ಬೆಳಗಾವಿ: ಇಲ್ಲಿನ ಸುವರ್ಣ ಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು, ವಿವಿಧ ಸಮಸ್ಯೆ ಹಾಗೂ ವಿಷಯಗಳ ಬಗ್ಗೆ ಚರ್ಚೆ ನಡೆದಿದೆ. ನಿನ್ನೆ ( ಡಿಸೆಂಬರ್ 18 ) ಕಂದಾಯ ಸಚಿವ ಕೃಷ್ಣ ಬೈರೇಗೌಡ ಸದನದಲ್ಲಿ ಮಾತನಾಡಿ ಕಂದಾಯ ಹಾಗೂ ಸರ್ವೆ ಇಲಾಖೆಯಲ್ಲಿ ಭ್ರಷ್ಟಾಚಾರ ಇರುವುದನ್ನು ಒಪ್ಪಿಕೊಂಡಿದ್ದಾರೆ.
ಈ ಕುರಿತು ಅಚ್ಚರಿಯ ಹೇಳಿಕೆ ನೀಡಿರುವ ಕೃಷ್ಣ ಬೈರೇಗೌಡ ಆ ಭ್ರಷ್ಟಾಚಾರ ಇಲಾಖೆಯ ಕೆಳಹಂತದಲ್ಲಿದೆ ಎಂದೂ ಸಹ ಹೇಳಿದ್ದಾರೆ.
ಇಲಾಖೆಯಲ್ಲಿ ಭ್ರಷ್ಟಾಚಾರ ಇರುವುದರ ಕುರಿತು ಅಸಾಯಕತೆಯಿಂದ ಮಾತನಾಡಿದ ಕೃಷ್ಣ ಬೈರೇಗೌಡ “ಕೆಳಮಟ್ಟದಲ್ಲಿರುವ ಭ್ರಷ್ಟಾಚಾರ ತಡೆಯುವುದು ಸುಲಭವಲ್ಲ. ಇದು ಹಿಂದಿನಿಂದಲೂ ಅಸ್ತಿತ್ವದಲ್ಲಿದೆ ಮತ್ತು ಈಗ ಸಹ ಮುಂದುವರಿಯುತ್ತಿದೆ. ಆದರೆ ನಾವು ಅದನ್ನು ಪರಿಶೀಲಿಸಲು ಪ್ರಯತ್ನಿಸುತ್ತಿದ್ದೇವೆ” ಎಂದು ಹೇಳಿದ್ದಾರೆ.
ವಿಧಾನ ಪರಿಷತ್‌ನಲ್ಲಿ ಸದಸ್ಯ ರಾಮೋಜಿ ಗೌಡ ಅವರು ಚುಕ್ಕೆ ಗುರುತಿನ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೃಷ್ಣ ಬೈರೇಗೌಡ ಈ ಹೇಳಿಕೆಯನ್ನು ನೀಡಿದರು. ಈ ಸಂದರ್ಭದಲ್ಲಿ ಗೃಹಮಂತ್ರಿ ಜಿ ಪರಮೇಶ್ವರ್ ಸಹ ಹಾಜರಿದ್ದದ್ದನ್ನು ಕಾಣಬಹುದಾಗಿದೆ.
ಇನ್ನು ಬಿಜೆಪಿ ಎಂಎಲ್‌ಸಿ ಶಶಿಲ್ ನಮೋಶಿ ಇ ಖಾತೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೃಷ್ಣ ಬೈರೇಗೌಡ “ನಾನು ಇಲ್ಲಿರುವುದು ಅಕ್ರಮಗಳನ್ನು ತಡೆಯಲು ಹೊರತು ಭ್ರಷ್ಟಾಚಾರವನ್ನು ಬೆಂಬಲಿಸಲು ಅಲ್ಲ. ನಕಲಿ ದಾಖಲೆಗಳನ್ನು ತಯಾರಿಸಿ ನೋಂದಣಿಗೆ 40ರಿಂದ 50 ಸಾವಿರ ರೂ ಪಡೆಯುತ್ತಿದ್ದಾರೆ. ನಾನು ಅದನ್ನು ಬೆಂಬಲಿಸಬೇಕೆಂದು ನೀವು ಬಯಸುತ್ತೀರಾ?” ಎಂದು ಪ್ರಶ್ನೆ ಹಾಕಿದರು. ಅಲ್ಲದೇ ಸದನದಲ್ಲಿ ಇ -ಖಾತಾ ವಿರೋಧಿಸುತ್ತಿದ್ದ ಸದಸ್ಯರಿಗೆ ಪ್ರಶ್ನೆ ಹಾಕಿದ ಅವರು ಸರ್ಕಾರ ಅಕ್ರಮವಾಗಿ ಹಣ ಸಂಪಾದಿಸುವುದನ್ನು ನೀವು ಬೆಂಬಲಿಸುತ್ತೀರಾ ಎಂದು ಕಾಲೆಳೆದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


