ಬೆಳಗಾವಿ: ಸಾಮಾಜಿಕ ಬಹಿಷ್ಕಾರದಂತಹ ಕೃತ್ಯಗಳಲ್ಲಿ ಭಾಗವಹಿಸುವ ವ್ಯಕ್ತಿಗಳಿಗೆ ಮೂರು ವರ್ಷಗಳಿಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಮತ್ತು ಒಂದು ಲಕ್ಷ ರೂಪಾಯಿಗಳವರೆಗೂ ದಂಡ ವಿಧಿಸುವ ಕರ್ನಾಟಕ ಸಾಮಾಜಿಕ ಬಹಿಷ್ಕಾರ ಪ್ರತಿಬಂಧ, ನಿಷೇಧ ಮತ್ತು ಪರಿಹಾರ ವಿಧೇಯಕಕ್ಕೆ ತಿದ್ದುಪಡಿಗಳೊಂದಿಗೆ ವಿಧಾನ ಸಭೆಯಲ್ಲಿ ಸರ್ವಾನುಮತದ ಅಂಗೀಕಾರ ದೊರೆಯಿತು.
ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ವಿಧೇಯಕವನ್ನು ಪರ್ಯಾಲೋಚನೆಗೆ ಮಂಡಿಸಿ, ವಿವರಣೆ ನೀಡಿದರು. ಇದೊಂದು ಐತಿಹಾಸಿಕ ಕಾಯ್ದೆಯಾಗಿದ್ದು, ಅನೇಕ ಭಾಷೆ, ಜಾತಿ, ಧರ್ಮಗಳ ನಡುವೆಯೂ ಏಕತೆ ಕಾಣುವ ಉದ್ದೇಶವನ್ನು ಹೊಂದಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರು ತಮ ಬಾಲ್ಯದಲ್ಲೆ? ಬಹಿಷ್ಕಾರಕ್ಕೆ ಒಳಗಾಗಿ ನೋವುಂಡಿದ್ದರು. ಆದರೂ ಸಮಾಜದ ಮೇಲೆ ದ್ವೆ?ಷ ತೀರಿಸಿಕೊಳ್ಳದೆ ಭಾವೈಕ್ಯತೆಯ ಸಂವಿಧಾನವನ್ನು ದೇಶಕ್ಕೆ ಕೊಟ್ಟರು ಎಂದರು.
ಭೂ ಮಾಲೀಕರು, ಬಲಾಢ್ಯರು, ಆರ್ಥಿಕವಾಗಿ ಸಬಲರಾಗಿರುವವರು ಬಡವರನ್ನು ಶೋಷಿಸುವುದು ಮೊದಲಿನಿಂದಲೂ ನಡೆದು ಬಂದಿದೆ. ಸಾಮಾಜಿಕ ಬಹಿಷ್ಕಾರ ಎಂಬುದು ನಾಗರಿಕರ ಹಕ್ಕುಗಳ ಉಲ್ಲಂಘನೆಯಾಗಿದೆ. ವ್ಯಾಪಾರ, ಕೃಷಿ ಸೇರಿದಂತೆ ಬೇರೆಬೇರೆ ವಲಯಗಳಲ್ಲಿ ಭ್ರಾತೃತ್ವ ಉಳಿಸಿಕೊಳ್ಳಲು ಈ ಕಾಯ್ದೆಯ ಅಗತ್ಯವಿದೆ. ಪ್ರತಿಯೊಬ್ಬ ವ್ಯಕ್ತಿಗೂ ಬೇರೆಯವರ ಜೊತೆ ಬೆರೆಯುವ, ಕೃಷಿ ಮಾಡುವ ಹಾಗೂ ದುಡಿಯುವ ಹಕ್ಕುಗಳಿವೆ. ಅದಕ್ಕೆ ಬಲಾಢ್ಯರು, ಸಾಮಾಜಿಕ ಬಹಿಷ್ಕಾರದ ಹೆಸರಿನಲ್ಲಿ ಅಡ್ಡಿಯುಂಟು ಮಾಡಿದಾಗ ಸಂತ್ರಸ್ತರು ಆರ್ಥಿಕ ತೊಂದರೆಗೆ ಒಳಗಾಗುತ್ತಾರೆ ಎಂದು ವಿವರಿಸಿದರು.
ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಕಾಯ್ದೆಯನ್ನು ಬೆಂಬಲಿಸಿ ಅಸ್ಪಶ್ಯತೆ ಮತ್ತು ಸಾಮಾಜಿಕ ಬಹಿಷ್ಕಾರ ಸಮಾಜದ ಪಿಡುಗುಗಳು. ಸಾಯುವ ಸ್ಥಿತಿಯಲ್ಲಿ ಇರುವವರಿಗೆ ರಕ್ತದ ಅಗತ್ಯ ಕಂಡು ಬಂದರೆ, ಅದು ಯಾವ ಜಾತಿಯವನಿಗೆ ಸೇರಿದ ರಕ್ತ ಎಂದು ನೋಡುವುದಿಲ್ಲ. ಆದರೆ ಕ್ಷೌರದ ಅಂಗಡಿಗೆ ದಲಿತರು ಬಂದು ಹೋದರು ಎಂಬ ಕಾರಣಕ್ಕೆ ಇತರ ಜಾತಿಯವರು ಬಹಿಷ್ಕಾರ ಹಾಕುವುದನ್ನು ನೋಡಿದ್ದೇವೆ. ಇಂತಹದಕ್ಕೆ ಕಡಿವಾಣ ಹಾಕಲು ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.
ಎಸ್?.ಸುರೇಶ್ ಕುಮಾರ್, ತಡವಾಗಿಯಾದರೂ ಸರ್ಕಾರ ಒಳ್ಳೆಯ ಕಾಯ್ದೆಯನ್ನು ರೂಪಿಸಿದೆ. ಅಸ್ಪಶ್ಯತೆಗಳು ಹೊಸ ಹೊಸ ರೂಪಗಳಲ್ಲಿ ಕಂಡುಬರುತ್ತಿವೆ. ಕಾನೂನಿನಿಂದಷ್ಟೆ? ಇದನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ. ಜನರ ಮಾನಸಿಕತೆಯಲ್ಲೂ ಬದಲಾವಣೆ ತರಬೇಕು ಎಂದರು.
ಬಿಜೆಪಿಯ ಆರಗ ಜ್ಞಾನೇಂದ್ರ, ತಮ ಕ್ಷೇತ್ರದಲ್ಲಿ ಹಿಂದುಳಿದ ವರ್ಗದ ವ್ಯಕ್ತಿಯೊಬ್ಬನಿಗೆ ಸಾಮಾಜಿಕ ಬಹಿಷ್ಕಾರ ಹಾಕಲಾಯಿತು. ನಾನು ಪೊಲೀಸರಿಗೆ ಮಾಹಿತಿ ನೀಡಿ ಕ್ರಮ ಕೈಗೊಳ್ಳಲು ಸೂಚಿಸಿದ್ದೆ. ಸ್ಥಳಕ್ಕೆ ಹೋದ ಪೆÇಲೀಸರು ಸಂತ್ರಸ್ಥನ ತೋಟದಲ್ಲಿ ಕಡಿದು ಹಾಕಲಾಗಿದ್ದ ತೆಂಗಿನ ಮರದಿಂದ ಎಳನೀರು ಕುಡಿದು. ತಪ್ಪಿತಸ್ಥರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ವಾಪಸ್ ಬಂದಿದ್ದರು. ಈಗಲೂ ಕೆಲವು ಕಡೆ ಮರಕ್ಕೆ ಅಥವಾ ಕಂಬಕ್ಕೆ ಕಟ್ಟಿಹಾಕಿ ಹೊಡೆಯುವಂತಹ ಪರಿಸ್ಥಿತಿ ಇದೆ. ಇಂತಹ ಸಂದರ್ಭಗಳಲ್ಲಿ ಕಾನೂನಿನ ಚಾಟಿ ಬೀಸುವುದು ಅನಿವಾರ್ಯ ಎಂದರು.
ಬೆಳ್ತಂಗಡಿ ಕ್ಷೇತ್ರದ ಹರೀಶ್ ಪೂಂಜಾ, ಅಸ್ಪಶ್ಯತೆ ನಿವಾರಣೆಯಾಗಬೇಕು ಎಂಬುದು ಸ್ವಯಂಸೇವಕ ಸಂಘದ ಆಶಯ. ಅದರ ಆಶಯಕ್ಕೆ ಪೂರಕವಾಗಿ ವಿಧೇಯಕವನ್ನು ರೂಪಿಸಲಾಗಿದೆ ಎಂದರು.
ಕಾರ್ಮಿಕ ಸಚಿವ ಸಂತೋಷ್ ಲಾಡ್, ಆರ್ ಎಸ್? ಎಸ್? ನ ಆಶಯಕ್ಕೆ ಪೂರಕವಾಗಿ ವಿಧೇಯಕ ರೂಪಿಸಲಾಗಿಲ್ಲ. ಸಂವಿಧಾನದ ಆಶಯದಂತೆ ಕಾನೂನು ರೂಪಿಸಲಾಗಿದೆ ಎಂದರು.
ಟಿ.ಬಿ.ಜಯಚಂದ್ರ, ವಿಧೇಯಕದಲ್ಲಿ ಸಂತ್ರಸ್ಥರು ಅಥವಾ ಅವರ ಕುಟುಂಬದ ಸದಸ್ಯರು ದೂರು ನೀಡಬೇಕು ಎಂದಿದೆ. ಬಹಿಷ್ಕಾರದ ವಿರುದ್ಧ ದೂರು ನೀಡುವ ಧೈರ್ಯದ ಪರಿಸ್ಥಿತಿ ಸಂತ್ರಸ್ಥರಿಗೆ ಇರುವುದಿಲ್ಲ. ವಿಷಯ ತಿಳಿದ ಪೆÇಲೀಸರು ತಕ್ಷಣ ಸ್ವಯಂ ಪ್ರೆ?ರಿತವಾಗಿ ಕ್ರಮ ಕೈಗೊಳ್ಳಲು ಅವಕಾಶ ಕಲ್ಪಿಸಬೇಕು. ಕಾನೂನು ರೂಪಿಸುವುದು ದೊಡ್ಡದಲ್ಲ ಅದು ಪರಿಣಾಮಕಾರಿಯಾಗಿ ಜಾರಿಯಾಗಬೇಕು. ಹಿಂದೆ ತಾವು ಕಾನೂನು ಸಚಿವರಾಗಿದ್ದಾಗ ಮೂಢನಂಬಿಕೆಗಳ ನಿಷೇಧ ಕಾಯ್ದೆ ಜಾರಿಗೆ ತರಲಾಯಿತು. ಅದರ ಅಡಿ ಈವರೆಗೆ ಎಷ್ಟು ಪ್ರಕರಣಗಳು ದಾಖಲಾಗಿವೆ ಎಂಬುದೇ ಗೊತ್ತಾಗಿಲ್ಲ ಎಂದು ಪ್ರಶ್ನಿಸಿದರು.
ಶಿಕಾರಿಪುರ ಕ್ಷೇತ್ರದ ಬಿ.ವೈ.ವಿಜಯೇಂದ್ರ, ಅಸ್ಪಶ್ಯತೆ ಎಂಬ ಪಿಡುಗನ್ನು ಬುಡ ಸಮೇತ ಕಿತ್ತು ಹಾಕಬೇಕಿದೆ. ಕಾಯ್ದೆ ಸಮರ್ಥವಾಗಿ ಜಾರಿಯಾಗಬೇಕು. ಅದೇ ವೇಳೆ ದುರುಪಯೋಗವಾಗದಂತೆಯೂ ಕಾಳಜಿ ವಹಿಸಬೇಕು ಎಂದರು.
ದಾಸರಹಳ್ಳಿ ಕ್ಷೇತ್ರ ಮುನಿರಾಜು, ಅಸ್ಪಶ್ಯತೆ ಆಚರಣೆ ಅದೇ ಸಮುದಾಯದ ನಾಯಕರಿಂದಲೂ ನಡೆಯುತ್ತಿದೆ. ಶೋಷಿತ ಸಮುದಾಯದ ಹಿರಿಯ ಅಧಿಕಾರಿಗಳು, ರಾಜಕಾರಣಿಗಳ ಮನೆ ಬಾಗಿಲ ಬಳಿ ಅದೇ ಸಮುದಾಯದ ಬಡವರು ಕಾಯುವುದನ್ನು ನಾನು ನೋಡಿದ್ದೇನೆ. ಅಲ್ಲಿಂದಲೂ ಬದಲಾವಣೆಯಾಗಬೇಕು. ಮನಸ್ಸು ಪರಿವರ್ತನೆಯಾಗದೆ ಏನೂ ಸಾಧನೆಯಾಗುವುದಿಲ್ಲ ಎಂದರು.
ಹಗರಿಬೊಮನಹಳ್ಳಿ ಕ್ಷೇತ್ರದ ನೇಮಿ ರಾಜನಾಯಕ್, ಕಾಯ್ದೆ ದುರುಪಯೋಗವಾಗದಂತೆ ಎಚ್ಚರಿಕೆ ವಹಿಸಬೇಕು ಎಂದರು.
ಚರ್ಚೆಯ ಬಳಿಕ ಸಚಿವ ಹೆಚ್.ಸಿ.ಮಹದೇವಪ್ಪ ಪ್ರತಿಕ್ರಿಯಿಸಿ, ಬಹಿಷ್ಕಾರಕ್ಕೆ ಒಳಗಾದವರು ದೂರು ನೀಡಲು ಸಾಧ್ಯವಾಗುವುದಾದರೆ ನೀಡಲಿ. ಇಲ್ಲವಾದರೆ ಸ್ವಯಂ ಪ್ರೆ?ರಿತವಾಗಿ ದೂರು ದಾಖಲಿಸಲು ಮತ್ತು ಸಾಮಾಜಿಕ ಬಹಿಷ್ಕಾರ ಸಂದರ್ಭದಲ್ಲಿ ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧವೂ ಕ್ರಮ ಜರುಗಿಸಲು ಅವಕಾಶ ಕಲ್ಪಿಸಲಾಗುವುದು. ಕಾನೂನು ದುರುಪಯೋಗವಾಗದಂತೆ ಎಚ್ಚರಿಕೆ ವಹಿಸುವುದಾಗಿ ಭರವಸೆ ನೀಡಿದರು.
ಬಿ.ಆರ್.ಪಾಟೀಲ್, ಸಿ.ಎನ್.ಬಾಲಕೃಷ್ಣ, ಚನ್ನಬಸಪ್ಪ, ದುರ್ಯೋಧನ ಐಹೊಳೆ, ಶೈಲೇಂದ್ರ ಬೆಲ್ದಾಳೆ, ಸಿಮೆಂಟ್ ಮಂಜು ಮತ್ತಿತರರು ಕಾಯ್ದೆಯನ್ನು ಬೆಂಬಲಿಸಿ ಮಾತನಾಡಿದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


