Saturday, September 19, 2026
spot_img
More
    spot_img
    HomeLatest news"ಅವಮಾನವಾಗಿ‌ ನನ್ನ ಮಗ ನಿವೃತ್ತಿ ಘೋಷಿಸಿದ": ತಂದೆ ಮಾತನ್ನು ನಿರಾಕರಿಸಿದ ಅಶ್ವಿನ್!

    “ಅವಮಾನವಾಗಿ‌ ನನ್ನ ಮಗ ನಿವೃತ್ತಿ ಘೋಷಿಸಿದ”: ತಂದೆ ಮಾತನ್ನು ನಿರಾಕರಿಸಿದ ಅಶ್ವಿನ್!

    ನಿನ್ನೆ ( ಡಿಸೆಂಬರ್‌ 18 ) ಬ್ರಿಸ್ಬೇನ್‌ನಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ಬಾರ್ಡರ್‌ – ಗವಾಸ್ಕರ್‌ ಟ್ರೋಫಿಯ ಮೂರನೇ ಟೆಸ್ಟ್‌ ಪಂದ್ಯ ಮುಕ್ತಾಯವಾದ ಬೆನ್ನಲ್ಲೇ ರವಿಚಂದ್ರನ್‌ ಅಶ್ವಿನ್‌ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು.

    Advertisement

    ಇನ್ನು ರವಿಚಂದ್ರನ್‌ ಅಶ್ವಿನ್‌ ಹಠಾತ್‌ ನಿವೃತ್ತಿ ಕುರಿತು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ಆರಂಭವಾದವು. ತಂಡದಲ್ಲಿ ರವಿಚಂದ್ರನ್‌ ಅಶ್ವಿನ್‌ ಅವರಿಗೆ ಅವಮಾನವಾದ ಕಾರಣ ಅವರು ನಿವೃತ್ತಿ ಘೋಷಿಸಿದರು ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದರು.

    ಇನ್ನು ಯಾವುದೇ ಮುನ್ಸೂಚನೆ ನೀಡದೇ, ಸರಣಿ ಮಧ್ಯದಲ್ಲಿ ರವಿಚಂದ್ರನ್‌ ಅಶ್ವಿನ್‌ ನಿವೃತ್ತಿ ಘೋಷಿಸಿದ್ದು ನೆಗೆಟಿವ್‌ ಕಾಮೆಂಟ್‌ಗಳಿಗೆ ಪುಷ್ಟಿ ನೀಡಿತ್ತು. ಹೀಗೆಲ್ಲಾ ಇರುವಾಗ ರವಿಚಂದ್ರನ್‌ ಅಶ್ವಿನ್‌ ಅವರ ತಂದೆ ಮಾಧ್ಯಮದ ಜತೆ ಮಾತನಾಡಿ ತಂಡದಲ್ಲಿ ಅವಮಾನವಾಗಿದ್ದು ತನ್ನ ಮಗನ ನಿವೃತ್ತಿಗೆ ಕಾರಣವಾಗಿರಬಹುದು ಎಂದು ಹೇಳಿಕೆ ನೀಡಿದ್ದರು.

    ಈ ಹೇಳಿಕೆ ಎಲ್ಲೆಡೆ ವೈರಲ್‌ ಆಗಿ ಮತ್ತಷ್ಟು ಚರ್ಚೆಗಳು ಆರಂಭವಾಗಿದ್ದವು. ಇದೀಗ ಸ್ವತಃ ಅಶ್ವಿನ್‌ ತಮ್ಮ ತಂದೆಯ ಹೇಳಿಕೆ ಬಗ್ಗೆ ತಮ್ಮ ಎಕ್ಸ್‌ ಖಾತೆಯಲ್ಲಿ ಪ್ರತಿಕ್ರಿಯಿಸಿದ್ದು, “ನನ್ನ ತಂದೆ ಮೀಡಿಯಾ ತರಬೇತಿ ಪಡೆದವರಲ್ಲ. ಯೋ ಅಪ್ಪ ಏನಪ್ಪ ಇದೆಲ್ಲಾ? ನಾನೆಂದೂ ನೀನು ಈ ರೀತಿಯ ಹೇಳಿಕೆ ನೀಡುತ್ತಿಯಾ ಎಂದುಕೊಂಡಿರಲಿಲ್ಲ. ಎಲ್ಲರೂ ಅವರ ಹೇಳಿಕೆಯನ್ನು ಮರೆಯಿರಿ ಹಾಗೂ ಅವರನ್ನು ಏಕಾಂಗಿಯಾಗಿ ಬಿಟ್ಟುಬಿಡಿ ಎಂದು ಕೇಳುಕೊಳ್ಳುತ್ತೇನೆ” ಎಂದು ಅಶ್ವಿನ್‌ ಬರೆದುಕೊಂಡಿದ್ದಾರೆ.

    ಅಶ್ವಿನ್‌ ತಂದೆಯ ಹೇಳಿಕೆ ಏನಿತ್ತು?

    “ಕೊನೆಯ ಗಳಿಗೆಯಲ್ಲಿ ನನ್ನ ಮಗನ ನಿವೃತ್ತಿ ನಿರ್ಧಾರದ ಬಗ್ಗೆ ನನಗೂ ತಿಳಿಯಿತು. ಅವನ ಮನಸ್ಸಿನಲ್ಲಿ ಏನಾಗುತ್ತಿದೆಯೋ ಗೊತ್ತಿಲ್ಲ. ನಾನಂತೂ ಸಂಪೂರ್ಣ ಸಂತೋಷದಿಂದ ಒಪ್ಪಿಕೊಂಡೆ. ಆದರೆ ಅವರು ನಿವೃತ್ತಿ ಘೋಷಿಸಿದ ರೀತಿ, ಒಂದು ಕಡೆ ನನಗೆ ತುಂಬಾ ಸಂತೋಷ ನೀಡಿದ್ದರೆ, ಮತ್ತೊಂದೆಡೆ ನನಗೆ ನೋವುಂಟು ಮಾಡಿದೆ. ಏಕೆಂದರೆ ಅವನು ತನ್ನ ಆಟವನ್ನು ಮುಂದುವರಿಸಬೇಕಾಗಿತ್ತು. ನಿವೃತ್ತಿ ಎಂಬುದು ಅಶ್ವಿನ್ ಅವರ ನಿರ್ಧಾರವಾಗಿದ್ದು, ನಾನು ಅದರಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಆದರೆ ಅವನು ನಿವೃತ್ತಿ ತೆಗೆದುಕೊಂಡ ರೀತಿಗೆ ಹಲವು ಕಾರಣಗಳಿರಬಹುದು. ಅದು ಅಶ್ವಿನ್​ಗೆ ಮಾತ್ರ ಗೊತ್ತು, ಇದರಲ್ಲಿ ತಂಡದಲ್ಲಿ ಆತನಿಗೆ ಆಗುತ್ತಿದ್ದ ಅವಮಾನವೂ ಕಾರಣವಾಗಿರಬಹುದು. ಅಶ್ವಿನ್ ಅವರ ನಿವೃತ್ತಿ ನಮಗೆ ಭಾವನಾತ್ಮಕ ಕ್ಷಣವಾಗಿದೆ ಏಕೆಂದರೆ ಅವರು 14-15 ವರ್ಷಗಳ ಕಾಲ ತಂಡದಲ್ಲಿ ಆಡಿದರು. ಹೀಗಾಗಿ ಅವರ ಹಠಾತ್ ನಿವೃತ್ತಿ ನಮಗೆ ಆಘಾತ ತಂದಿತು. ಆತನನ್ನು ನಿರಂತರವಾಗಿ ಅವಮಾನಿಸಲಾಗುತ್ತಿದೆ ಎಂದು ನಾವು ಭಾವಿಸುತ್ತೇವೆ. ಹೀಗಾಗಿ ಇದನ್ನೆಲ್ಲಾ ಇನ್ನೆಷ್ಟು ದಿನ ಸಹಿಸಿಕೊಳ್ಳಲು ಸಾಧ್ಯ ಹೇಳಿ? ಹಾಗಾಗಿಯೇ ಅಶ್ವಿನ್ ನಿವೃತ್ತಿ ನಿರ್ಧಾರ ಮಾಡಿರಬಹುದು” ಎಂದು ಸಿಎನ್‌ಎನ್‌ ನ್ಯೂಸ್‌ 18 ಜತೆ ಅಶ್ವಿನ್‌ ತಂದೆ ಮಾತನಾಡಿದ್ದರು.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading