ಹೈದರಾಬಾದ್: ಹೈದರಾಬಾದ್ನಲ್ಲಿ ನಿನ್ನೆ ( ಜುಲೈ 18 ) ಭಾರಿ ಮಳೆಯಿಂದಾಗಿ ರೈದುರ್ಗ್ ಪ್ರದೇಶದ ರಸ್ತೆಗಳು ಜಲಾವೃತವಾಗಿದ್ದು, ವಾಹನ ಸವಾರರು ನದಿಯಂತೆ ಹರಿಯುತ್ತಿರುವ ನೀರಿನಲ್ಲಿ ತಮ್ಮ ಬೈಕ್ಗಳನ್ನು ಉಳಿಸಿಕೊಳ್ಳಲು ಪರದಾಡಿದ್ದಾರೆ.
ಗಚ್ಚಿಬೌಲಿ, ಮಧಾಪುರ ಮತ್ತು ಹೈಟೆಕ್ ಸಿಟಿ ಪ್ರದೇಶಗಳಲ್ಲಿ ಕೇವಲ 30 ನಿಮಿಷಗಳ ಮಳೆಯೇ ಮುಖ್ಯ ರಸ್ತೆಗಳನ್ನು ನೀರಿನಿಂದ ತುಂಬಿಹೋಗಿದ್ದವು. ಹೀಗೆ ಹೈದರಾಬಾದ್ನ ಪ್ರಮುಖ ಟೆಕ್ಪಾರ್ಕ್ಗಳು ಕೇವಲ ಅರ್ಧ ಗಂಟೆ ಮಳೆಗೆ ನಲುಗಿಹೋಗಿದ್ದು, ಬೆಂಗಳೂರಿನಿಂದ ಹೈದರಾಬಾದ್ಗೆ ಬನ್ನಿ ಎಂದು ಕಾರ್ಪೋರೇಟ್ ಕಂಪನಿಗಳನ್ನು ಕರೆಯುತ್ತಿದ್ದ ಮಂದಿಗೆ ಮುಖಭಂಗವಾಗಿದೆ.
ಇನ್ನು ಹೈದರಾಬಾದ್ನಲ್ಲಿ ಈ ಪರಿ ಮಳೆಯಾದರೂ ರಾಷ್ಟ್ರೀಯ ಮಾಧ್ಯಮಗಳು ತುಟಿ ಬಿಚ್ಚದೇ ತೆಪ್ಪಗಿರುವುದನ್ನು ನೆಟ್ಟಿಗರು ಖಂಡಿಸಿದ್ದಾರೆ. ಇದೇ ಮಳೆ ಏನಾದರೂ ಬೆಂಗಳೂರಿನಲ್ಲಿ ಸುರಿದು ವಾಹನ ಸವಾರರು ಈ ಪರಿ ತೊಂದರೆ ಅನುಭವಿಸಿಬಿಟ್ಟಿದ್ದರೆ ಅದಕ್ಕೆಂದು ವಿಶೇಷ ಚರ್ಚಾ ವೇದಿಕೆ ಸಿದ್ಧಪಡಿಸಿಕೊಂಡುಬಿಡುತ್ತಿದ್ದರು ಎಂದು ಕಾಲೆಳೆದಿದ್ದಾರೆ.
Ekka First Day Collection: ‘ಎಕ್ಕ’ ಮೊದಲ ದಿನ ಬಾಕ್ಸ್ಆಫೀಸ್ ಕಲೆಕ್ಷನ್ ಎಷ್ಟು?
ಎಐ ಕನ್ನಡ ಕೃಷಿ ವೆಬ್ಸೈಟ್ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


