Friday, November 6, 2026
spot_img
More
    spot_img
    HomeLatest newsದೇಹದ ಮೇಲೆ ಡೆತ್‌ನೋಟ್‌ ಬರೆದು ಆತ್ಮಹತ್ಯೆ ಶರಣಾದ ಮಹಿಳೆ!

    ದೇಹದ ಮೇಲೆ ಡೆತ್‌ನೋಟ್‌ ಬರೆದು ಆತ್ಮಹತ್ಯೆ ಶರಣಾದ ಮಹಿಳೆ!

    ಹೊಸದಿಲ್ಲಿ: ಸಾಯಲು ಮುಂದಾಗುವವರು ಡೆತ್‌ನೋಟ್‌ ಏನಾದರೂ ಬರೆಯಬೇಕೆಂದರೆ ಈ ಹಿಂದೆ ಕಾಗದಗಳನ್ನು ಬಳಸುತ್ತಿದ್ದರು. ಆಧುನಿಕ ತಂತ್ರಜ್ಞಾನ ಯುಗದಲ್ಲಿ ಸಾವಿಗೂ ಮುನ್ನ ವಿಡಿಯೋ ರೆಕಾರ್ಡಿಂಗ್ ಮಾಡುವುದನ್ನೂ ಇತ್ತೀಚಿನ ದಿನಗಳಲ್ಲಿ ಕಾಣುತ್ತಿದ್ದೇವೆ.

    ಆದರೆ ಗಂಡನ ಮನೆಯವರಿಂದ ವರದಕ್ಷಿಣಿ ಕಿರುಕುಳಕ್ಕೆ ಒಳಗಾದ ಮಹಿಳೆಯೊಬ್ಬಳು ತನ್ನ ಕೈ, ಕಾಲು ಮತ್ತು ಹೊಟ್ಟೆ ಮೇಲೆ ಡೆತ್‌ನೋಟ್‌ ಬರೆದಿಟ್ಟು ಸಾವಿಗೆ ಶರಣಾದ ಪ್ರಕರಣ ಉತ್ತರಪ್ರದೇಶದ ಬಾಷ್‌ಪತ್‌ನಲ್ಲಿ ನಡೆದಿದೆ.

    ಪತಿ ಕುಂದನ್ ಮತ್ತು ಆತನ ಕುಟುಂಬಸ್ಥರು ನೀಡಿದ ಹಿಂಸೆಯನ್ನು 28 ವರ್ಷದ ಮನೀಷಾ ತನ್ನ ಕೈ, ಕಾಲು ಮತ್ತು ಹೊಟ್ಟೆಯ ಮೇಲೆ ಪೆನ್‌ನಿಂದ ಬರೆದು ಬಿಚ್ಚಿಟ್ಟಿದ್ದಾಳೆ. ಆಕೆ ಮಂಗಳವಾರ ರಾತ್ರಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು ‘ಕುಂದನ್ ಮತ್ತು ಆತನ ಕುಟುಂಬ ನನ್ನ ಸಾವಿಗೆ ಹೊಣೆ’ ಎಂಬುದಾಗಿ ದೇಹದ ಮೇಲೆ ಹಿಂದಿಯಲ್ಲಿ ಬರೆದುಕೊಂಡಿದ್ದರು.

    ಗಂಡ, ಅತ್ತೆ, ಮಾವ ಮತ್ತು ಮೈದುನ ತನಗೆ ನೀಡಿದ ಅಮಾನುಷ ಕಿರುಕುಳದ ಬಗ್ಗೆ ಮನೀಷಾ ಒಂದು ವಿಡಿಯೋ ಕೂಡ ಮಾಡಿದ್ದು ಅಳುತ್ತಾ ತನ್ನ ಗೋಳನ್ನು ವಿವರಿಸಿದ್ದಾಳೆ. ಅದರ ಕ್ಲಿಪ್ಪಿಂಗ್ ಪೊಲೀಸರಿಗೆ ಲಭಿಸಿದೆ. ಕಾರು ಮತ್ತು ಭಾರಿ ಹಣ ಕೊಡುವಂತೆ ಮಾಡುತ್ತಿದ್ದ ಬಲವಂತಕ್ಕೆ ತಾನು ಮಣಿಯದಿದ್ದಾಗ ವಿದ್ಯುತ್ ಶಾಕ್‌ನಿಂದ ಕೊಲ್ಲಲೂ ಕಿರಾತಕರು ಪ್ರಯತ್ನಿಸಿದ್ದರೆಂದು ಮನೀಷಾ ವಿವರಿಸಿದ್ದಾರೆ.

    Disclaimer: ಯಾವುದೇ ಸಮಸ್ಯೆಗೂ ಸಾವೊಂದೇ ಪರಿಹಾರವಲ್ಲ. ಆತ್ಮಹತ್ಯೆಯ ಯೋಚನೆ ಬಂದರೆ ನಿಮ್ಮ ನೆಚ್ಚಿನ ವ್ಯಕ್ತಿ ಜೊತೆ ಮಾತನಾಡಿ ಪರಿಹಾರ ಕಂಡುಕೊಳ್ಳಿ. ಇಲ್ಲವೇ ಈ ಸಹಾಯವಾಣಿಗೆ ಕರೆಮಾಡಿ: 9152987821

    ಮಹದೇಶ್ವರ ಬೆಟ್ಟ ದೇವಾಲಯ ಹುಂಡಿಯಲ್ಲಿ ಕಳೆದ 30 ದಿನಗಳಲ್ಲಿ ಸಂಗ್ರಹವಾಗಿದ್ದೆಷ್ಟು?

    ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search