ಕರ್ನಾಟಕ ಸರ್ಕಾರ ಡಿಪ್ಲೊಮಾ ಪಡೆದವರಿಗೆ ಗುಡ್‌ನ್ಯೂಸ್ ನೀಡಿದೆ. ಫಾರ್ಮಸಿ ಡಿಪ್ಲೊಮಾ ಪದವಿ ಪಡೆದ ಸುಮಾರು 1,000 ಡಿಪ್ಲೊಮಾ ವಿದ್ಯಾರ್ಥಿಗಳನ್ನು ಮಂಜೂರಾದ ಖಾಲಿಯಿರುವ ಹುದ್ದೆಗಳ ಎದುರಾಗಿ ಪಾರದರ್ಶಕ ಆಯ್ಕೆ ವಿಧಾನದ ಮೂಲಕ 11 ತಿಂಗಳ ಅವಧಿಗೆ ನಿಗದಿತ ಮೊತ್ತದ ಸ್ಟೈಫಂಡ್ ಪಾವತಿಯ ಮೇಲೆ ಅಪ್ರೆಂಟಿಸ್‌ಗಳಾಗಿ ತೊಡಗಿಸಿಕೊಳ್ಳುವ ಕುರಿತು ಆದೇಶವನ್ನು ಹೊರಡಿಸಲಾಗಿದೆ.
ಈ ಕುರಿತು ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿಶ್ರೀಪತಿ ಪಿ.ಕೆ. ಸರ್ಕಾರದ ಅಧೀನ ಕಾರ್ಯದರ್ಶಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಭಾವೈಪ ಮತ್ತು ಸಮನ್ವಯ) ಆದೇಶವನ್ನು ಹೊರಡಿಸಿದ್ದಾರೆ.
ಪ್ರಸ್ತಾವನೆ: ಆಯುಕ್ತರು, ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇವರ ಏಕಕಡತದಲ್ಲಿ ಸದಸ್ಯ ಕಾರ್ಯದರ್ಶಿಗಳು, ಪರೀಕ್ಷಾ ಪ್ರಾಧಿಕಾರ ಮಂಡಳಿ, ಬೆಂಗಳೂರು ಪತ್ರಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯದಲ್ಲಿ ವಾರ್ಷಿಕವಾಗಿ ಸುಮಾರು 18,000 ಡಿ. ಫಾರ್ಮ ಮತ್ತು 8,000 ಬಿ. ಫಾರ್ಮ ಪದವೀಧರರು ಹೊರಬರುತ್ತಿದ್ದಾರೆ. ಅದರಲ್ಲಿ ಸರಿಸುಮಾರು 5,000 ಡಿ.ಫಾರ್ಮ ವಿದ್ಯಾರ್ಥಿಗಳು ಮತ್ತು 4,000 ಬಿ. ಫಾರ್ಮ ವಿದ್ಯಾರ್ಥಿಗಳು ಕರ್ನಾಟಕ ಮೂಲದವರಾಗಿರುತ್ತಾರೆ.
ಫಾರ್ಮಸಿ ಕೋರ್ಸ್ ಆರೋಗ್ಯ ಸಂಬಂಧಿತ ಕೋರ್ಸ್ ಆಗಿದ್ದು, ಕೋರ್ಸ್ ಮುಗಿದ ನಂತರ ವಿದ್ಯಾರ್ಥಿಗಳು ಅಪ್ರೆಂಟಿಸ್‌ಶಿಪ್ ತರಬೇತಿಗೆ ಒಳಗಾಗುವುದು ಅಗತ್ಯವೆಂದು ಹಾಗೂ ಪ್ರಾಯೋಗಿಕ ತರಬೇತಿಯ ಪ್ರಮುಖ ಅಂಶಗಳನ್ನು ತಿಳಿಸುತ್ತಾ ಅದಕ್ಕೆ ಸಂಬಂಧಿಸಿದಂತೆ ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ.
ಆರೋಗ್ಯ ಇಲಾಖೆಯಲ್ಲಿ ಒಟ್ಟು 3000 ಫಾರ್ಮಸಿಸ್ಟ್ ಹುದ್ದೆಗಳಲ್ಲಿ ಸುಮಾರು ಶೇ.50 ರಷ್ಟು ಹುದ್ದೆಗಳು ಖಾಲಿ ಇರುತ್ತವೆ. ಆರ್ಥಿಕ ಇಲಾಖೆಯು ಇತ್ತೀಚೆಗೆ 400 ಫಾರ್ಮಸಿಸ್ಟ್ ಹುದ್ದೆಗಳನ್ನು ಒಪ್ಪಂದದ (contract basis) ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಅನುಮತಿ ನೀಡಿರುತ್ತದೆ.
ಫಾರ್ಮಸಿಸ್ಟ್ ಹುದ್ದೆಗಳಿಗೆ ಇಲಾಖೆಯು ತರ್ಕಬದ್ಧಗೊಳಿಸುವ ಪ್ರಕ್ರಿಯೆಯನ್ನು ಸಹ ಕೈಗೊಂಡಿರುತ್ತದೆ. ಅದರಂತೆ, ಹೆಚ್ಚು ರೋಗಿಗಳಿರದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸದರಿ ಕೆಲಸವನ್ನು ಖಾಯಂ ಫಾರ್ಮಸಿಸ್ಟ್‌ಗಳ ಮೇಲ್ವಿಚಾರಣೆಯಲ್ಲಿ ಅಪ್ರೆಂಟಿಸ್ ಫಾರ್ಮಸಿಸ್ಟ್‌ಗಳ ಮೂಲಕ ನಿರ್ವಹಿಸಬಹುದುದೆಂದು ವಿಶ್ಲೇಷಿಸಲಾಗಿದೆ.
ಡಿಪ್ಲೊಮಾ ಇನ್ ಫಾರ್ಮಸಿ ಕೋರ್ಸ್ ಮುಗಿಸಿ ಹೊರಬರುವ ವಿದ್ಯಾರ್ಥಿಗಳು ಸ್ಥಿರ ಮತ್ತು ಸೂಕ್ತ ಉದ್ಯೋಗವನ್ನು ಪಡೆಯುವಲ್ಲಿ ಹಲವು ಸವಾಲುಗಳನ್ನು ಎದುರಿಸುತ್ತಿರುತ್ತಾರೆ. ಅಪ್ರೆಂಟಿಸ್‌ಶಿಪ್ ಕಾರ್ಯಕ್ರಮದ ಪ್ರಸ್ತಾವನೆಯು ಯುವಕರಿಗೆ ಪ್ರಾಯೋಗಿಕ ಕೌಶಲ್ಯ ಮತ್ತು ಫಾರ್ಮಸಿಯಲ್ಲಿ ಪ್ರಾಯೋಗಿಕ ಅನುಭವವನ್ನು ಒದಗಿಸುವ ಮೂಲಕ ಈ ಸವಾಲುಗಳನ್ನು ಪರಿಹರಿಸುವ ಗುರಿಯನ್ನು ಹೊಂದಿರುತ್ತದೆ. ಅಂತೆಯೇ, ಈ ಕಾರ್ಯಕ್ರಮವು ಶಿಕ್ಷಣ ಮತ್ತು ಉದ್ಯೋಗದ ನಡುವಿನ ಅಂತರವನ್ನು ಕಡಿಮೆ ಮಾಡಲು ಸಹಕಾರಿಯಾಗುವುದು, ಭಾಗವಹಿಸುವವರು ತಾವು ಆಯ್ಕೆ ಮಾಡಿದ ವೃತ್ತಿಜೀವನದಲ್ಲಿ ಅಭಿವೃದ್ಧಿ ಹೊಂದಲು ಅಗತ್ಯವಿರುವ ಸಾಧನಗಳೊಂದಿಗೆ ಸಜ್ಜುಗೊಳಿಸಲು ಸಹಾಯವಾಗುವುದು. ಪ್ರಸ್ತುತ ಫಾರ್ಮಸಿಯಲ್ಲಿ ಡಿಪ್ಲೊಮಾ ಹೊಂದಿರುವ ಅಭ್ಯರ್ಥಿಗಳಿಗೆ ಯಾವುದೇ ಅಪ್ರೆಂಟಿಸ್‌ಶಿಪ್ ಕಾರ್ಯಕ್ರಮವಿಲ್ಲ. ಆದ್ದರಿಂದ ಉತ್ತೀರ್ಣರಾಗುವ ವಿದ್ಯಾರ್ಥಿಗಳ ಪ್ರಯೋಜನಕ್ಕಾಗಿ ಇದನ್ನು ಪರಿಚಯಿಸುವುದು ಉಪಯುಕ್ತವಾಗಿರುತ್ತದೆ.
ಅಪ್ರೆಂಟಿಸ್ ತರಬೇತಿಯು ಸರ್ಕಾರಿ ಔಷಧಾಲಯ/ ಔಷಧಾಲಯ ಉದ್ಯಮಗಳಲ್ಲಿನ ಕೆಲಸದ ಸ್ಥಳದಲ್ಲಿ ಹಿರಿಯ ವೈದ್ಯಕೀಯ ಅಧಿಕಾರಿ ಅಥವಾ ಗೊತ್ತುಪಡಿಸಿದ ಫಾರ್ಮಸಿಸ್ಟ್‌ಗಳ ಮೇಲ್ವಿಚಾರಣೆಯಲ್ಲಿ ವಿತರಣೆ, ದಾಸ್ತಾನು ನಿಯಂತ್ರಣ, ಔಷಧ ಸಂಗ್ರಹಣೆ, ಮೂಲ ಸಂಯೋಜನೆ ಮತ್ತು ರೋಗಿಗಳ ಶಿಕ್ಷಣವನ್ನು ಒಳಗೊಂಡ ರಚನಾತ್ಮಕ, ಪ್ರಾಯೋಗಿಕ ತರಬೇತಿಯಲ್ಲಿ ಸಹಾಯ/ ನೀಡುವಿಕೆಯನ್ನು ಒಳಗೊಂಡಿರುತ್ತದೆ.
ಉದ್ಯೋಗದಲ್ಲಿ ತರಬೇತಿ/ ಪ್ರಾಯೋಗಿಕ ತರಬೇತಿಯನ್ನು ತೆಗೆದುಕೊಳ್ಳುವ ಮೊದಲು ಯಾವುದೇ ಸಾಂಸ್ಥಿಕ ತರಬೇತಿ/ ಕೌಶಲ್ಯ ತರಬೇತಿಯನ್ನು ಪಡೆಯದವರಿಗೆ ಅಪ್ರೆಂಟಿಶಿಪ್ ತರಬೇತಿಯಲ್ಲಿ ಮೂಲಭೂತ ತರಬೇತಿಯು ಅತ್ಯಗತ್ಯ ಅಂಶವಾಗಿರುತ್ತದೆ.
ಕರ್ನಾಟಕವು ವಾರ್ಷಿಕವಾಗಿ ಸುಮಾರು 16,000 ಡಿ. ಫಾರ್ಮ್ ಪದವೀಧರರನ್ನು ಉತ್ಪಾದಿಸುತ್ತದೆ. ಸರ್ಕಾರವು ಫಾರ್ಮಸಿ ಕಾಲೇಜು ಸಂಘದೊಂದಿಗಿನ ಒಮ್ಮತದ ಒಪ್ಪಂದದಲ್ಲಿ ಶೇಕಡಾ 20ರಷ್ಟು ಸೀಟುಗಳನ್ನು ಸರ್ಕಾರಿ ಕೋಟಾದಂತೆ ಮೀಸಲಿಟ್ಟಿದ್ದು, ಪ್ರತಿ ವರ್ಷ 4350 ಸೀಟುಗಳನ್ನು ರಾಜ್ಯಕ್ಕೆ ಮೀಸಲಿಡಲಾಗುತ್ತಿದ್ದು, ಇದಕ್ಕಾಗಿ ಪ್ರತಿ ವರ್ಷ ಸುಮಾರು 750 ಸೀಟುಗಳಿಗೆ ಪ್ರವೇಶ ನೀಡಲಾಗುತ್ತದೆ.
ಸರ್ಕಾರಿ ಔಷಧಾಲಯ ಕಾಲೇಜು ಸೇರಿದಂತೆ ಕಳೆದ ಎರಡು ವರ್ಷಗಳಲ್ಲಿ ಸರ್ಕಾರಿ ಕೋಟಾದಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗುವುದು ಮತ್ತು ಅಪ್ರೆಂಟಿಸ್ ಕಾರ್ಯಕ್ರಮಕ್ಕೆ ಆಯ್ಕೆ ಮಾಡಲಾಗುವುದು. ಈ ವಿಭಾಗಗಳಲ್ಲಿನ ವಿದ್ಯಾರ್ಥಿಗಳು ಲಭ್ಯವಿಲ್ಲದಿದ್ದರೆ ಅಗ್ರ ಶ್ರೇಯಾಂಕದ ಕಾಲೇಜುಗಳಿಗೆ ಆದ್ಯತೆ ನೀಡಲಾಗುವುದು. ಕಳೆದ ಎರಡು ವರ್ಷಗಳಲ್ಲಿ ಕರ್ನಾಟಕದಲ್ಲಿ ಡಿ. ಫಾರ್ಮ್ ಪೂರ್ಣಗೊಳಿಸಿದ ಎಲ್ಲಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಔಪಚಾರಿಕ ಅಪ್ರೆಂಟಿಸ್‌ಶಿಪ್ ಒಪ್ಪಂದವು ನಿಯಮಗಳು, ಜವಾಬ್ದಾರಿಗಳು ಮತ್ತು ನೈತಿಕ ಬಾಧ್ಯತೆಗಳನ್ನು ವ್ಯಾಖ್ಯಾನಿಸುತ್ತದೆ.
ಅಂತಹ ಅಭ್ಯರ್ಥಿಗಳಿಗೆ ನೋಂದಾಯಿತ ಫಾರ್ಮಸಿಸ್ಟ್ (ಅಪ್ರೆಂಟಿಸ್ ಮಾಸ್ಟರ್) ಅಡಿಯಲ್ಲಿ ತರಬೇತಿ ನೀಡಲಾಗುತ್ತದೆ. ಈ ಉದ್ದೇಶಕ್ಕಾಗಿ ಪರೀಕ್ಷಾ ಪ್ರಾಧಿಕಾರದ ಮಂಡಳಿಯ ಅಧ್ಯಕ್ಷರು ಮತ್ತು ಪರೀಕ್ಷಾ ಪ್ರಾಧಿಕಾರದ ಮಂಡಳಿಯ ಸದಸ್ಯ ಕಾರ್ಯದರ್ಶಿಗಳ ನೇತೃತ್ವದ ಸಮಿತಿಯು ಅರ್ಜಿಗಳನ್ನು ಪರಿಶೀಲಿಸಿ ಅರ್ಹತೆಯ ಆಧಾರದ ಮೇರೆಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗುತ್ತದೆ.
ತರಬೇತಿಯ ಅವಧಿಯು ಸಂಸ್ಥೆಗೆ ವರದಿ ಮಾಡಿದ ದಿನಾಂಕದಿಂದ ಹನ್ನೊಂದು ತಿಂಗಳುಗಳವರೆಗೆ ಇರುತ್ತದೆ. ಅಪ್ರೆಂಟಿಸ್‌ಗಳಿಗೆ ಸೂಕ್ತ ಮೊತ್ತದ ಸ್ಟೈಫಂಡ್ ನೀಡಲಾಗುತ್ತದೆ. ಸ್ಟೈಫಂಡ್ ಮೊತ್ತವು ಗುತ್ತಿಗೆ ಆಧಾರದ ಫಾರ್ಮಸಿಸ್ಟ್‌ಗಳಿಗೆ ಪಾವತಿಸುವ ಕನಿಷ್ಠ ವೇತನಕ್ಕಿಂತ ಕಡಿಮೆಯಾಗಿದ್ದು, ಸಮಂಜಸವಾಗಿರುತ್ತದೆ.
ಆದ್ದರಿಂದ ಕಳೆದ ಎರಡು ವರ್ಷಗಳಲ್ಲಿ ಫಾರ್ಮಸಿ ಡಿಪ್ಲೊಮಾ ಪದವಿ ಪಡೆದ ಸುಮಾರು 1,000 ಡಿಪ್ಲೊಮಾ ವಿದ್ಯಾರ್ಥಿಗಳನ್ನು ಮಂಜೂರಾದ ಖಾಲಿಯಿರುವ ಹುದ್ದೆಗಳ ಎದುರಾಗಿ ಪಾರದರ್ಶಕ ಆಯ್ಕೆ ವಿಧಾನದ ಮೂಲಕ 11 ತಿಂಗಳ ಅವಧಿಗೆ ನಿಗದಿತ ಮೊತ್ತದ ಸ್ಟೈಫಂಡ್ ಪಾವತಿಯ ಮೇಲೆ ಅಪ್ರೆಂಟಿಸ್‌ಗಳಾಗಿ ತೊಡಗಿಸಿಕೊಳ್ಳುವಂತೆ ಕೋರಿರುತ್ತಾರೆ.
ಸರ್ಕಾರದ ಆದೇಶ: ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಕಳೆದ ಎರಡು ವರ್ಷಗಳಲ್ಲಿ ಫಾರ್ಮಸಿ ಡಿಪ್ಲೊಮಾ ಪದವಿ ಪಡೆದ ಸುಮಾರು 1,000 ಡಿಪ್ಲೊಮಾ ವಿದ್ಯಾರ್ಥಿಗಳನ್ನು ಮಂಜೂರಾದ ಖಾಲಿಯಿರುವ ಹುದ್ದೆಗಳ ಎದುರಾಗಿ ಪಾರದರ್ಶಕ ಆಯ್ಕೆ ವಿಧಾನದ ಮೂಲಕ 11 ತಿಂಗಳ ಅವಧಿಗೆ ನಿಗದಿತ ಮೊತ್ತದ ಸ್ಟೈಫಂಡ್ ಪಾವತಿಯ ಮೇಲೆ ಅಪ್ರೆಂಟಿಸ್‌ಗಳಾಗಿ ತೊಡಗಿಸಿಕೊಳ್ಳುವಂತೆ ಆದೇಶಿಸಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


