ಪರಪ್ಪನ ಅಗ್ರಹಾರ ಜೈಲಿನಲ್ಲಿನ ಕೆಲ ಕೈದಿಗಳು ಮೊಬೈಲ್ ಬಳಸುತ್ತಿದ್ದದ್ದು ಹಾಗೂ ಮದ್ಯಪಾನ ಮಾಡಿ ಡಾನ್ಸ್ ಮಾಡುತ್ತಿದ್ದ ವಿಡಿಯೊಗಳು ವೈರಲ್ ಆಗಿ ಭಾರೀ ವಿವಾದ ಎದ್ದಿತ್ತು.
ಈ ವಿಡಿಯೊಗಳು ವೈರಲ್ ಆಗುತ್ತಿದ್ದಂತೆ ರಾಜ್ಯ ಸರ್ಕಾರದ ಕಾರ್ಯ ವೈಖರಿ ಬಗ್ಗೆ ವಿರೋಧ ಪಕ್ಷಗಳು ಕಿಡಿಕಾರಿದ್ದವು ಹಾಗೂ ಪ್ರತಿಭಟನೆ ನಡೆಸಿದ್ದವು. ಪೊಲೀಸ್ ಇಲಾಖೆಯ ಮೇಲೂ ಸಹ ಸಾಕಷ್ಟು ಟೀಕೆಗಳು ಕೇಳಿಬಂದವು. ಹೀಗಾಗಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಜೈಲಧಿಕಾರಿಗಳು ಹಾಗೂ ಪೊಲೀಸರು ಇದರ ಹಿಂದಿರುವ ವ್ಯಕ್ತಿಗಳು ಯಾರು ಎಂಬುದರ ಹಿಂದೆ ಬಿದ್ದಿದ್ದಾರೆ.
ಇನ್ನು ನಟ ದರ್ಶನ್ ಆಪ್ತ ಧನ್ವೀರ್ ಗೌಡನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಮೊದಲಿಗೆ ತನ್ನ ಮೊಬೈಲ್‌ನಲ್ಲಿ ಏನೂ ಇಲ್ಲ ಎಂಬುದನ್ನು ತೋರಿಸಿದ್ದ. ಆದರೆ ಇದೀಗ ಆತ ಮೊಬೈಲ್ ರಿಸೆಟ್ ಮಾಡಿ ಕೊಟ್ಟಿರುವ ಅನುಮಾನಗಳು ಮೂಡಿದ್ದು, ಎರಡನೇ ಬಾರಿಗೆ ನೋಟಿಸ್ ನೀಡಿ ವಿಚಾರಣೆಗೆ ಕರೆಸಿದ್ದಾರೆ.
ಹೀಗೆ ಎರಡನೇ ಬಾರಿಗೆ ವಿಚಾರಣೆಗೆ ಬಂದ ಧನ್ವೀರ್ ವಿಡಿಯೊ ಬಗ್ಗೆ ಬಾಯಿಬಿಟ್ಟಿದ್ದು, ತನಗೆ ವಕೀಲರೊಬ್ಬರಿಂದ ವಿಡಿಯೊ ಬಂತು ಹಾಗೂ ಅದನ್ನು ತಾನು ದರ್ಶನ್ ಪತ್ನಿ ವಿಜಯಲಕ್ಷ್ಮಿ ದರ್ಶನ್‌ಗೆ ಕಳುಹಿಸಿದ್ದಾಗಿ ಹೇಳಿಕೊಂಡಿದ್ದಾನೆ. ಕೇವಲ ಅವರಿಗೆ ಮಾತ್ರ ಕಳುಹಿಸಿದ್ದು, ಇನ್ಯಾರಿಗೂ ಸಹ ವಿಡಿಯೊವನ್ನು ನೀಡಿಲ್ಲ, ಅಲ್ಲದೇ ಬಳಿಕ ಕಳುಹಿಸಿದ್ದ ಸಂದೇಶವನ್ನು ಡಿಲಿಟ್ ಮಾಡಿದೆ ಎಂದೂ ಸಹ ಧನ್ವೀರ್ ಹೇಳಿಕೊಂಡಿದ್ದಾರೆ.
ಇನ್ನು ಈ ಕುರಿತಾಗಿ ಸಿಬ್ಬಂದಿ ಮೇಲಧಿಕಾರಿಗಳಿಗೆ ವಿಷಯ ತಿಳಿಸಿದ್ದು, ವಿಜಯಲಕ್ಷ್ಮಿ ಅವರನ್ನು ವಿಚಾರಣೆಗೆ ಕರೆಸುವ ಕುರಿತು ಚರ್ಚಿಸಿದ್ದಾರೆ. ಮೇಲಧಿಕಾರಿಗಳು ಧನ್ವೀರ್ ವಿಚಾರಣೆ ಮುಂದುವರಿಸಿ, ಆತ ಸಂಪೂರ್ಣ ಸತ್ಯ ಬಾಯಿ ಬಿಡದೇ ಇದ್ದರೆ ವಿಜಯಲಕ್ಷ್ಮಿ ಅವರನ್ನು ಕರೆದು ವಿಚಾರಣೆ ನಡೆಸಿ ಎಂದು ಸೂಚನೆ ನೀಡಿದೆ. ಈ ಮೂಲಕ ಧನ್ವೀರ್ ನೀಡಿದ ಹೇಳಿಕೆಯಿಂದ ವಿಜಯಲಕ್ಷ್ಮಿ ದರ್ಶನ್‌ಗೂ ಸಂಕಷ್ಟ ಎದುರಾಗಿದ್ದು, ಪೊಲೀಸರು ತಮಗೆ ಬೇಕಾದ ಮಾಹಿತಿಗಳು ಲಭ್ಯವಾಗದೇ ಇದ್ದರೆ ವಿಜಯಲಕ್ಷ್ಮಿ ದರ್ಶನ್ ಅವರನ್ನು ವಿಚಾರಣೆಗೆ ಕರೆಸುವ ಸಾಧ್ಯತೆಗಳಿವೆ.
ಬಿಡದಿಯಲ್ಲಿ ನೂತನ ಐಟಿ ಸಿಟಿ ಸ್ಥಾಪನೆ: ಡಿಸಿಎಂ ಡಿ.ಕೆ ಶಿವಕುಮಾರ್
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


