Thursday, September 3, 2026
spot_img
More
    spot_img
    HomeBreaking Newsದರ್ಶನ್‌ ಜೈಲು ಸೇರಿದ್ದು ರಾಮನಗರದ ಆ ರಾಜಕಾರಣಿಯಿಂದ

    ದರ್ಶನ್‌ ಜೈಲು ಸೇರಿದ್ದು ರಾಮನಗರದ ಆ ರಾಜಕಾರಣಿಯಿಂದ

    ನಟ ದರ್ಶನ್‌ ಜೈಲು ಸೇರಿದ್ದರ ಹಿಂದೆ ಪ್ರಭಾವಿ ರಾಜಕಾರಣಿಯ ಪಾತ್ರವಿದೆ ಎಂದು ಹೇಳಲಾಗುತ್ತಿದೆ. ಸುಪ್ರೀಂಕೋರ್ಟ್‌ ದರ್ಶನ್‌ ಅವರಿಗೆ ನೀಡಿದ್ದ ಜಾಮೀನು ರದ್ದು ಮಾಡಿದ್ದರಿಂದ ಅವರು ಮತ್ತೆ ಜೈಲು ಸೇರಿದ್ದಾರೆ. ಈ ಹಿಂದೆ ದರ್ಶನ್‌ ಕೇಸ್‌ ಹಾಗೂ ಅವರ ಬಂಧನದ ಹಿಂದೆ ರಾಜಕಾರಣಿಗಳ ಕೈವಾಡವೂ ಇದೆ ಎಂಬ ಆರೋಪ ಕೇಳಿಬರುತ್ತಿದೆ!

    Advertisement

    ದರ್ಶನ್‌ ಜೈಲು ಸೇರಲು ಪ್ರಭಾವಿ ರಾಜಕಾರಣಿಯೊಬ್ಬರು ಕಾರಣ ಎಂದು ಲಾಯರ್‌ ಜಗದೀಶ್‌ ಹೇಳಿದ್ದಾರೆ! ಈ ಬಗ್ಗೆ ವಿಡಿಯೋ ಹಂಚಿಕೊಂಡಿರುವ ಜಗದೀಶ್‌ , ದರ್ಶನ್‌ ಪ್ರಕರಣವನ್ನು ಪ್ರಸ್ತಾಪಿಸಿ ಇದರ ಹಿಂದೆ ರಾಜಕಾರಣಿಗಳ ಕೈವಾಡ ಇದೆ, ಮುಖ್ಯವಾಗಿ ರಾಮನಗರದ ಆ ರಾಜಕಾರಣಿ ಎಂದು ಆರೋಪ ಮಾಡಿದ್ದಾರೆ.

    ́’2028ಕ್ಕೆ ನಮ್ಮಂತವರು ಸಿಎಂ ಆಗಬೇಕು. ಯಾಕಂದ್ರೆ ಸಾಮಾನ್ಯ ಜನರ ಪರ ಕೆಲಸ ಮಾಡೋಕೆ ಯಾವ ಶಾಸಕನೂ ಇಲ್ಲ. ಎಲ್ಲರೂ ಶ್ರೀಮಂತರು ಹಾಗೂ ಪವರ್‌ನಲ್ಲಿರುವವರ ಪರವಾಗಿ ಇದ್ದಾರೆ ಎಂದು ಬೇಸರ ಹೊರಹಾಕಿದ್ದಾರೆ. ಪ್ರಜ್ವಲ್‌ ರೇವಣ್ಣ ಹಾಗೂ ನಟ ದರ್ಶನ್‌ ಅವರ ಕೇಸ್‌ಗಳಲ್ಲಿ ತಮ್ಮ ರಾಜಕೀಯ ತೀಟೆಗಳನ್ನ ತೀರಿಸಿಕೊಳ್ಳೋಕೆ ಆ ರಾಜಕಾರಣಿಗಳು ಒಂದಾಗಿದ್ದಾರೆ’ ಎಂದು ಜಗದೀಶ್‌ ವಿಡಿಯೋದಲ್ಲಿ ಹೇಳಿದ್ದಾರೆ.

    ‘ದರ್ಶನ್‌ ಕೇಸ್‌ ಹಿಂದೆ ರಾಮನಗರದ ಒಬ್ಬರು ರಾಜಕಾರಣಿ ಇದ್ದಾರೆ ಎಂದು ಹೇಳಲಾಗುತ್ತಿದೆ. ದರ್ಶನ್‌ ಕೇಸ್‌ನಲ್ಲಿ ಒಬ್ಬರು ರಾಜಕಾರಣಿ ಕೆಲಸ ಮಾಡಿದ್ದರಿಂದ ಅವರನ್ನು ಜೈಲಿಗೆ ಹಾಕಿದ್ರು. ಇನ್ನು ಪ್ರಜ್ವಲ್‌ ರೇವಣ್ಣ ಕೇಸ್‌ನಲ್ಲಿ ಕನಕಪುರದ ರಾಜಕಾರಣಿ ಕೆಲಸ ಮಾಡಿದ್ದಕ್ಕೆ ಶಿಕ್ಷೆ ಆಯ್ತು’ ಎಂದು ಲಾಯರ್‌ ಜಗದೀಶ್‌ ಹೊಸ ಬಾಂಬ್‌ ಸಿಡಿಸಿದ್ದಾರೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading