Saturday, September 19, 2026
spot_img
More
    spot_img
    HomeEntertainmentಶಸ್ತ್ರಚಿಕಿತ್ಸೆಯ ನಡುವೆಯೇ ಶಿವಣ್ಣನ ಹೊಸ ಸಿನಿಮಾ ಅನೌನ್ಸ್‌

    ಶಸ್ತ್ರಚಿಕಿತ್ಸೆಯ ನಡುವೆಯೇ ಶಿವಣ್ಣನ ಹೊಸ ಸಿನಿಮಾ ಅನೌನ್ಸ್‌

    ಸ್ಯಾಂಡಲ್‌ವುಡ್‌ ಕಿಂಗ್‌ ಶಿವರಾಜ್‌ಕುಮಾರ್‌ ಸದ್ಯ ಅನಾರೋಗ್ಯದ ಕಾರಣ ಹೆಚ್ಚುವರಿ ಶಸ್ತ್ರಚಿಕಿತ್ಸೆಗೆಂದು ಅಮೆರಿಕಾಗೆ ತೆರಳಿದ್ದಾರೆ. ಈ ಸುದ್ದಿ ಶಿವಣ್ಣ ಅಭಿಮಾನಿಗಳಿಗೆ ಬೇಸರವನ್ನುಂಟುಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ʼಶಿವಣ್ಣ ಬೇಗ ಹುಷಾರಾಗಿ ಬನ್ನಿʼ ಎಂದು ಬರೆದುಕೊಳ್ಳುತ್ತಿದ್ದಾರೆ.

    Advertisement

    ಹೀಗೆ ಒಂದೆಡೆ ಶಿವಣ್ಣ ಕುರಿತಾದ ಈ ಸುದ್ದಿ ಅಭಿಮಾನಿಗಳಲ್ಲಿ ಬೇಸರವನ್ನುಂಟುಮಾಡಿದ್ದರೆ, ಮತ್ತೊಂದೆಡೆ ಇಲ್ಲೊಂದು ಚಿತ್ರತಂಡ ಶಿವಣ್ಣನಿಗೆ ತಾವು ನಿರ್ಮಿಸಲು ತಯಾರಾಗಿರುವ ಸಿನಿಮಾವನ್ನು ಅನೌನ್ಸ್‌ ಮಾಡಿದೆ. ಈ ಮೂಲಕ ಶಿವಣ್ಣ ಅಭಿಮಾನಿಗಳಿಗೆ ಬೇಸರದ ನಡುವೆ ಖುಷಿ ತಂದಿದೆ. ಚಿತ್ರಕ್ಕೆ ʼಎಂಬಿʼ ಎಂದು ಶೀರ್ಷಿಕೆ ಇಡಲಾಗಿದೆ.

    ಮುಂಬೈ ಮೂಲದ ‘ಆಡ್-ಒನ್ ಫಿಲ್ಮ್ಸ್​’ ಸಂಸ್ಥೆಯ ಮೂಲಕ ‘ಎಂಬಿ’ ಸಿನಿಮಾ ನಿರ್ಮಾಣ ಆಗಲಿದೆ. ಮನೋಜ್ ಬನೋಡೆ ಮತ್ತು ಖೇಮ್ ಚಂದ್ ಖಡ್ಗಿ ಅವರು ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ವಿಜಯಕಾಂತ್ ನಟನೆಯ ಯಶಸ್ವಿ ‘ವಲ್ಲರಸು’ ಸಿನಿಮಾಗೆ ಆ್ಯಕ್ಷನ್​-ಕಟ್​ ಹೇಳಿದ್ದ ಎನ್. ಮಹಾರಾಜನ್ ಅವರು ಈಗ ‘ಎಂಬಿ’ ಸಿನಿಮಾಗೆ ನಿರ್ದೇಶನ ಮಾಡಲಿದ್ದಾರೆ.

    ಇಲ್ಲಿಯವರೆಗೆ 3 ತಮಿಳು ಮತ್ತು ಸನ್ನಿ ಡಿಯೋಲ್ ನಟನೆಯ ಹಿಂದಿ ಸಿನಿಮಾವೊಂದನ್ನು ನಿರ್ದೇಶನ ಮಾಡಿರುವ ಮಹಾರಾಜನ್ ಅವರು ‘ಎಂಬಿ’ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ. ‘ಆಡ್ – ಒನ್ ಫಿಲ್ಮ್ಸ್​’ ಸಂಸ್ಥೆಯ ವತಿಯಿಂದ ಅನೇಕ ದೊಡ್ಡದೊಡ್ಡ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿರುವ ಮನೋಜ್ ಬನೋಡೆ ಮತ್ತು ಖೇಮ್ ಚಂದ್ ಖಡ್ಗಿ ಅವರು ಈಗ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading