ನವದೆಹಲಿ: ಇತ್ತೀಚೆಗಷ್ಟೆ ನಡೆದ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಪ್ರಚಂಡ ಗೆಲುವು ಸಾಧಿಸಿದ ಬಿಜೆಪಿ 27 ವರ್ಷಗಳ ಬಳಿಕ ರಾಷ್ಟ್ರ ರಾಜಧಾನಿಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದೆ.
ಫ್ರಾನ್ಸ್ ಪ್ರವಾಸದಲ್ಲಿದ್ದ ನರೇಂದ್ರ ಮೋದಿ ಭಾರತಕ್ಕೆ ವಾಪಸ್ ಆಗುತ್ತಿದ್ದಂತೆ ಬಿಜೆಪಿ ಸಂಸದೀಯ ಸಭೆ ನಡೆದಿದ್ದು, ಇದರ ಬಳಿಕ ಬಿಜೆಪಿ ಶಾಸಕಾಂಗ ಸಭೆ ನಡೆದಿದೆ. ಈ ಸಭೆಯಲ್ಲಿ ಚರ್ಚಿಸಿ ರೇಖಾ ಗುಪ್ತಾ ಅವರನ್ನು ದೆಹಲಿ ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ.
ದೆಹಲಿ ನೂತನ ಸಿಎಂ ಎಂದು ರೇಖಾ ಗುಪ್ತ ಆಯ್ಕೆಯಾಗುತ್ತಿದ್ದಂತೆ ಅತ್ತ ರೇಖಾ ಗುಪ್ತ ನಿವಾಸದ ಎದುರು ಸಂಭ್ರಮ ಜೋರಾಗಿದೆ.
ರೇಖಾ ಗುಪ್ತಾ ದೆಹಲಿಗೆ ಆಯ್ಕೆಯಾಗಿರುವ ನಾಲ್ಕನೇ ಮಹಿಳಾ ಸಿಎಂ ಆಗಿದ್ದಾರೆ. ವಾಯುವ್ಯ ದೆಹಲಿಯ ಶಾಲಿಮಾರ್ ಬಾಗ್ನ ಶಾಸಕಿಯಾಗಿರುವ ರೇಖಾ ಗುಪ್ತ ನಾಳೆ ರಾಮ್ಲೀಲಾ ಮೈದಾನದಲ್ಲಿ ನಡೆಯಲಿರುವ ಪ್ರಮಾಣವಚನ ಕಾರ್ಯಕ್ರಮದಲ್ಲಿ ಬೆಳಗ್ಗೆ 11ಕ್ಕೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


