Tuesday, November 3, 2026
spot_img
More
    spot_img
    HomeLatest newsಆಂಧ್ರದಲ್ಲಿ 1,300 ಕೋಟಿ ಹೂಡಿಕೆ ಮಾಡಿದ ಬೆಂಗಳೂರು ಮೂಲದ ಕಂಪನಿ

    ಆಂಧ್ರದಲ್ಲಿ 1,300 ಕೋಟಿ ಹೂಡಿಕೆ ಮಾಡಿದ ಬೆಂಗಳೂರು ಮೂಲದ ಕಂಪನಿ

    ಬೆಂಗಳೂರು ನಗರದಲ್ಲಿ ಮೂಲ ಸೌಕರ್ಯಗಳು ಸರಿಯಾಗಿಲ್ಲ, ನಮ್ಮಲ್ಲಿಗೆ ಬನ್ನಿ ಎಂದು ಐಟಿ ಕಂಪನಿಗಳಿಗೆ ಆಂಧ್ರ ಪ್ರದೇಶ ಸರ್ಕಾರ ಆಹ್ವಾನವನ್ನು ನೀಡುತ್ತಿದೆ. ರಾಜ್ಯಕ್ಕೆ ಆಗಮಿಸುವ ಹೂಡಿಕೆದಾರರನ್ನು ಸೆಳೆಯಲು ಪಕ್ಕದ ರಾಜ್ಯ ಪ್ರಯತ್ನವನ್ನು ಪಡೆಯುತ್ತಿದೆ. ಇಂತಹ ಸಂದರ್ಭದಲ್ಲಿಯೇ ಬೆಂಗಳೂರು ಮೂಲದ ಕಂಪನಿಯೊಂದು ಆಂಧ್ರ ಪ್ರದೇಶದಲ್ಲಿ ಭಾರೀ ಹೂಡಿಕೆ ಮಾಡಲಿದೆ.

    ಹೌದು ಬೆಂಗಳೂರು ನಗರ ಮೂಲದ ಸರಳ ಏವಿಯೇಷನ್ ಆಂಧ್ರ ಪ್ರದೇಶದಲ್ಲಿ 1,300 ಕೋಟಿ ರೂ. ಹೂಡಿಕೆ ಮಾಡಲಿದೆ. 500 ಎಕರೆ ಪ್ರದೇಶದಲ್ಲಿ ಏರೋಸ್ಪೇಸ್ ಫ್ಯಾಕ್ಟರಿ ನಿರ್ಮಾಣವಾಗಲಿದ್ದು, ಈ ಕುರಿತು ಸಿಎಂ ಚಂದ್ರಬಾಬು ನಾಯ್ಡು ಸಮ್ಮುಖದಲ್ಲಿ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ.

    ಸರಳ ಏವಿಯೇಷನ್ ಪ್ರಕಾರ ಮುಂಬರುವ ಗಿಗಾ ಕ್ಯಾಂಪಸ್ ಭಾರತದ ಮೊದಲ ಸಂಪೂರ್ಣ ಸಂಯೋಜಿತ eVTOL ಉತ್ಪಾದನಾ ವ್ಯವಸ್ಥೆಯಾಗಿರಲಿದೆ. ಇದು ಉತ್ಪಾದನೆ, ಫ್ಲೈಟ್ ಟೆಸ್ಟಿಂಗ್, ಪ್ರಮಾಣೀಕರಣ, ತರಬೇತಿ ಮತ್ತು ನಿರ್ವಹಣೆ ಎಲ್ಲವನ್ನೂ ಒಳಗೊಂಡಿರುತ್ತದೆ. ಅಂತಾರಾಷ್ಟ್ರೀಯ ಏರೋಸ್ಪೇಸ್ ಮಾನದಂಡಗಳಿಗೆ ಅನುಗುಣವಾಗಿ ವಿನ್ಯಾಸಗೊಂಡ ಈ ಸೌಲಭ್ಯವು ವಾರ್ಷಿಕವಾಗಿ 1,000 ವಿಮಾನಗಳವರೆಗೆ ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದ್ದು, ಇದು ವಿಶ್ವದ ಅತಿದೊಡ್ಡ eVTOL ಉತ್ಪಾದನಾ ಕೇಂದ್ರಗಳಲ್ಲಿ ಒಂದಾಗಲಿದೆ.

    ನವೆಂಬರ್ 17ರಂದು ಈ ಕುರಿತು ಒಪ್ಪಂದಕ್ಕೆ ಸಹಿ ಹಾಕಲಾಗಿದೆ. 1,300 ಕೋಟಿ ಮೊತ್ತದ ಪ್ರಾರಂಭಿಕ ಹೂಡಿಕೆ ಮತ್ತು ಭವಿಷ್ಯದಲ್ಲಿ ಹೆಚ್ಚುವರಿ ಹೂಡಿಕೆಗಳನ್ನು ಮಾಡುವುದು. ಭಾರತವನ್ನು ಭವಿಷ್ಯದ ವಿಮಾನಯಾನ ತಂತ್ರಜ್ಞಾನಗಳಲ್ಲಿ ಜಾಗತಿಕ ಮಟ್ಟದಲ್ಲಿ ಗುರುತಿಸುವಂತೆ ಮಾಡಲಾಗುತ್ತದೆ ಎಂದು ಹೇಳಿದೆ.

    ವಿಶ್ವದಲ್ಲಿ ಕ್ಯಾಲಿಫೋರ್ನಿಯಾ ಮತ್ತು ಮ್ಯೂನಿಚ್ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಮಾತ್ರ eVTOL ಉತ್ಪಾದನಾ ಹಬ್‌ಗಳನ್ನು ಒಳಗೊಂಡಿದೆ. ಆಂಧ್ರ ಪ್ರದೇಶ ಮುಖ್ಯಮಂತ್ರಿಗಳ ಮಾರ್ಗದರ್ಶನದಲ್ಲಿ ರಾಜ್ಯದಲ್ಲಿ ಇದೇ ಮಾದರಿಯ ಹಬ್ ನಿರ್ಮಾಣವಾಗಲಿದೆ. ಇಂತಹ ಜಾಗತಿಕ ಪರಿವರ್ತನೆಗೆ ಸರಳ ಏವಿಯೇಷನ್ ಸಹ ಪಾಲುದಾರ ಆಗಿರುವುದು ಸಂತಸ ತಂದಿದೆ ಎಂದು ತಿಳಿಸಿದೆ.

    ಸರಳ ಏವಿಯೇಷನ್ ಸಹ-ಸಂಸ್ಥಾಪಕ ಮತ್ತು ಸಿಟಿಒ ರಾಕೇಶ್ ಗಾಂವ್ಕರ್ ಮಾತನಾಡಿ, “ವಿಶ್ವದ ಅತಿದೊಡ್ಡ ಸ್ಕೈ ಫ್ಯಾಕ್ಟರಿಯೊಂದಿಗೆ ನಾವು ಭಾರತವನ್ನು ವಿಮಾನಯಾನ ಕ್ಷೇತ್ರದ ಮುಂದಿನ ಯುಗದ ಕೇಂದ್ರವನ್ನಾಗಿ ಮಾಡಲು ಬಯಸುತ್ತೇವೆ. ಈ ಗಿಗಾ ಸೌಲಭ್ಯ ಭವಿಷ್ಯದ ವಿಮಾನಗಳನ್ನು ರೂಪಿಸಲಿದೆ, ಸಾವಿರಾರು ಉನ್ನತ ಕೌಶಲ್ಯ ಉದ್ಯೋಗಗಳನ್ನು ಸೃಷ್ಟಿಸಲಿದೆ” ಎಂದು ಹೇಳಿದ್ದಾರೆ.

    ಸ್ಕೈ ಫ್ಯಾಕ್ಟರಿಯು ಕಾಂಪೋಸಿಟ್‌ಗಳು, ಪವರ್‌ಟ್ರೇನ್‌ಗಳು, ವೈರ್ ಹಾರ್ನೆಸ್‌ಗಳು, ಲ್ಯಾಂಡಿಂಗ್ ಗೇರ್ ವ್ಯವಸ್ಥೆಗಳು, ಫ್ಲೈಟ್ ಕಂಟ್ರೋಲ್ ಕಂಪ್ಯೂಟರ್‌ಗಳು ಮತ್ತು ಎಂಬೆಡೆಡ್ ಸಿಸ್ಟಮ್‌ಗಳಿಗೆ ಸುಧಾರಿತ ಉತ್ಪಾದನಾ ಲೈನ್‌ಗಳನ್ನು ಹೊಂದಿರಲಿದೆ. ಇದರೊಂದಿಗೆ ಭಾರತದ ಅತಿದೊಡ್ಡ ವಿಂಡ್ ಟನಲ್, ಎರಡು ಕಿಲೋಮೀಟರ್ ಉದ್ದದ ವಿಶೇಷ ರನ್‌ವೇಯೂ ಇರಲಿದೆ.

    ಈ ಕ್ಯಾಂಪಸ್‌ನಲ್ಲಿ ಆಧುನಿಕ ಆರ್ & ಡಿ ಲ್ಯಾಬ್‌ಗಳು, ಸಿಮ್ಯುಲೇಷನ್ ಪರಿಸರಗಳು, ಪೈಲಟ್ ತರಬೇತಿ ಕೇಂದ್ರಗಳು ಮತ್ತು MRO ಘಟಕಗಳನ್ನು ಹೊಂದಿರಲಿದೆ. ಇದರಿಂದ eVTOL ವಿಮಾನಗಳನ್ನು ಸಂಪೂರ್ಣವಾಗಿ ಮೊದಲ ಬಾರಿಗೆ ಭಾರತದೊಳಗೆ ವಿನ್ಯಾಸಗೊಳಿಸಲು, ನಿರ್ಮಿಸಲು ಸಾಧ್ಯವಾಗಲಿದೆ.

    2023ರಲ್ಲಿ ಸ್ಥಾಪಿಸಲಾದ ಸರಳ ಏವಿಯೇಷನ್ ಸಾರ್ಲಾ ಏವಿಯೇಷನ್, ಲಿಲಿಯಮ್, ವೋಲೋಕಾಪ್ಟರ್ ಮತ್ತು ಜಾಬಿ ಏವಿಯೇಷನ್ ನಂತಹ ಪ್ರಮುಖ ಜಾಗತಿಕ eVTOL ಕಂಪನಿಗಳನ್ನು ಒಟ್ಟುಗೂಡಿಸಿದೆ. 6 ಸೀಟುಗಳ ಎಲೆಕ್ಟ್ರಿಕ್ ಫ್ಲೈಯಿಂಗ್ ಟ್ಯಾಕ್ಸಿಯನ್ನು ಇದು ಭಾರತದ ಅತ್ಯಂತ ದಟ್ಟಣೆಯ ನಗರಗಳಾದ ಬೆಂಗಳೂರು, ಮುಂಬೈ, ದೆಹಲಿ ಮತ್ತು ಪುಣೆಯಲ್ಲಿ ಪ್ರಾರಂಭಿಸುವ ಮೂಲಕ ನಗರ ಪ್ರಯಾಣದ ಸಮಯವನ್ನು ಕಡಿಮೆ ಮಾಡುವ ಗುರಿಯನ್ನು ಕಂಪನಿ ಹೊಂದಿದೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search