ಕರಾಚಿ: ಇಲ್ಲಿನ ನ್ಯಾಷನಲ್ ಸ್ಟೇಡಿಯಂನಲ್ಲಿ 2025ರ ಚಾಂಪಿಯನ್ಸ್ ಟ್ರೋಫಿಯ ಉದ್ಘಾಟನಾ ಪಂದ್ಯ ನಡೆಯುತ್ತಿದ್ದು, ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಿವೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ವಿಲ್ ಯಂಗ್ ಹಾಗೂ ಟಾಮ್ ಲಾಥಮ್ ಶತಕಗಳ ನೆರವಿನಿಂದ 50 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 320 ರನ್ ಕಲೆಹಾಕಿ ಪಾಕಿಸ್ತಾನಕ್ಕೆ 321 ರನ್ಗಳ ಸವಾಲಿನ ಗುರಿಯನ್ನು ನೀಡಿದೆ.
ನ್ಯೂಜಿಲೆಂಡ್ ಪರ ವಿಲ್ ಯಂಗ್ ಹಾಗೂ ಟಾಮ್ ಲಾಥಮ್ ಶತಕ ಬಾರಿಸಿ ಅಬ್ಬರಿಸಿದರೆ, ಅಂತಿಮ ಹಂತದಲ್ಲಿ ಅಬ್ಬರಿಸಿದ ಗ್ಲೆನ್ ಫಿಲಿಪ್ಸ್ ಅರ್ಧಶತಕ ಬಾರಿಸಿ ಅಬ್ಬರಿಸಿದರು. 39 ಎಸೆತಗಳಲ್ಲಿ 3 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 61 ರನ್ ಚಚ್ಚಿದ ಗ್ಲೆನ್ ಫಿಲಿಪ್ಸ್ ತಮ್ಮ ಹಿಂದಿನ ಏಕದಿನ ಪಂದ್ಯಗಳಂತೆ ಈ ಪಂದ್ಯದಲ್ಲಿಯೂ ಸಹ ಪಾಕ್ ಬೌಲರ್ ಶಾಹಿನ್ ಅಫ್ರಿದಿಗೆ ರನ್ ಹೊಳೆ ಹರಿಸಿದ್ದಾರೆ.
ಈ ಮೂಲಕ ಏಕದಿನ ಪಂದ್ಯಗಳಲ್ಲಿ ಶಾಹಿನ್ ಅಫ್ರಿದಿಯ ಒಟ್ಟು 29 ಎಸೆತಗಳನ್ನು ಎದುರಿಸಿರುವ ಗ್ಲೆನ್ ಫಿಲಿಪ್ಸ್ 78 ರನ್ ಕಲೆಹಾಕಿದ್ದು, 268.90 ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿದ್ದಾರೆ. ಆದರೆ ಒಮ್ಮೆಯೂ ಸಹ ಶಾಹಿನ್ ಅಫ್ರಿದಿಗೆ ಗ್ಲೆನ್ ಫಿಲಿಪ್ಸ್ ಪಡೆದುಕೊಳ್ಳಲು ಆಗಿಯೇ ಇಲ್ಲ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


