Monday, November 2, 2026
spot_img
More
    spot_img
    HomeLatest newsಸದನದಲ್ಲಿ ಉತ್ತರಿಸಲು ಸಚಿವರಿಲ್ಲದ್ದಕ್ಕೆ ಸರ್ಕಾರದ ವಿರುದ್ಧ ಸಭಾಪತಿ ಹೊರಟ್ಟಿ ಕಿಡಿ

    ಸದನದಲ್ಲಿ ಉತ್ತರಿಸಲು ಸಚಿವರಿಲ್ಲದ್ದಕ್ಕೆ ಸರ್ಕಾರದ ವಿರುದ್ಧ ಸಭಾಪತಿ ಹೊರಟ್ಟಿ ಕಿಡಿ

    ಬೆಳಗಾವಿ: ಸದನದಲ್ಲಿ ಉತ್ತರಿಸಬೇಕಾದ ಸಚಿವರು ಇಲ್ಲದಿದ್ದರೆ,ಅನಿವಾರ್ಯವಾಗಿ ಸದನವನ್ನು ಮುಂದೂಡಬೇಕಾಗುತ್ತದೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅವರು ಸರಕಾರಕ್ಕೆ ಎಚ್ಚರಿಕೆ ನೀಡಿದ ಪ್ರಸಂಗ ಜರುಗಿತು.

    ಬೆಳಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿಯ ಸದಸ್ಯ ಸಿ.ಟಿ.ರವಿ ಅವರು ಗೃಹ ಸಚಿವರಿಗೆ ಪ್ರಶ್ನೆ ಕೇಳಲು ಸೂಚಿಸಿದರು.

    ಈ ವೇಳೆ ರವಿ, ಪ್ರಶ್ನೆ ಕೇಳಲು ಹಲವು ಸದಸ್ಯರು ಇದ್ದರೆ, ಉತ್ತರಿಸಲು ಇಬ್ಬರು ಸಚಿವರು ಹಾಗೂ ಕೆಲವೇ ಕೆಲವು ಸದಸ್ಯರು ಇದ್ದಾರೆ. ಹೀಗಾದರೆ, ನಾವು ಯಾರಿಗೆ ಪ್ರಶ್ನೆ ಕೇಳಬೇಕು ಎಂದು ಆಕ್ರೊಶ ವ್ಯಕ್ತಪಡಿಸಿದರು.

    ಪ್ರತಿದಿನ ಪ್ರಶ್ನೊ?ತ್ತರ ಅವಧಿಯಲ್ಲಿ ಇಂತಹ ಸಚಿವರು ಹಾಗೂ ಅಧಿಕಾರಿಗಳು ಕಡ್ಡಾಯವಾಗಿ ಇರಲೇಬೇಕು ಎಂದು ಪೀಠದಿಂದ ಆದೇಶ ನೀಡುತ್ತಿ?ರಿ. ಹಾಗಾದರೆ, ನಿಮ ಮಾತಿಗೆ ಬೆಲೆ ಇಲ್ಲವೇ ಎಂದು ಪ್ರಶ್ನೆಸಿದರು.

    ಇದಕ್ಕೆ ಸಿಡಿಮಿಡಿಗೊಂಡ ಸಭಾಪತಿ ಹೊರಟ್ಟಿ ಅವರು, ಅಧಿವೇಶನ ನಡೆಯುತ್ತಿರುವಾಗ ಸಚಿವರು ಸದನಕ್ಕೆ ಬರಬೇಕು ಅಲ್ಲವೇ? ಅವರ ಕಾರ್ಯದರ್ಶಿ ಇಲ್ಲವೇ ಪಿ.ಎ ಗಳು ಈಗ ಬರುತ್ತಾರೆ, ಆಗ ಬರುತ್ತಾರೆ ಎಂದು ಹಾರಿಕೆ ಕೊಡುತ್ತಾರೆ. ಅವರಿಗೆ ಜವಬ್ದಾರಿ ಇಲ್ಲವೇ ಎಂದು ಸಭಾನಾಯಕರನ್ನು ತರಾಟೆಗೆ ತೆಗೆದುಕೊಂಡರು.

    ಆಗ ಸಭಾನಾಯಕ ಭೋಸರಾಜ್ ಅವರು ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳುತ್ತೆ?ವೆ. ಸದನವನ್ನು ಮುಂದೂಡಬೇಡಿ. ಸದನದಲ್ಲಿ ಸಚಿವರು ಮತ್ತು ಸದಸ್ಯರನ್ನು ಕರೆಸುವುದಾಗಿ ತಿಳಿಸಿದರು.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search