Sunday, November 1, 2026
spot_img
More
    spot_img
    HomeLatest newsಚುನಾವಣೆಗೂ ಮುನ್ನ ಬಿಜೆಪಿ ಸೇರಿದ ರಾಹುಲ್ ಗಾಂಧಿ ಆಪ್ತ ನಾಯಕನ ಪತ್ನಿ

    ಚುನಾವಣೆಗೂ ಮುನ್ನ ಬಿಜೆಪಿ ಸೇರಿದ ರಾಹುಲ್ ಗಾಂಧಿ ಆಪ್ತ ನಾಯಕನ ಪತ್ನಿ

    ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆಪ್ತ ನಾಯಕರಾಗಿದ್ದ ರಾಜ್ಯಸಭಾ ಮಾಜಿ ಸಂಸದ ರಾಜೀವ್ ಸತವ್ ಪತ್ನಿ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಮಹಾರಾಷ್ಟ್ರ ವಿಧಾನ ಪರಿಷತ್‌ಗೆ ನಾಮ ನಿರ್ದೇಶನಗೊಂಡಿದ್ದ ಪ್ರದ್ನ್ಯಾ ಸತವ್ ಎಂಎಲ್‌ಸಿ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ.

    ಗುರುವಾರ ಪ್ರದ್ನ್ಯಾ ಸತವ್ ವಿಧಾನ ಪರಿಷತ್ ಸಭಾಪತಿ ರಾಮ್ ಶಿಂಧೆಯನ್ನು ಭೇಟಿ ಮಾಡಿದರು. ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಪ್ರದ್ನ್ಯಾ ಸತವ್ ಸದಸ್ಯತ್ವ ಅವಧಿ 2030ರ ತನಕ ಇತ್ತು. ಆದರೆ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಅವರು, ಎಂಎಲ್‌ಸಿ ಸ್ಥಾನಕ್ಕೂ ರಾಜೀನಾಮೆ ಕೊಟ್ಟಿದ್ದಾರೆ.

    ಮಹಾರಾಷ್ಟ್ರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಕೆಲವೇ ದಿನಗಳು ಇರುವಾಗ ಪ್ರದ್ನ್ಯಾ ಸತವ್ ರಾಜೀನಾಮೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭಾರೀ ಹಿನ್ನಡೆ ಉಂಟು ಮಾಡಿದೆ. ರಾಜ್ಯದ 29 ಮಹಾನಗರ ಪಾಲಿಕೆಗಳಿಗೆ 2026ರ ಜನವರಿ 15ರಂದು ಚುನಾವಣೆ ನಡೆಯಲಿದೆ.

    ಪ್ರದ್ನ್ಯಾ ಸತವ್ ರಾಜೀನಾಮೆ: ಪ್ರದ್ನ್ಯಾ ಸತವ್ ಪತಿ ರಾಜೀವ್ ಸತವ್ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆಪ್ತ ನಾಯಕರಲ್ಲಿ ಒಬ್ಬರು. 2021ರಲ್ಲಿ ಅವರು ನಿಧನ ಹೊಂದಿದ್ದರು. ಪತಿಯ ನಿಧನದ ಬಳಿಕವೂ ಪ್ರದ್ನ್ಯಾ ಸತವ್ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯರಾಗಿದ್ದರು.

    ಮಹಾರಾಷ್ಟ್ರ ಕಾಂಗ್ರೆಸ್ ಸಮಿಯ ಉಪಾಧ್ಯಕ್ಷರಾಗಿಯೂ ಅವರು ಕಾರ್ಯ ನಿರ್ವಹಿಸಿದ್ದರು. 2024ರ ಜುಲೈನಲ್ಲಿ ಅವರನ್ನು ಕಾಂಗ್ರೆಸ್ ಪಕ್ಷ ವಿಧಾನ ಪರಿಷತ್‌ಗೆ ನಾಮ ನಿರ್ದೇಶನ ಮಾಡಿತ್ತು. ಆದರೆ ಸದಸ್ಯತ್ವ ಅವಧಿ ಪೂರ್ಣಗೊಳ್ಳುವ ಮುನ್ನವೇ ಅವರು ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

    ಪ್ರದ್ನ್ಯಾ ಸತವ್ ಎಂಎಲ್‌ಸಿ, ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ ಬಳಿಕ ಬಿಜೆಪಿ ಸೇರಿದರು. ರಾಜ್ಯದ ಬಿಜೆಪಿ ನಾಯಕ ರವೀಂದ್ರ ಚೌವ್ಹಾಣ್ ಮತ್ತು ಕಂದಾಯ ಸಚಿವ ಚಂದ್ರಶೇಖರ್ ಬವಾಂಕುಲೆ ಅವರು ಪ್ರದ್ನ್ಯಾ ಸತವ್ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು.

    ಪ್ರದ್ನ್ಯಾ ಸತವ್ ರಾಜೀನಾಮೆ ಮಹಾರಾಷ್ಟ್ರದ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಕಾರಣವಾಗಿದೆ. ಪ್ರಜ್ಞಾ ರಾಜ್ಯದ ಮರಾಠವಾಡ ಪ್ರದೇಶದ ಹಿಂಗೋಲಿ ಜಿಲ್ಲೆಯವರು. ಬುಧವಾರ ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ಹರ್ಷವರ್ಧನ್ ಸಪ್ಕಾಲ್ ಪ್ರದ್ನ್ಯಾ ಸತವ್ ಅವರು ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಹೇಳಿದ್ದರು. ಗುರುವಾರ ಪ್ರದ್ನ್ಯಾ ಸತವ್ ಬಿಜೆಪಿ ಸೇರಿದ್ದಾರೆ.

    ಪ್ರದ್ನ್ಯಾ ಸತವ್ ಪತಿಯ ನಿಧನದ ನಂತರ ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ್ದರು. ಅವರು 2021ರಲ್ಲಿ ಮೊದಲ ಬಾರಿಗೆ ಮಹಾರಾಷ್ಟ್ರ ವಿಧಾನ ಪರಿಷತ್ತಿಗೆ ಆಯ್ಕೆಯಾಗಿದ್ದರು. ಬಳಿಕ ಅವರನ್ನು ಕಾಂಗ್ರೆಸ್ ಪಕ್ಷ ಮರು ಆಯ್ಕೆ ಮಾಡಿತ್ತು.

    ಪ್ರದ್ನ್ಯಾ ಸತವ್  ರಾಜೀನಾಮೆ ಕುರಿತು ಪ್ರತಿಕ್ರಿಯೆ ನೀಡಿ ಕಾಂಗ್ರೆಸ್ ವಕ್ತಾರೆ ಪೂಜಾ ತ್ರಿಪಾಠಿ ಎಕ್ಸ್‌ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಾಕಿದ್ದಾರೆ. “ವೈಯಕ್ತಿಕವಾಗಿ ಒಬ್ಬ ಕಾಂಗ್ರೆಸ್ ಕಾರ್ಯಕರ್ತೆಯಾಗಿ, ಪ್ರದ್ನ್ಯಾ ಸತವ್ ಬಿಜೆಪಿ ಸೇರಿರುವುದು ನನಗೆ ತೀವ್ರ ಬೇಸರ ತಂದಿದೆ. ರಾಜೀವ್ ಸತವ್ ಅವರಿಗೆ ಪಕ್ಷದ ಮೌಲ್ಯಗಳು ಮತ್ತು ಮತದಾರರ ಬಗ್ಗೆ ಅವರಿಗಿದ್ದ ಅಚಲ ಬದ್ಧತೆಯ ಕುರಿತು ಎಲ್ಲರೂ ಮಾತನಾಡುತ್ತಿದ್ದುದನ್ನು ಕೇಳಿದ್ದೆ” ಎಂದು ಹೇಳಿದ್ದಾರೆ.

    “ಪಕ್ಷಾಂತರ ಮಾಡುವುದರಿಂದ ಅಧಿಕಾರ ಸಿಗಬಹುದು. ಆದರೆ ಅದು ನಂಬಿಕೆಯನ್ನು ಮತ್ತು ಪರಸ್ಪರ ಗೌರವ ಹಾಗೂ ಸಹಾನುಭೂತಿಯ ಮೇಲೆ ದೀರ್ಘಕಾಲದ ತನಕ ನಿರ್ಮಿಸಲಾದ ಬಂಧವನ್ನು ಕುಸಿಯುವಂತೆ ಮಾಡುತ್ತದೆ. ರಾಜೀವ್ ಸತವ್ ಶಾತವ್ ಅವರು ಹೀಗೆ ಮಾಡುತ್ತಿದ್ದರೇ?, ಎಂದಿಗೂ ಇಲ್ಲ ಎಂದು ನನ್ನ ಹೃದಯ ಹೇಳುತ್ತಿದೆ” ಎಂದು ಪೋಸ್ಟ್ ಹಾಕಿದ್ದಾರೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search