ದಕ್ಷಿಣ ಕನ್ನಡ: ಜಿಲ್ಲೆಯ ಮುಲ್ಕಿ ತಾಲೂಕಿನ ಬಪ್ಪನಾಡುವಿನಲ್ಲಿರುವ ದುರ್ಗಾಪರಮೇಶ್ವರಿ ದೇವಾಲಯದ ರಥೋತ್ಸವ ಎಂದಿನಂತೆ ಈ ಬಾರಿಯೂ ಸಹ ಅದ್ದೂರಿಯಾಗಿ ಆಯೋಜನೆಗೊಂಡಿತ್ತು.
ರಥೋತ್ಸವ ಕಣ್ತುಂಬಿಕೊಳ್ಳಲು ಸಹಸ್ರಾರು ಭಕ್ತರು ದೇವಾಲಯದ ಬಳಿ ನೆರೆದಿದ್ದರು. ಮಿಂಚುವ ಲೈಟ್‌ಗಳು ಹಾಗೂ ಬಣ್ಣ ಬಣ್ಣದ ಚಿತ್ತಾರದಿಂದ ಸಿದ್ದಗೊಂಡಿದ್ದ ರಥದ ಉತ್ಸವ ಪೂಜೆ ಬಳಿಕ ಆರಂಭಗೊಂಡಿತ್ತು.
ಹೀಗೆ ಆರಂಭವಾದ ರಥೋತ್ಸವವನ್ನು ವೀಕ್ಷಿಸುತ್ತಾ ಕೈ ಮುಗಿದಿ ಬೇಡಿಕೊಳ್ಳುತ್ತಿದ್ದ ಭಕ್ತರಿಗೆ ಕೆವಲೇ ಕ್ಷಣಗಳಲ್ಲಿ ಶಾಕ್ ಕಾದಿತ್ತು. ನೋಡ ನೋಡುತ್ತಿದ್ದಂತೆ ರಥದ ಮೇಲ್ಭಾಗ ನೆಲಕ್ಕೆ ಕುಸಿದುಬಿದ್ದಿತ್ತು. ದೃಶ್ಯ ರಥೋತ್ಸವ ಸೆರೆ ಹಿಡಿಯುತ್ತಿದ್ದ ಭಕ್ತರ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ.
ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


