Friday, November 6, 2026
spot_img
More
    spot_img
    HomeInternationalʼನೋ ಕಿಂಗ್ಸ್‌ʼ ಘೋಷಣೆ ಕೂಗಿ ಟ್ರಂಪ್‌ ವಿರುದ್ಧ ಜನಾಕ್ರೋಶ: ಅಮೆರಿಕಾದ 2500 ಸ್ಥಳಗಳಲ್ಲಿ ಬೃಹತ್‌ ಪ್ರತಿಭಟನೆ

    ʼನೋ ಕಿಂಗ್ಸ್‌ʼ ಘೋಷಣೆ ಕೂಗಿ ಟ್ರಂಪ್‌ ವಿರುದ್ಧ ಜನಾಕ್ರೋಶ: ಅಮೆರಿಕಾದ 2500 ಸ್ಥಳಗಳಲ್ಲಿ ಬೃಹತ್‌ ಪ್ರತಿಭಟನೆ

    ಟ್ರಂಪ್‌ ಆಡಳಿತ ವೈಖರಿ ಕುರಿತು ಜನರು ಆಕ್ರೋಶ ಹೊರಹಾಕಿದ್ದು, ನೋ ಕಿಂಗ್ಸ್‌ ಎಂಬ ಬರಹವುಳ್ಳ ಬೋರ್ಡ್‌ ಹಿಡಿದು ರಸ್ತೆಗಿಳಿದಿದ್ದಾರೆ.

    ಶನಿವಾರ ( ಅಕ್ಟೋಬರ್‌ 18 ) ಬೆಳಗ್ಗೆ ವಿವಿಧ ನಗರಗಳಲ್ಲಿ ಶುರುವಾದ ಈ ಪ್ರತಿಭಟನೆಯಲ್ಲಿ ಎಲ್ಲ ವಯಸ್ಸಿನವರೂ ಭಾಗವಹಿಸಿದ್ದು, ಟ್ರಂಪ್‌ ರಾಜನ ಮಾದರಿಯ ಆಳ್ವಿಕೆಯ ಯತ್ನ ಹಾಗೂ ಭ್ರಷ್ಟಾಚಾರವನ್ನು ಸಹಿಸಲಾರೆವು ಎಂದು ಘೋಷಣೆ ಕೂಗಿದ್ದಾರೆ.

    ಬೆಳ್ಳಂಬೆಳಗ್ಗೆಯೇ ಟೈಮ್‌ ಸ್ಕ್ವೇರ್‌ನಲ್ಲಿ ಸಾವಿರಾರು ಜನರು ಕಿಕ್ಕಿರಿದು ಟ್ರಂಪ್‌ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇನ್ನು ಟ್ರಂಪ್‌ ಪಡೆ ಈ ಪ್ರತಿಭಟನೆಯನ್ನು ಎದುರಿಸಲು ನ್ಯಾಷನಲ್‌ ಗಾರ್ಡ್‌ಗಳನ್ನು ನೇಮಿಸಿದೆ.

    ಟ್ರಂಪ್‌ ಅನಾಮಧೇಯ ವ್ಯಕ್ತಿಗಳನ್ನು ಕಳುಹಿಸಿ ಬೇಕಾದ ಪ್ರದೇಶಗಳಲ್ಲಿ ಬೇಹುಗಾರಿಕೆ ಮಾಡಿಸುತ್ತಿದ್ದು, ವಲಸಿಗರನ್ನು ಅವಮಾನಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

    ಅಮೆರಿಕಾದಲ್ಲಿ ರಾಜರಿಲ್ಲ, ನಾವು ಗಲಭೆ, ಭ್ರಷ್ಟಾಚಾರ ಹಾಗೂ ಕ್ರೌರ್ಯದ ವಿರುದ್ಧ ಹೋರಾಡುವುದನ್ನು ನಿಲ್ಲಿಸುವುದಿಲ್ಲ ಎಂದು ಪ್ರತಿಭಟನಾಕಾರರು ಬ್ಯಾನರ್‌ಗಳನ್ನು ಹಿಡಿದು ಪ್ರತಿಭಟಿಸಿದ್ದಾರೆ.

    ಬೆರ್ಲಿನ್‌, ಮ್ಯಾಡ್ರಿಡ್ ಹಾಗೂ ರೋಮ್‌ ನಗರಗಳ ಬೀದಿಗಳಲ್ಲಿ ಬೃಹತ್‌ ಮಟ್ಟದಲ್ಲಿ ಪ್ರತಿಭಟನಾಕಾರರು ಟ್ರಂಪ್ ವಿರುದ್ಧ ಸಿಡಿದೆದ್ದಿರುವ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಟ್ರಂಪ್‌ ವಿರುದ್ಧ ಜನರ ಆಕ್ರೋಶ ಎಷ್ಟಿದೆ ಎಂಬುದು ಜೂನ್‌ ಬಳಿಕ ಮತ್ತೊಮ್ಮೆ ಬಹಿರಂಗವಾಗಿದೆ. ಕಳೆದ ಜೂನ್‌ನಲ್ಲೂ ಸಹ ಇದೇ ರೀತಿಯ ನೋ ಕಿಂಗ್ಸ್‌ ಪ್ರತಿಭಟನೆಯನ್ನು ಜನರು ನಡೆಸಿದ್ದರು.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search