Monday, August 31, 2026
spot_img
More
    spot_img
    HomeEntertainmentEkka First Day Collection: 'ಎಕ್ಕ' ಮೊದಲ ದಿನ ಬಾಕ್ಸ್‌ಆಫೀಸ್ ಕಲೆಕ್ಷನ್‌ ಎಷ್ಟು?

    Ekka First Day Collection: ‘ಎಕ್ಕ’ ಮೊದಲ ದಿನ ಬಾಕ್ಸ್‌ಆಫೀಸ್ ಕಲೆಕ್ಷನ್‌ ಎಷ್ಟು?

    ನಿರ್ದೇಶಕ ರೋಹಿತ್‌ ಪದಕಿ ನಿರ್ದೇಶನ ಹಾಗೂ ಯುವ ರಾಜ್‌ಕುಮಾರ್‌ ಕಾಂಬಿನೇಷನ್‌ನಲ್ಲಿ ಮೂಡಿಬಂದಿರುವ ಎಕ್ಕ ಈ ವರ್ಷದ ನಿರೀಕ್ಷಿತ ಚಿತ್ರಗಳಲ್ಲೊಂದು. ಹಾಡುಗಳ ಮೂಲಕವೇ ಜನರನ್ನು ತಲುಪಿದ್ದ ಎಕ್ಕ ಚಿತ್ರ ಭರ್ಜರಿ ಪ್ರಚಾರವನ್ನು ಪ್ರೇಕ್ಷಕರಿಂದಲೇ ಪಡೆದುಕೊಂಡಿತ್ತು.

    Advertisement

    ಬಳಿಕ ಬಿಡುಗಡೆಯಾದ ಟ್ರೈಲರ್‌ ಸಹ ಸಿನಿ ರಸಿಕರನ್ನು ಚಿತ್ರಮಂದಿರಗಳತ್ತ ಕರೆತರುವ ಪ್ರಯತ್ನ ಮಾಡಿತು. ಹೀಗೆ ನಿರೀಕ್ಷೆಯೊಂದಿಗೆ ಬಿಡುಗಡೆಯಾದ ಎಕ್ಕ ಚಿತ್ರ ಮುಂಜಾನೆ ಪ್ರದರ್ಶನಗಳಲ್ಲಿ ನಿಧಾನಗತಿಯ ಆರಂಭ ಮಾಡಿದರೂ ಮೊದಲ ದಿನದ ರಾತ್ರಿ ಪ್ರದರ್ಶನ ಮುಗಿಯುವ ವೇಳೆಗೆ ರಾಜ್ಯದ ಪ್ರಮುಖ ನಗರಗಳ ಬಹುತೇಕ ಎಲ್ಲ ಚಿತ್ರಮಂದಿರಗಳಲ್ಲೂ ಹೌಸ್‌ಫುಲ್‌ ಬೋರ್ಡ್‌ ಹಾಕಿಸಿಕೊಂಡಿದೆ.

    ಹೌದು, ನಿನ್ನೆ ಬೆಳಗ್ಗೆ ಹಾಗೂ ಮಧ್ಯಾಹ್ನದ ಪ್ರದರ್ಶನಗಳಿಗಿಂತ ರಾತ್ರಿ ಪ್ರದರ್ಶನಗಳಿಗೆ ಭರ್ಜರಿ ರೆಸ್ಪಾನ್ಸ್‌ ಬಂದಿದ್ದು, ಎಕ್ಕ ಮೊದಲ ದಿನವೇ ಬಾಕ್ಸ್‌ಆಫೀಸ್‌ನಲ್ಲಿ ಸದ್ದು ಮಾಡಿದೆ. ವರ್ಷಪೂರ್ತಿ ಜನರನ್ನೇ ಕಾಣದ ಅದೆಷ್ಟೋ ಕುರ್ಚಿಗಳಿಗೆ ಕೆಲಸ ಸಿಕ್ಕಂತಾಗಿದೆ. ಹೀಗೆ ಮೊದಲ ದಿನವೇ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿರುವ ಎಕ್ಕ ಬಾಕ್ಸ್‌ಆಫೀಸ್‌ನಲ್ಲೂ ಒಳ್ಳೆಯ ಗಳಿಕೆ ಕಂಡಿದೆ.

    ಸ್ಯಾಕ್‌ನಿಕ್‌ ಬಾಕ್ಸ್‌ಆಫೀಸ್‌ ಟ್ರ್ಯಾಕಿಂಗ್‌ ವೆಬ್‌ಸೈಟ್‌ ಪ್ರಕಾರ ಎಕ್ಕ ಮೊದಲ ದಿನ 1.60 ಕೋಟಿ ನೆಟ್‌ ಕಲೆಕ್ಷನ್‌ ಮಾಡಿದೆ ಎಂದು ವರದಿ ಮಾಡಿದೆ. ಈ ಮೂಲಕ ಎಕ್ಕ ಮೊದಲ ದಿನ 2.5ರಿಂದ 3 ಕೋಟಿ ಗ್ರಾಸ್‌ ಕಲೆಕ್ಷನ್‌ ಮಾಡಿದೆ.

    ಮಾಂಸಾಹಾರ ಮಾರಾಟ ಮಾಡದಂತೆ ಕೆಎಫ್‌ಸಿ ಬಾಗಿಲು ಮುಚ್ಚಿದ ಹಿಂದೂ ರಕ್ಷಣಾ ದಳ; ವಿಡಿಯೊ

    ಕೃಷಿ ಎಐ ಕನ್ನಡ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading