Monday, August 10, 2026
spot_img
More
    spot_img
    HomeTop Storyಧರ್ಮಸ್ಥಳ ಹಾರರ್: 2ನೇ ವಿಡಿಯೊ ಹಂಚಿಕೊಂಡು ಮೊದಲ ವಿಡಿಯೊದಿಂದ ಬಂದ ಹಣವೆಷ್ಟು ಎಂದು ಬಹಿರಂಗಪಡಿಸಿದ ಸಮೀರ್

    ಧರ್ಮಸ್ಥಳ ಹಾರರ್: 2ನೇ ವಿಡಿಯೊ ಹಂಚಿಕೊಂಡು ಮೊದಲ ವಿಡಿಯೊದಿಂದ ಬಂದ ಹಣವೆಷ್ಟು ಎಂದು ಬಹಿರಂಗಪಡಿಸಿದ ಸಮೀರ್

    ಯುಟ್ಯೂಬರ್ ಸಮೀರ್ ಎಂಡಿ ತಮ್ಮ ಧೂತ ಸಮೀರ್ ಯುಟ್ಯೂಬ್ ಚಾನೆಲ್‌ನಲ್ಲಿ ಸೌಜನ್ಯ ಅತ್ಯಾಚಾರ ಹಾಗೂ ಕೊಲೆಯ ಕುರಿತಾಗಿ ಮಾಡಿದ ‘ಧರ್ಮಸ್ಥಳ ಹಾರರ್’ ವಿಡಿಯೊ ಪ್ರಕರಣದ ಕುರಿತು ಜನರಲ್ಲಿದ್ದ ಅಭಿಪ್ರಾಯಗಳನ್ನೇ ಉಲ್ಟಾ ಮಾಡಿಬಿಟ್ಟಿತ್ತು.

    Advertisement

    ಊರಿನ ದೊಡ್ಡವರೇ ಈ ಕೊಲೆ ಮಾಡಿದವರಾ ಎಂಬ ಶೀರ್ಷಿಕೆಯಡಿ ವಿಡಿಯೊ ಮಾಡಿದ್ದ ಸಮೀರ್ ಸೌಜನ್ಯ ಮಾತ್ರವಲ್ಲದೇ ಮಾವುತ ನಾರಾಯಣ, ಆತನ ತಂಗಿ ಯಮುನಾ, ಶಿಕ್ಷಕಿ ವೇದವಲ್ಲಿ ಹೀಗೆ ಇನ್ನೂ ಕೆಲ ಪ್ರಕರಣಗಳ ಬಗ್ಗೆ ವಿವರಿಸಿ ಇವೆಲ್ಲದ್ದಕ್ಕೂ ಊರ ಗೌಡ್ರ ಕುಟುಂಬದ ಲಿಂಕ್ ಇತ್ತು ಎಂದು ಹೇಳಿದ್ದರು.

    ಹೀಗೆ ಸಮೀರ್ ಮಾಡಿದ್ದ ಸೌಜನ್ಯ ಅತ್ಯಾಚಾರ ಪ್ರಕರಣದ ಕುರಿತ ವಿಡಿಯೊ ದೊಡ್ಡ ಮಟ್ಟದಲ್ಲಿ ವೈರಲ್ ಆದ ಬೆನ್ನಲ್ಲೇ ಸಮೀರ್ ವಿರುದ್ಧ ಕೆಲ ಯುಟ್ಯೂಬರ್‌ಗಳು ವಿಡಿಯೊ ಮಾಡಿ ಸಮೀರ್ ಹೇಳಿದ್ದು ಸುಳ್ಳು ಎಂದು ಆರೋಪಿಸಿದರು.

    ಆ ಆರೋಪಗಳಿಗೆಲ್ಲ ಇದಿಗ ಸಮೀರ್ ತನ್ನ ಮತ್ತೊಂದು ವಿಡಿಯೊ ಮೂಲಕ ಉತ್ತರ ನೀಡಿದ್ದು ಸಾಕ್ಷಿ ಸಮೇತ ತಿರುಗೇಟು ನೀಡಿದ್ದಾರೆ. ಅಲ್ಲದೇ ಸೌಜನ್ರ ಪ್ರಕರಣದಲ್ಲಿದ್ದ ಸಾಕ್ಷಿಗಳ ನಾಶ ಯಾವ ರೀತಿ ಆಯಿತು ಎಂಬ ಅಂಶಗಳನ್ನೂ ಸಹ ಸಮೀರ್ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಈ ಮೂಲಕ ಸೌಜನ್ಯ ಪ್ರಕರಣದ ಸಾಕ್ಷಿಗಳನ್ನು ನಾಶ ಮಾಡಿ ಪ್ರಕರಣ ಹೇಗೆ ಹಳ್ಳ ಹಿಡಿಯಿತು ಎಂಬುದನ್ನು ಬಹಿರಂಗಪಡಿಸಿದ್ದಾರೆ.

    ಇನ್ನು ವಿಡಿಯೊನ ಕೊನೆಯಲ್ಲಿ ತಮ್ಮ ಮೊದಲ ವಿಡಿಯೊದಿಂದ ಎಷ್ಟು ಹಣ ಬಂದಿರಬಹುದು ಎಂದು ವಿರೋಧಿಗಳು ಮಾತನಾಡಿದ್ದರು. ನಿಜ ಹೇಳಬೇಕೆಂದರೆ ಆ ವಿಡಿಯೊ ವೈರಲ್ ಆದ ಕೂಡಲೇ ಹಣ ಗಣಿಸಲು ಯೋಗ್ಯವಲ್ಲ ಎಂದು ಯುಟ್ಯೂಬ್ ತಿರಸ್ಕರಿಸಿತು, ಹೀಗಾಗಿ ಅದರಿಂದ ನನಗೆ ಯಾವುದೇ ದುಡ್ಡು ಬಂದಿಲ್ಲ. ಅತ್ಯಾಚಾರಿ ಬೆಂಬಲಿಗರ ಯೋಚನೆ ನೋಡಿ, ಸೌಜನ್ಯಗೆ ನ್ಯಾಯ ಸಿಗುವುದಕ್ಕಿಂತ ವಿಡಿಯೊದಿಂದ ಎಷ್ಟು ದುಡ್ಡು ಬಂದಿರಬಹುದು ಎಂದು ಮಾತನಾಡುತ್ತಾರೆ ಎಂದು ಬೇಸರ ಹೊರಹಾಕಿದರು.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading