Wednesday, November 4, 2026
spot_img
More
    spot_img
    HomeEntertainmentಸಿನಿಮಾ ಪ್ರಚಾರ ಮಾಡುವುದಾಗಿ ದುಡ್ಡು ಪಡೆದು ವಂಚನೆ: ಪಿಆರ್‌ಒ ಹರೀಶ್‌ ಅರಸು ವಿರುದ್ಧ ಯಶ್‌ ತಾಯಿ...

    ಸಿನಿಮಾ ಪ್ರಚಾರ ಮಾಡುವುದಾಗಿ ದುಡ್ಡು ಪಡೆದು ವಂಚನೆ: ಪಿಆರ್‌ಒ ಹರೀಶ್‌ ಅರಸು ವಿರುದ್ಧ ಯಶ್‌ ತಾಯಿ ಪುಷ್ಪ ದೂರು

    ರಾಕಿಂಗ್‌ ಸ್ಟಾರ್‌ ಯಶ್‌ ತಾಯಿ ಪುಷ್ಪ ಚಿತ್ರರಂಗಕ್ಕೆ ಕಾಲಿಟ್ಟಿದ್ದು, ತಮ್ಮದೇ ಆದ ಸ್ವಂತ ಚಿತ್ರ ನಿರ್ಮಾಣ ಸಂಸ್ಥೆಯನ್ನು ನಿರ್ಮಿಸಿದ್ದಾರೆ. ಈ ಬ್ಯಾನರ್‌ ಅಡಿಯಲ್ಲಿ ಕೊತ್ತಲವಾಡಿ ಎಂಬ ಚಿತ್ರವನ್ನು ನಿರ್ಮಾಣ ಮಾಡಿದ್ದ ಪುಷ್ಪ ನಿರ್ಮಾಪಕಿಯಾಗಿ ತಮ್ಮ ಸೇವೆ ಆರಂಭಿಸಿದ್ದರು.

    ಇನ್ನು ಚಿತ್ರ ಬಿಡುಗಡೆಯಾಗಿ ಒಟಿಟಿಗೂ ಸಹ ಬಂದಾಗಿದೆ. ಈ ಸಮಯದಲ್ಲಿ ಚಿತ್ರ ವಿವಾದಕ್ಕೆ ಸಿಲುಕಿದ್ದು, ಚಿತ್ರವನ್ನು ಪ್ರಚಾರ ಮಾಡಿದ್ದ ಪ್ರಚಾರಕ ಹರೀಶ್‌ ಅರಸು ವಿರುದ್ಧ ಪುಷ್ಪ ಅವರು ದೂರನ್ನು ದಾಖಲಿಸಿದ್ದಾರೆ.

    ಚಿತ್ರದ ಪ್ರಚಾರದ ಸಮಯದಲ್ಲಿ ಒಟ್ಟಾರೆ ಎಲ್ಲ ಪ್ರಚಾರವನ್ನು 23 ಲಕ್ಷ ರೂಪಾಯಿಗಳಲ್ಲಿ ಮುಗಿಸಿಕೊಡುತ್ತೇವೆ ಎಂದು ಹೇಳಿ ಹಣ ಪಡೆದುಕೊಂಡಿದ್ದ ಹರೀಶ್‌ ಅರಸು ಬಳಿಕ ನಿರ್ದೇಶಕರಿಂದ ಹಲವು ಬಾರಿ ಹಣ ಪಡೆದು ಸುಮಾರು 64 ಲಕ್ಷ ಹಣ ಪಡೆದಿರುವುದಾಗಿ ಆರೋಪಿಸಲಾಗಿದೆ.

    ಹೀಗೆ ಹಣ ಪಡೆದ ಬಳಿಕ ಚಿತ್ರಕ್ಕೆ ಪ್ರಚಾರ ಕಾರ್ಯವನ್ನು ಮಾಡದೇ ಅದರ ಬದಲಾಗಿ ಚಿತ್ರದ ಬಗ್ಗೆ ಅಪಪ್ರಚಾರ ಮಾಡಿರುವ ಆರೋಪವನ್ನೂ ಸಹ ಮಾಡಿರುವ ಪುಷ್ಪ ಹೈಗ್ರೌಂಡ್ಸ್‌ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ ಹಾಗೂ ಚಲನಚಿತ್ರ ವಾಣಿಜ್ಯ ಮಂಡಳಿಗೂ ಸಹ ದೂರನ್ನು ಕೊಟ್ಟಿದ್ದಾರೆ.

    ಹರೀಶ್‌ ಅರಸು, ಮನು, ನಿತಿನ್‌, ಮಹೇಶ್‌ ಗುರು ಹಾಗೂ ಸ್ವರ್ಣಲತ ಎಂಬುವರ ವಿರುದ್ಧ ದೂರು ದಾಖಲಾಗಿದೆ. ಇನ್ನು ಈ ಕುರಿತು ಸುದ್ದಿ ವಾಹಿನಿಗಳ ಜತೆ ಮಾತನಾಡಿದ ಪುಷ್ಪ ಹರೀಶ್‌ ಅರಸು ಹಣ ಪಡೆದುಕೊಳ್ಳುವುದಲ್ಲದೇ ಹಣದ ಲೆಕ್ಕ ಕೇಳಿದರೆ ಆತನ ವಿರುದ್ಧ ಹಾಗೂ ಚಿತ್ರದ ಬಗ್ಗೆ ಅಪಪ್ರಚಾರ ಮಾಡುವುದಾಗಿ ತಮ್ಮ ನಿರ್ದೇಶಕರಿಗೆ ಬೆದರಿಕೆ ಹಾಕಿದ್ದ ಎಂದು ಆರೋಪಿಸಿದ್ದಾರೆ. ಇನ್ನು ನಿರ್ದೇಶಕರು ಚಿತ್ರ ಮುಗಿದ ಬಳಿಕ ನೋಡಿಕೊಳ್ಳೋಣ ಎಂದು ಸುಮ್ಮನಿದ್ದು, ಇದೀಗ ಲೆಕ್ಕ ಕೇಳಿದರೆ ಸುದ್ದಿ ವಾಹಿನಿಗಳಲ್ಲಿ ನಿನ್ನ ಬಂಡವಾಳ ಬಿಚ್ಚಿಡುತ್ತೇನೆ, ಅಪಪ್ರಚಾರ ಮಾಡಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ಪುಷ್ಪ ತಿಳಿಸಿದ್ದಾರೆ.

    ಕೇವಲ ತನಗೆ ಮಾತ್ರವಲ್ಲ, ಹರೀಶ್‌ ಅರಸು ಈ ರೀತಿ ಅನೇಕ ನಿರ್ಮಾಪಕರಿಗೆ ಮೋಸ ಮಾಡಿದ್ದಾನೆ, ಆ ನಿರ್ಮಾಪಕರೇ ತಮ್ಮ ಬಳಿ ಇದರ ಬಗ್ಗೆ ಹೇಳಿದ್ದು, ಯಾರೂ ಸಹ ಹೇಳಿಕೊಳ್ಳಲು ಮುಂದೆ ಬಂದಿಲ್ಲ ಎಂದು ಪುಷ್ಪ ತಿಳಿಸಿದ್ದಾರೆ.

    ಕೇಂದ್ರದ ‘ನ್ಯೂ ರೆಂಟಲ್ ರೂಲ್ಸ್ 2025’ ಇನ್ಮುಂದೆ 2 ತಿಂಗಳ ಡೆಪಾಸಿಟ್ ಮಾತ್ರ! ಮಾಲೀಕರು, ಬಾಡಿಗೆದಾರರಿಗೆ ಫುಲ್ ಡೀಟೇಲ್ಸ್!


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search