತಂಡವನ್ನು ಶುಬ್‌ಮನ್‌ ಗಿಲ್‌ ನಿರ್ವಹಿಸಲಿದ್ದಾರೆ. ಯುವ ಆಟಗಾರ ಶುಬ್‌ಮನ್‌ ಗಿಲ್‌ಗೆ ನಾಯಕತ್ವ ನೀಡುವ ಬಿಸಿಸಿಐನ ಆಯ್ಕೆಗೆ ಮಿಶ್ರ ಪ್ರತಿಕ್ರಿಯೆಗಳೇ ವ್ಯಕ್ತವಾಗುತ್ತಿದ್ದು, ದೈತ್ಯ ಆಸ್ಟ್ರೇಲಿಯಾ ತಂಡದ ವಿರುದ್ಧ ಗಿಲ್‌ ಹೇಗೆ ತಂತ್ರ ರೂಪಿಸಲಿದ್ದಾರೆ ಎಂಬ ಕುತೂಹಲ ಕ್ರಿಕೆಟ್‌ ಅಭಿಮಾನಿಗಳಲ್ಲಿ ಮನೆ ಮಾಡಿದೆ.

    ಹೀಗಿರುವಾಗ ಭಾರತದ ಮತ್ತೋರ್ವ ಆಟಗಾರ ಸೂರ್ಯಕುಮಾರ್‌ ಯಾದವ್‌ ನ್ಯೂಸ್‌ 24 ಸ್ಪೋರ್ಟ್ಸ್‌ ನಡೆಸಿದ ಸಂದರ್ಶನದಲ್ಲಿ ಏಕದಿನ ನಾಯಕತ್ವದ ಕುರಿತು ಮಾತನಾಡಿದ್ದಾರೆ. ʼನನಗನಿಸುತ್ತೆ ನಾನೇದರು ಏಕದಿನ ಮಾದರಿಯಲ್ಲಿ ಚೆನ್ನಾಗಿ ಆಡಿದ್ದರೆ ಏಕದಿನ ನಾಯಕತ್ವ ಸಿಗುತ್ತಿತ್ತು ಎನಿಸುತ್ತದೆ. ಈಗಲೂ ನಾನು ಆ ಪ್ರಯತ್ನ ಮಾಡುತ್ತೇನೆ, ಏಕದಿನ ಆಡುವುದು ನನಗಿಷ್ಟ, ನನಗನಿಸುತ್ತೆ ನಾನಿನ್ನೂ ಈ ಮಾದರಿಯಲ್ಲಿ ಆಡಬಹುದು ಎಂದು. ಈಗಲೂ ನಾನು ನನ್ನ ಪತ್ನಿಗೆ ಕರೆ ಮಾಡಿ ರೋಹಿತ್‌ ರಾಜೀನಾಮೆ ನೀಡಿದ ಸಂದರ್ಭದಲ್ಲಿ ನಾನೇನಾದರೂ ಚೆನ್ನಾಗಿ ಆಡಿದ್ದರೆ ಏಕದಿನ ನಾಯಕತ್ವದ ಸ್ಪರ್ಧಿಯಾಗಿರುತ್ತಿದ್ದೆ ಎಂದು ಹೇಳುತ್ತಿದ್ದೆʼ ಎಂದಿದ್ದಾರೆ.

    ಈ ಹೇಳಿಕೆ ಕುರಿತು ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಒಂದನ್ನು ಹಂಚಿಕೊಳ್ಳಲಾಗಿದ್ದು, ಇದಕ್ಕೆ ನೆಟ್ಟಿಗರು ವ್ಯಂಗ್ಯವಾಡಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಕೇವಲ 25.76 ಸರಾಸರಿಯಲ್ಲಿ ಆಟವಾಡಿ ಒಂದೇ ಒಂದು ಶತಕವನ್ನೂ ಸಹ ಬಾರಿಸದ ನೀವು ಯಾವುದೇ ಕಾರಣಕ್ಕೂ ನಾಯಕತ್ವದ ಕುರಿತು ಚಿಂತೆ ಮಾಡಲು ಹೋಗಬೇಡಿ ಎಂದು ಟಾಂಗ್‌ ಕೊಟ್ಟಿದ್ದಾರೆ.

    ರಶ್ಮಿಕಾ ‘ಛಾವಾ’ ಈ ವರ್ಷದ ಅತಿಹೆಚ್ಚು ಕಲೆಕ್ಷನ್‌ ಮಾಡಿದ ಚಿತ್ರ; ಈ ದಾಖಲೆ ಮುರಿಯುತ್ತಾ ಕಾಂತಾರ?


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search