Saturday, September 19, 2026
spot_img
More
    spot_img
    HomeLatest newsಅಮೆರಿಕಾಗೆ ಹಾರಿದ ಶಿವಣ್ಣ | ಯಾವ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ?

    ಅಮೆರಿಕಾಗೆ ಹಾರಿದ ಶಿವಣ್ಣ | ಯಾವ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ?

    ಸ್ಯಾಂಡಲ್‌ವುಡ್‌ ಹಿರಿಯ ನಟ ಶಿವರಾಜ್‌ಕುಮಾರ್‌ ಅನಾರೋಗ್ಯಕ್ಕೆ ಒಳಗಾಗಿದ್ದು, ಸದ್ಯ ಶಸ್ತ್ರಚಿಕಿತ್ಸೆ ಮಾಡಿಸಲು ಅಮೆರಿಕಾಗೆ ಪಯಣ ಬೆಳೆಸಿದ್ದಾರೆ.

    Advertisement

    ಹೌದು, ನಟ ಶಿವರಾಜ್ಕುಮಾರ್ ಆರೋಗ್ಯ ಕೈ ಕೊಟ್ಟಿದೆ ಎನ್ನುವ ಸುದ್ದಿ ಕೆಲ ತಿಂಗಳಿಂದ ಹರಿದಾಡಿತ್ತು. ಬಳಿಕ ಶಿವಣ್ಣ ಅವರೇ ತನ್ನ ಆರೋಗ್ಯದ ಬಗ್ಗೆ ಮಾತಾಡಿದ್ರು. ಬಚ್ಚಿಟ್ಟುಕೊಳ್ಳೋದು ಏನಿಲ್ಲ. ಆರೋಗ್ಯ ಹದಗೆಟ್ಟಿದೆ. ಆರಂಭದಲ್ಲಿ ನನಗೂ ಭಯವಾಯ್ತು. ಬಳಿಕ ಮನೆಯವರು ಧೈರ್ಯ ತುಂಬಿದ್ರು. ಆಪರೇಷನ್ ಮಾಡಿಸಬೇಕಿದೆ ಎಂದು ಶಿವಣ್ಣ ಹೇಳಿಕೊಂಡಿದ್ರು.

    ಸದ್ಯ ಅಮೆರಿಕಾ ತಲುಪಿರುವ ಶಿವಣ್ಣ ಮಿಯಾಮಿ ಕ್ಯಾನ್ಸರ್ ಇನಿಸ್ಟಿಟ್ಯೂಟ್‌ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ದಾಖಲಾಗಲಿದ್ದು, ಶಿವರಾಜ್‌ಕುಮಾರ್‌ಗೆ ಅಲ್ಲಿ ಭಾರತ ಮೂಲದ ಮುರುಗೇಶ್ ನೇತೃತ್ವದ ತಜ್ಞವೈದ್ಯರ ತಂಡದಿಂದ ಚಿಕಿತ್ಸೆ ನಡೆಯಲಿದೆ. ಮಿಯಾಮಿ ಕ್ಯಾನ್ಸರ್ ಇನಿಸ್ಟಿಟ್ಯೂಟ್‌ ನೆಕ್ಷ್ಟ್‌ ಜನರೇಶನ್ ಕ್ಯಾನ್ಸರ್ ಚಿಕಿತ್ಸಾ ಆಸ್ಪತ್ರೆಯಾಗಿದ್ದು, ವೈದ್ಯಕೀಯ ಆರೈಕೆ, ಸಂಶೋಧನೆ, ಹಾಗೂ ಆಧುನಿಕ ತಂತ್ರಜ್ಞಾನಕ್ಕೆ ಹೆಸರುವಾಸಿಯಾಗಿದೆ.

    ವಿಶ್ವಮಾನ್ಯತೆ ಪಡೆದ ಆಂಕೋಲಾಜಿಸ್ಟ್‌ಗಳೆಂದು ಕರೆಯಲಾಗುವ ತಜ್ಞ ವೈದ್ಯರ ತಂಡ ಇದೆ. ಇವರು ಜಗತ್ತಿನ ಉನ್ನತ ಕ್ಯಾನ್ಸರ್ ಕೇಂದ್ರಗಳಿಂದ ನೇಮಕಗೊಂಡ ವೈದ್ಯರುಗಳಾಗಿದ್ದು, ಇಲ್ಲಿ ಶಸ್ತ್ರ ಚಿಕಿತ್ಸೆಯಿಂದ ಗುಣವಾಗುವ ಪ್ರಮಾಣ ಹೆಚ್ಚಿದೆ. ಈ ಕಾರಣಕ್ಕೆ ಹಲವು ದೇಶಗಳಿಂದ ಚಿಕಿತ್ಸೆಗೆ ಇಲ್ಲಿಗೆ ಆಗಮಿಸುತ್ತಿದ್ದಾರೆ.

    ಸುದೀಪ್‌ ಭಾವುಕ:

    ಅಮೆರಿಕಾಗೆ ತೆರಳಿದ ಶಿವಣ್ಣ ಬೇಗ ಹುಷಾರಾಗಿ ಬರಲಿ ಅಂತ ಅಭಿಮಾನಿಗಳು ಕೂಡ ಪ್ರಾರ್ಥಿಸಿದ್ದಾರೆ. ಜೊತೆಗೆ ಕುಟುಂಬಸ್ಥರು, ಸಿನಿಮಾರಂಗದ ಗಣ್ಯರು ಹಾಗೂ ರಾಜಕಾರಣಿಗಳು ಕೂಡ ಶಿವಣ್ಣನ ಮನೆಗೆ ಭೇಟಿ ನೀಡಿದ್ರು. ಶಿವರಾಜ್ ಕುಮಾರ್ ಹಾಗೂ ಸುದೀಪ್ ಆತ್ಮೀಯರಾಗಿದ್ದಾರೆ. ಇಬ್ಬರ ನಡುವೆ ಅಣ್ಣ-ತಮ್ಮನ ಬಾಂಧವ್ಯವಿದೆ. ಶಿವಣ್ಣ ಪತ್ನಿ ಗೀತಾ ಅವರನ್ನು ಗೀತಾಕ್ಕ ಎಂದೇ ಕರೆಯುವ ಸುದೀಪ್ ಇಬ್ಬರ ಮೇಲೆ ಅಷ್ಟೇ ಪ್ರೀತಿ ಗೌರವ ಹೊಂದಿದ್ದಾರೆ. ಹೀಗಾಗಿ ಇಂದು ಕಿಚ್ಚ ಸುದೀಪ್, ಶಿವರಾಜ್ ಕುಮಾರ್ ಮನೆಗೆ ಭೇಟಿ ನೀಡಿದ್ರು.

    ಶಿವರಾಜ್ ಕುಮಾರ್ ಅಮೆರಿಕಾಗೆ ತೆರಳುತ್ತಿರುವ ಹಿನ್ನೆಲೆ ಮನೆಗೆ ಭೇಟಿ ನೀಡಿದ ಕಿಚ್ಚ ಸುದೀಪ್, ಕೆಲ ಕಾಲ ಶಿವಣ್ಣನ ಜೊತೆ ಮಾತಾಡಿದ್ರು. ಬಳಿಕ ಪ್ರೀತಿಯ ಅಪ್ಪುಗೆ ನೀಡಿದ್ರು. ಈ ವೇಳೆ ಸುದೀಪ್ ಭಾವುಕರಾದಂತೆ ಕಂಡ್ರು. ಶಿವಣ್ಣನನ್ನು ಸುದೀಪ್ ಅಣ್ಣನ ಸ್ಥಾನದಲ್ಲಿ ನೋಡ್ತಾರೆ. ಹೀಗಾಗಿ ಕೊಂಚ ಭಾವುಕರಾದಂತೆ ಕಾಣ್ತಿದೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading