Tuesday, September 1, 2026
spot_img
More
    spot_img
    HomeLatest newsರಾಜ್ಯಾದ್ಯಂತ ವರುಣಾರ್ಭಟ: ಬೆಂಗಳೂರು ಸೇರಿ 9 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್!

    ರಾಜ್ಯಾದ್ಯಂತ ವರುಣಾರ್ಭಟ: ಬೆಂಗಳೂರು ಸೇರಿ 9 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್!

    ಕಳೆದ ಎರಡು ದಿನಗಳಿಂದ ರಾಜ್ಯಾದ್ಯಂತ ಮಳೆಯ ಆರ್ಭಟ ಜೋರಾಗಿದೆ. ಗುರುವಾರ ಸಂಜೆ ಶುರುವಾದ ವರ್ಷದಾರೆ, ಶುಕ್ರವಾರವೂ ನಿಂತಿಲ್ಲ. ಈ ವಾರಾಂತ್ಯದಲ್ಲಂತೂ ಮಳೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

    Advertisement

    ಬೆಂಗಳೂರಿನಲ್ಲಿ ರಾತ್ರಿಯಿಡೀ ಸುರಿದ ಧಾರಾಕಾರ ಮಳೆಗೆ ರಾಜಧಾನಿ ಜನರು ಕಂಗಾಲಾಗಿದ್ದಾರೆ. ನಗರದಾದ್ಯಂತ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ಬೆಳಗ್ಗೆಯೇ ವಾಹನ ಸವಾರರು ಮತ್ತು ಪಾದಚಾರಿಗಳು ಪರದಾಡುವಂತಾಗಿದೆ. ಇಂದು ಕೂಡ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

    ಯಾವ ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್?

    ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ವಿಜಯಪುರ, ಬೆಳಗಾವಿ, ಬಾಗಲಕೋಟೆ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಇದಲ್ಲದೆ, ಬೆಂಗಳೂರು, ಧಾರವಾಡ, ಯಾದಗಿರಿ ಸೇರಿದಂತೆ ರಾಜ್ಯದ ಅನೇಕ ಭಾಗಗಳಲ್ಲಿ ಮಳೆ ತನ್ನ ಅಬ್ಬರವನ್ನು ಮುಂದುವರೆಸಲಿದೆ.

    ಎಲ್ಲಿ ಜಲಾವೃತವಾಗಿದೆ?

    ಬೆಂಗಳೂರು ನಗರದಲ್ಲಿ ಗುರುವಾರ ರಾತ್ರಿ ಇಡೀ ಸುರಿದ ಜಿಟಿಜಿಟಿ ಮಳೆಗೆ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಬೆಳಗ್ಗೆ ವಾಹನ ಸವಾರರು ಪರದಾಡುವಂತಾಗಿದೆ. ಬಾಗಲಕೋಟೆ ಜಿಲ್ಲೆ ಬಾದಾಮಿಯ ಐತಿಹಾಸಿಕ ಅಗಸ್ತ್ಯತೀರ್ಥ ಹೊಂಡ ತುಂಬಿ ಹರಿಯುತ್ತಿದ್ದು, ಅಕ್ಕ ತಂಗಿ ಪಾಲ್ಸ್​ಗೆ ಜೀವಕಳೆ ಬಂದಿದೆ. ಯಾದಗಿರಿ ಜಿಲ್ಲೆಯ ವಡಗೇರ ತಾಲೂಕಿನ ಕಾಡಂಗೇರ ಗ್ರಾಮ ಜಲಾವೃತಗೊಂಡಿದ್ದು, ಮಕ್ಕಳು ಶಾಲೆಗೆ ಹೋಗಲು ಕಷ್ಟಪಡುವಂತಾಗಿದೆ.

    ಕರ್ನಾಟಕದ ಪ್ರಮುಖ ನಗರಗಳಲ್ಲಿ ಮಳೆ ಪ್ರಮಾಣ:

    ಕಲಬುರಗಿ: 9 ಸೆಂ.ಮೀ.

    ತುಮಕೂರು (ಗುಬ್ಬಿ): 8 ಸೆಂ.ಮೀ.

    ಬೆಂಗಳೂರು (ಯಲಹಂಕ): 7 ಸೆಂ.ಮೀ.

    ಉಡುಪಿ (ಸಿದ್ದಾಪುರ): 7 ಸೆಂ.ಮೀ.

    ರಾಯಚೂರು (ಮುದಗಲ್‌): 7 ಸೆಂ.ಮೀ.

    ಬಾಗಲಕೋಟೆ (ಕರೂರು): 7 ಸೆಂ.ಮೀ.

    ಬೆಂಗಳೂರಿನಲ್ಲಿ ಅರಕೆರೆ (33 ಮಿ.ಮೀ.), ಬೊಮ್ಮನಹಳ್ಳಿ (30 ಮಿ.ಮೀ.) ಸೇರಿದಂತೆ ಅನೇಕ ಕಡೆಗಳಲ್ಲಿ ಉತ್ತಮ ಮಳೆಯಾಗಿದೆ.

    ಹವಾಮಾನ ಇಲಾಖೆಯ ಪ್ರಕಾರ, ಮುಂದಿನ ಐದು ದಿನಗಳ ಕಾಲ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ. ಕರಾವಳಿ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಗದಗ, ಕೊಪ್ಪಳ, ರಾಯಚೂರು, ಯಾದಗಿರಿ, ಚಿತ್ರದುರ್ಗ, ಹಾಸನ, ಕೊಡಗು, ಕೋಲಾರ ಮತ್ತು ತುಮಕೂರು ಜಿಲ್ಲೆಗಳಲ್ಲಿಯೂ ಮಳೆ ಮುಂದುವರೆಯಲಿದೆ.

    ರಾಜ್ಯದ ವಿವಿಧೆಡೆ ಹವಾಮಾನ ಮತ್ತು ಉಷ್ಣಾಂಶದ ಮಾಹಿತಿ

    ಬೆಂಗಳೂರು ವಿಭಾಗದಲ್ಲಿ ದಾಖಲಾದ ಉಷ್ಣಾಂಶ:

    ಎಚ್‌ಎಎಲ್: ಗರಿಷ್ಠ 28.0°C, ಕನಿಷ್ಠ 20.3°C

    ನಗರ: ಗರಿಷ್ಠ 26.8°C, ಕನಿಷ್ಠ 20.2°C

    ಕೆಐಎಎಲ್: ಗರಿಷ್ಠ 29.0°C

    ಜಿಕೆವಿಕೆ: ಗರಿಷ್ಠ 27.0°C, ಕನಿಷ್ಠ 18.0°C

    ಕರಾವಳಿ ಭಾಗದಲ್ಲಿ ದಾಖಲಾದ ಉಷ್ಣಾಂಶ:

    ಹೊನ್ನಾವರ: ಗರಿಷ್ಠ 29.6°C, ಕನಿಷ್ಠ 23.9°C

    ಕಾರವಾರ: ಗರಿಷ್ಠ 29.4°C, ಕನಿಷ್ಠ 24.4°C

    ಮಂಗಳೂರು ಏರ್‌ಪೋರ್ಟ್: ಗರಿಷ್ಠ 27.2°C, ಕನಿಷ್ಠ 23.8°C

    ಶಕ್ತಿನಗರ: ಕನಿಷ್ಠ 28.0°C

    ಉತ್ತರ ಕರ್ನಾಟಕದಲ್ಲಿ ದಾಖಲಾದ ಉಷ್ಣಾಂಶ:

    ಬೆಳಗಾವಿ ಏರ್‌ಪೋರ್ಟ್: ಗರಿಷ್ಠ 28.0°C, ಕನಿಷ್ಠ 21.2°C

    ಬೀದರ್: ಗರಿಷ್ಠ 29.4°C, ಕನಿಷ್ಠ 22.4°C

    ವಿಜಯಪುರ: ಗರಿಷ್ಠ 29.0°C, ಕನಿಷ್ಠ 22.0°C

    ಧಾರವಾಡ: ಗರಿಷ್ಠ 26.8°C

    ಗದಗ: ಗರಿಷ್ಠ 29.8°C, ಕನಿಷ್ಠ 21.4°C

    ಕಲಬುರಗಿ: ಗರಿಷ್ಠ 30.2°C, ಕನಿಷ್ಠ 21.4°C

    ಹಾವೇರಿ: ಗರಿಷ್ಠ 26.6°C, ಕನಿಷ್ಠ 21.4°C

    ಕೊಪ್ಪಳ: ಗರಿಷ್ಠ 29.4°C, ಕನಿಷ್ಠ 23.5°C

    ರಾಯಚೂರು: ಕನಿಷ್ಠ 30.2°C

    ರಾಜ್ಯದಲ್ಲಿ ಮತ್ತೆ ಮಳೆ ಆರ್ಭಟ: ಬೆಂಗಳೂರು ಸೇರಿ 20 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

    ಎಐ ಅಡ್ವೋಕೇಟ್‌ ಅಸಿಸ್ಟೆಂಟ್‌ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading