ಬೆಂಗಳೂರು ಎಲ್ಲ ವರ್ಗದ ಜನರಿಗೆ ಸೂರಾಗಿರುವ ತಾಣ. ಯಾರೇ ಬಂದರೂ ಬಿಗಿದಪ್ಪಿಕೊಳ್ಳುವ ಬೆಂಗಳೂರು ವಲಸಿಗರ ಪಾಲಿನ ಸ್ವರ್ಗ. ಇನ್ನು ಇಲ್ಲಿಗೆ ಕೆಲಸಕ್ಕೆಂದು ಬರುವವರ ಪೈಕಿ ಬಹುತೇಕರು ಇಲ್ಲಿನ ನಿಯಮಗಳನ್ನು ಪಾಲಿಸುತ್ತಾ ಉತ್ತಮ ಜೀವನ ಕಟ್ಟಿಕೊಳ್ಳುವತ್ತ ಚಿತ್ತ ನೆಟ್ಟಿದ್ದರೆ, ಕೆಲ ಕಿಡಿಗೇಡಿಗಳು ಮಾತ್ರ ಅನಗತ್ಯ ವಿವಾದಗಳನ್ನು ನಿರ್ಮಿಸಿ ತಮ್ಮ ಹೆಸರಿಗೆ ತಾವೇ ಮಸಿ ಬಳಿದುಕೊಳ್ಳುವ ಕೆಲಸ ಮಾಡಿಕೊಳ್ಳುತ್ತಿದ್ದಾರೆ.
ಹಲವು ಬಾರಿ ವಲಸಿಗರು ನಗರದ ಸಾರ್ವಜನಿಕ ಪ್ರದೇಶಗಳಲ್ಲಿ ತಮ್ಮ ಪುಂಡಾಟವನ್ನು ತೋರಿದ್ದು, ಇದೀಗ ವಿಧಾನಸೌಧದ ಮುಂದೆಯೇ ಗುಂಪು ಕಟ್ಟಿಕೊಂಡು ಹೊಡೆದಾಡಿಕೊಂಡ ಘಟನೆ ನಡೆದಿದೆ. ಭಾನುವಾರ ( ನವೆಂಬರ್ 16 ) ರಾತ್ರಿ ಸಮಯದಲ್ಲಿ ವಿಧಾನಸೌಧದ ಮುಂದಿನ ಫುಟ್‌ಪಾತ್ ಮೇಲೆ ನೇಪಾಳ ಮೂಲದ ಯುವಕರ ಗುಂಪು ಹೊಡೆದಾಟ ಬಡಿದಾಟ ನಡೆಸಿದೆ.
ತಮ್ಮ ತಮ್ಮ ನಡುವೆಯೇ ಸುಮಾರು 60 ಮಂದಿ ಪರಸ್ಪರ ಹೊಡೆದಾಡಿಕೊಂಡಿದ್ದು, ಜಗಳ ಶುರುವಾದ ಕೆಲವೇ ನಿಮಿಷಗಳಲ್ಲಿ ಪೊಲೀಸರು ಸ್ಥಳಕ್ಕಾಗಮಿಸಿ ಲಾಠಿ ಬೀಸಿ ಗುಂಪನ್ನು ಚದುರಿಸಿದ್ದಾರೆ. ಇನ್ನು ಘಟನೆ ಸಂಬಂಧ ಪ್ರಕರಣವನ್ನೂ ಸಹ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಘಟನೆಗೆ ನಿಖರವಾದ ಕಾರಣ ತನಿಖೆಯಲ್ಲಿ ಹೊರಬರಬೇಕಿದೆ. ಇನ್ನು ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ವೈರಲ್ ಆಗಿದ್ದು, ಸ್ಥಳೀಯರು ವಲಸಿಗರ ಮಿತಿ ಮೀರಿದ ವರ್ತನೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸರ್ಕಾರ ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ತಕ್ಕ ಕ್ರಮ ಕೈಗೊಂಡು ಅಂಥವರಿಗೆ ಎಚ್ಚರಿಕೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಇನ್ನು ಇದೇ ವಿಧಾನಸೌಧದ ಲೈಟಿಂಗ್ಸ್ ನೋಡಿಕೊಂಡು ಹೋಗಲು ಸಿನಿಮಾ ಮುಗಿಸಿ ಮನೆಗೆ ತೆರಳುತ್ತಿದ್ದ ಸಹೋದರರಿಬ್ಬರು ಬಂದಾಗ ಸಮೀಪದ ಮೆಟ್ರೊ ನಿಲ್ದಾಣದ ಬಳಿ ಐದಾರು ಯುವಕರ ಗುಂಪು ಆ ಸಹೋದರರ ಮೇಲೆ ಹಲ್ಲೆ ಮಾಡಿ ಅವರ ಬಳಿ ಇದ್ದ ನಥಿಂಗ್ ಮೊಬೈಲ್ ಹಾಗೂ 9000 ಹಣವನ್ನು ದೋಚಿದೆ. ಈ ಕುರಿತು ಸಹ ಪ್ರಕರಣ ದಾಖಲಾಗಿ ತನಿಖೆ ಆರಂಭಗೊಂಡಿದೆ.
ಸಿನಿಮಾ ಪ್ರಚಾರ ಮಾಡುವುದಾಗಿ ದುಡ್ಡು ಪಡೆದು ವಂಚನೆ: ಪಿಆರ್‌ಒ ಹರೀಶ್ ಅರಸು ವಿರುದ್ಧ ಯಶ್ ತಾಯಿ ಪುಷ್ಪ ದೂರು
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


