ನವದೆಹಲಿ: ದೇಶಾದ್ಯಂತ ಲಕ್ಷಾಂತರ ಜನರು ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ಆದರೆ, ಬಾಡಿಗೆ ವ್ಯವಹಾರಗಳಲ್ಲಿ ಪಾರದರ್ಶಕತೆ ಕೊರತೆ ಮತ್ತು ವಿವಾದಗಳ ವಿಳಂಬದಿಂದಾಗಿ ಬಾಡಿಗೆದಾರರು ಹಾಗೂ ಮಾಲೀಕರು ಪರದಾಡುತ್ತಿದ್ದರು. ಈ ಸಮಸ್ಯೆಗಳಿಗೆ ಬ್ರೇಕ್ ಹಾಕಲು ಕೇಂದ್ರ ಸರ್ಕಾರವು ಹೊಸ ಬಾಡಿಗೆ ಒಪ್ಪಂದ ನಿಯಮಗಳು 2025 (New Rent Agreement 2025) ಅನ್ನು ಜಾರಿಗೆ ತರಲು ಸಿದ್ಧತೆ ನಡೆಸಿದೆ.
ಮಾದರಿ ಹಿಡುವಳಿ ಕಾಯಿದೆ (MTA) ಮತ್ತು ಇತ್ತೀಚಿನ ಕೇಂದ್ರ ಬಜೆಟ್‌ನ ಅಂಶಗಳ ಆಧಾರದ ಮೇಲೆ ರೂಪಿಸಲಾಗಿರುವ ಈ ನಿಯಮಗಳು, ಬಾಡಿಗೆ ವಹಿವಾಟಿಗೆ ಒಂದು ಸುಸಂಘಟಿತ ಚೌಕಟ್ಟನ್ನು ಒದಗಿಸಲಿದೆ.ಪ್ರತಿ ಬಾಡಿಗೆ ಕರಾರಿಗೆ ಸಹಿ ಮಾಡಿದ ಎರಡು ತಿಂಗಳೊಳಗೆ ಅದನ್ನು ನೋಂದಾಯಿಸಬೇಕು.
ಇದನ್ನು ಆಯಾ ರಾಜ್ಯಗಳ ಆನ್‌ಲೈನ್ ಆಸ್ತಿ ಪೋರ್ಟಲ್‌ಗಳ ಮೂಲಕ ಅಥವಾ ಸ್ಥಳೀಯ ಉಪ ನೋಂದಣಾಧಿಕಾರಿ (Sub-Registrar) ಕಚೇರಿಯಲ್ಲಿ ಮಾಡಬಹುದು.ದಂಡದ ಎಚ್ಚರಿಕೆ: ಈ ನಿಯಮ ಪಾಲಿಸದ ಮನೆ ಮಾಲೀಕರಿಗೆ ₹5,000 ದಂಡ ವಿಧಿಸಲಾಗುತ್ತದೆ
ಬಾಡಿಗೆದಾರರಿಗೆ ಹೊಸ ಪ್ರಮುಖ ಬದಲಾವಣೆಗಳು
1.ನೋಂದಣಿ ಕಡ್ಡಾಯ (Mandatory Registration)ಎಲ್ಲಾ ಬಾಡಿಗೆ ಒಪ್ಪಂದಗಳನ್ನು ಎರಡು ತಿಂಗಳೊಳಗೆ ಕಡ್ಡಾಯವಾಗಿ ನೋಂದಾಯಿಸಬೇಕು. ನೋಂದಾಯಿಸದಿದ್ದರೆ ದಂಡ ವಿಧಿಸಲಾಗುತ್ತದೆ.
2.ಠೇವಣಿ ಮಿತಿ (Capped Security Deposits):ವಸತಿ ಮನೆಗಳಿಗೆ: ಗರಿಷ್ಠ ಎರಡು ತಿಂಗಳ ಬಾಡಿಗೆ ಮೊತ್ತವಷ್ಟೆ ಠೇವಣಿ.ವಾಣಿಜ್ಯ ಸ್ಥಳಗಳಿಗೆ ಗರಿಷ್ಠ ಆರು ತಿಂಗಳ ಬಾಡಿಗೆ ಮೊತ್ತವಷ್ಟೆ ಠೇವಣಿ.
3.ಊಹಿಸಬಹುದಾದ ಬಾಡಿಗೆ ಏರಿಕೆ (Predictable Rent Hikes)ಬಾಡಿಗೆ ಹೆಚ್ಚಳವನ್ನು ಮಾಲೀಕರು ನಿಗದಿತ ನಿಯಮಗಳಂತೆ ಮಾಡಬೇಕು ಮತ್ತು ಬಾಡಿಗೆದಾರರಿಗೆ ಮುಂಚಿತವಾಗಿ ಲಿಖಿತ ಸೂಚನೆ ನೀಡಬೇಕು.
4.ನ್ಯಾಯಯುತ ತೆರವು (Fair Evictions)ಬಾಡಿಗೆದಾರರನ್ನು ಏಕಾಏಕಿ ಹೊರಹಾಕುವುದನ್ನು ತಡೆಯಲು, ತೆರವು ಪ್ರಕ್ರಿಯೆಗಳು ಸ್ಪಷ್ಟವಾಗಿ ನಿರ್ದಿಷ್ಟಗೊಳಿಸಲಾಗಿದೆ.
5.ತ್ವರಿತ ವಿವಾದ ಪರಿಹಾರ (Faster Dispute Resolution)ವಿವಾದಗಳನ್ನು ವೇಗವಾಗಿ ಇತ್ಯರ್ಥಪಡಿಸಲು ವಿಶೇಷ ಬಾಡಿಗೆ ನ್ಯಾಯಾಲಯಗಳು ಮತ್ತು ನ್ಯಾಯಾಧಿಕರಣಗಳು ರಚಿಸಲಾಗುತ್ತಿವೆ. ಗರಿಷ್ಠ 60 ದಿನಗಳೊಳಗೆ ವಿವಾದ ಪರಿಹಾರವಾಗುವ ನಿರೀಕ್ಷೆ ಇದೆ.
ನೋಂದಾಯಿತ ಬಾಡಿಗೆ ಒಪ್ಪಂದಗಳಿಂದ ಮನೆ ಮಾಲೀಕರಿಗೆ ಅನುಕೂಲಗಳು!
1.ಹೆಚ್ಚಿದ ಟಿಡಿಎಸ್ ವಿನಾಯಿತಿ ಬಾಡಿಗೆ ಆದಾಯದ ಮೇಲಿನ ಟಿಡಿಎಸ್ ಮಿತಿಯನ್ನು ವಾರ್ಷಿಕ ₹2.4 ಲಕ್ಷದಿಂದ ₹6 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಇದರಿಂದ ಮಾಲೀಕರಿಗೆ ಹಣದ ಹರಿವು (cash flow) ಸುಧಾರಿಸುತ್ತದೆ.
2.ತೆರಿಗೆ ವರದಿ ಸರಳೀಕರಣ ಈಗ ಬಾಡಿಗೆ ಆದಾಯವನ್ನು ‘ವಸತಿ ಆಸ್ತಿಯಿಂದ ಆದಾಯ’ ವಿಭಾಗದ ಅಡಿಯಲ್ಲಿ ವರದಿ ಮಾಡಲಾಗುತ್ತದೆ. ಇದು ತೆರಿಗೆ ಸಲ್ಲಿಸುವ ಪ್ರಕ್ರಿಯೆಯನ್ನು ಇನ್ನಷ್ಟು ಸುಲಭಗೊಳಿಸುತ್ತದೆ.
3.ಪಾವತಿ ತಪ್ಪಿಸಿದರೆ ತ್ವರಿತ ಕ್ರಮ ಸತತ ಮೂರು ಅಥವಾ ಅದಕ್ಕಿಂತ ಹೆಚ್ಚು ತಿಂಗಳ ಬಾಡಿಗೆ ಪಾವತಿಸಲಾಗದಿದ್ದರೆ, ಮಾಲೀಕರು ತಕ್ಷಣವೇ ಬಾಡಿಗೆ ನ್ಯಾಯಾಧಿಕರಣಕ್ಕೆ (Rent Tribunal) ಪ್ರಕರಣ ದಾಖಲಿಸಿ ವೇಗವಾದ ಪರಿಹಾರ ಪಡೆಯಬಹುದು.
4.ಆಸ್ತಿ ಸುಧಾರಣೆಗೆ ಪ್ರೋತ್ಸಾಹ ಕೈಗೆಟುಕುವ ಬಾಡಿಗೆ ಕಾಪಾಡುವ ಅಥವಾ ಇಂಧನ-ದಕ್ಷ ಸುಧಾರಣೆಗಳು ಮಾಡುವ ಮಾಲೀಕರು ರಾಜ್ಯ ಸರ್ಕಾರದ ಯೋಜನೆಗಳ ಅಡಿಯಲ್ಲಿ ತೆರಿಗೆ ಸೌಲಭ್ಯಗಳು ಪಡೆಯಲು ಅರ್ಹರಾಗಬಹುದು
ನಿಮ್ಮ ಬಾಡಿಗೆ ಒಪ್ಪಂದವನ್ನು ನೋಂದಾಯಿಸುವುದು ಹೇಗೆ?
ರಾಜ್ಯ ಪೋರ್ಟಲ್‌ಗೆ ಭೇಟಿ ನೀಡಿ ನಿಮ್ಮ ರಾಜ್ಯದ ಆಸ್ತಿ ನೋಂದಣಿ ಪೋರ್ಟಲ್‌ಗೆ ಭೇಟಿ ನೀಡಿ.
ಗುರುತಿನ ಪುರಾವೆಗಳನ್ನು ಅಪ್‌ಲೋಡ್ ಮಾಡಿ ಮಾಲೀಕ ಮತ್ತು ಬಾಡಿಗೆದಾರರ ಗುರುತಿನ ಪುರಾವೆಗಳನ್ನು ಅಪ್‌ಲೋಡ್ ಮಾಡಿ.
ಬಾಡಿಗೆ ವಿವರಗಳನ್ನು ಭರ್ತಿ ಮಾಡಿ ಒಪ್ಪಂದದ ಬಾಡಿಗೆ ವಿವರಗಳನ್ನು ತುಂಬಿರಿ.
ಇ-ಸಹಿ ಮತ್ತು ಸಲ್ಲಿಕೆ ಒಪ್ಪಂದಕ್ಕೆ ಇ-ಸಹಿ (e-sign) ಮಾಡಿ ಮತ್ತು ಅದನ್ನು ಸಲ್ಲಿಸಿ.
10ನೇ ತರಗತಿ ಪಾಸಾದವರಿಗೆ ಕೇಂದ್ರ ಗುಪ್ತಚರ ಇಲಾಖೆಯಲ್ಲಿ ಉದ್ಯೋಗ; ₹56,900 ವರೆಗೆ ಸಂಬಳ!
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


