ಲಂಡನ್: ಯುನೈಟೆಡ್ ಕಿಂಗ್ಡಮ್ನಲ್ಲಿ ಮತದಾನದ ವಯಸ್ಸನ್ನು 18ರಿಂದ 16 ವರ್ಷಕ್ಕಿಳಿಸಲು ಸರ್ಕಾರ ನಿರ್ಧರಿಸಿದ್ದು, ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಇದು ಅನುಷ್ಠಾನಕ್ಕೆ ಬರಲಿದೆ.
ಮತದಾನದ ವಯೋಮಿತಿಗೆ ತಿದ್ದುಪಡಿಗೆ ಸರ್ಕಾರ ಮಸೂದೆ ಮಂಡಿಸುತ್ತಿದ್ದು, ಅದು ಅಂಗೀಕಾರವಾಗಿ ಕಾಯ್ದೆಯಾದರೆ ಯುನೈಟೆಡ್ ಕಿಂಗ್ಡಮ್ನ ಎಲ್ಲ ಚುನಾವಣೆಗಳಲ್ಲಿ 16 ವರ್ಷ ಮೇಲ್ಪಟ್ಟ 15 ಲಕ್ಷ ಜನರು ಮತ ಚಲಾಯಿಸಲು ಅರ್ಹತೆ ಪಡೆಯಲಿದ್ದಾರೆ.
ಮತದಾನದ ವಯಸ್ಸು ಇಳಿಕೆ ಕುರಿತು ವಿಪಕ್ಷಗಳಿಂದ ವಿರೋಧ ವ್ಯಕ್ತವಾಗುತ್ತಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಪ್ರಜಾಪ್ರಭುತ್ವ ಸಚಿವೆ ರುಷನಾರಾ ಅಲಿ ‘ಯುವಜನತೆ 16ನೇ ವಯಸ್ಸಿನಲ್ಲಿ ಕೆಲಸ ಮಾಡಬಹುದು, ತೆರಿಗೆ ಪಾವತಿಸಬಹುದು, ಸೈನ್ಯಕ್ಕೆ ಸೇರಬಹುದು. ಅವರು ತಮ್ಮನ್ನು ಪ್ರತಿನಿಧಿಸುವವರನ್ನು ಆರಿಸದಿರಲು ಯಾವುದೇ ಕಾರಣ ಇಲ್ಲ. ಅವರು ತಮ್ಮ ಸಮುದಾಯ ಮತ್ತು ದೇಶವನ್ನು ಭಾದಿಸುವ ಸಮಸ್ಯೆಗಳ ಬಗ್ಗೆ ಉತ್ಸುಕರಾಗಿದ್ದಾರೆ’ ಎಂದಿದ್ದಾರೆ.
ಮಹದೇಶ್ವರ ಬೆಟ್ಟ ದೇವಾಲಯ ಹುಂಡಿಯಲ್ಲಿ ಕಳೆದ 30 ದಿನಗಳಲ್ಲಿ ಸಂಗ್ರಹವಾಗಿದ್ದೆಷ್ಟು?
ಎಐ ಕನ್ನಡ ಕೃಷಿ ವೆಬ್ಸೈಟ್ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


