ಅಯಾನ್ ಮುಖರ್ಜಿ ನಿರ್ದೇಶನದ ಬಾಲಿವುಡ್ ನಟ ಹೃತಿಕ್ ರೋಷನ್, ಜೂನಿಯರ್ ಎನ್ಟಿಆರ್ ಅಭಿನಯದ ‘ವಾರ್ 2’ ಸಿನಿಮಾವು ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡುತ್ತಿದೆ.
ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಬೆನ್ನಲ್ಲೇ ನಟ ಜೂನಿಯರ್ ಎನ್ಟಿಆರ್, ಹೃತಿಕ್ ರೋಷನ್, ಕಿಯಾರಾ ಅಡ್ವಾಣಿ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ. ‘ನನ್ನ ಅತ್ಯಂತ ಪ್ರೀತಿಯ ಪಾತ್ರಗಳಲ್ಲಿ ಕಬೀರ್ ಸಹ ಒಂದೂ, ಈ ಅದ್ಭುತ ಪಾತ್ರ ಹಾಗೂ ಚಿತ್ರಕ್ಕಾಗಿ ಧನ್ಯವಾದಗಳು’ ಎಂದು ಹೃತಿಕ್ ರೋಷನ್ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
ಆಗಸ್ಟ್ 14ರಂದು ಬಿಡುಗಡೆಯಾಗಿದ್ದ ‘ವಾರ್ 2’ ಸಿನಿಮಾವು ದೇಶಿಯ ಬಾಕ್ಸ್ ಆಫೀಸ್ನಲ್ಲಿ ₹200 ಕೋಟಿಗೂ ಅಧಿಕ ಗಳಿಕೆ ಕಂಡಿದೆ ಎಂದು ವರದಿಯಾಗಿದೆ. ಟ್ರೇಡ್ ಟ್ರ್ಯಾಕಿಂಗ್ ವೆಬ್ಸೈಟ್ ಸ್ಯಾಕ್ನಿಲ್ಕ್ ಪ್ರಕಾರ, ‘ವಾರ್ 2’ ಮೊದಲ ದಿನವೇ ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ ₹52 ಕೋಟಿ ಗಳಿಸಿತ್ತು. ಮರುದಿನ ₹57.35 ಕೋಟಿ ಗಳಿಸಿತ್ತು, ಇದುವರೆಗೆ ಸುಮಾರು ₹208 ಕೋಟಿ ಗಳಿಕೆ ಕಂಡಿದೆ ಎನ್ನಲಾಗಿದೆ.
,ಬೆಂಗಳೂರಿನಲ್ಲಿ ಆಪಲ್ನ ಬೃಹತ್ ಯೋಜನೆ: 1010 ಕೋಟಿ ರೂ. ವೆಚ್ಚದಲ್ಲಿ ಹೊಸ ಕಚೇರಿ!
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


