ಮುಂಬೈ: ನಗರದ ಗೇಟ್ ವೇ ಆಫ್ ಇಂಡಿಯಾ ಬಳಿ ಬೋಟ್ ಹಾಗೂ ಫೆರ್ರಿ ನಡುವೆ ಡಿಕ್ಕಿ ಸಂಭವಿಸಿದ್ದು, ಪರಿಣಾಮ ಬೋಟ್ ನಲ್ಲಿದ್ದ 13 ಮಂದಿ ಸಾವನ್ನಪ್ಪಿದ್ದಾರೆ.
ದುರಂತದಲ್ಲಿ 10 ಮಂದಿ ಸಾರ್ವಜನಿಕರು ಹಾಗೂ ಮೂವರು ನೌಕಾಪಡೆ ಸಿಬ್ಬಂದಿಗಳು ಸಾವನ್ನಪ್ಪಿದ್ದಾರೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ತಿಳಿಸಿದ್ದಾರೆ.
ಬಚರ್ ದ್ವೀಪದ ಸಮೀಪ ಮಧ್ಯಾಹ್ನ ಸುಮಾರು 3.55ಕ್ಕೆ ಈ ಘಟನೆ ಸಂಭವಿಸಿದ್ದು, ಘಟನೆಯಲ್ಲಿ 101 ಮಂದಿಯನ್ನು ರಕ್ಷಿಸಿ ಅಗತ್ಯ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ಇಬ್ಬರಿಗೆ ನೌಕಾಪಡೆ ಆಸ್ಪತ್ರೆಯ ಐಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
11 ವಿಮಾನ ಹಾಗೂ 4 ಹೆಲಿಕಾಪ್ಟರ್ ಬಳಸಿ ರಕ್ಷಣಾ ಕಾರ್ಯ ನಡೆಸಲಾಗುತ್ತಿದ್ದು, ಕೋಸ್ಟ್ ಗಾರ್ಡ್ಸ್ ಹಾಗೂ ಪೊಲೀಸರು ಸಹ ಕೈ ಜೋಡಿಸಿದ್ದಾರೆ.
ಇನ್ನು ದುರಂತದಲ್ಲಿ ನಾಪತ್ತೆಯಾಗಿರುವವರ ಸಂಪೂರ್ಣ ವಿವರ ನಾಳೆ ಬೆಳಗ್ಗೆ ಸಿಗಲಿದೆ ಎಂದು ದೇವೇಂದ್ರ ಫಡ್ನವಿಸ್ ತಿಳಿಸಿದ್ದು, ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಪೊಲೀಸರು ಹಾಗೂ ನೌಕಾಪಡೆ ಸಿಬ್ಬಂದಿ ದುರಂತದ ಕುರಿತ ಸಮಗ್ರ ತನಿಖೆ ನಡೆಸಲಿದ್ದು, ಘಟನೆ ಹಿಂದಿನ ಕಾರಣ ಹೊರಬೀಳಲಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


