Monday, August 10, 2026
spot_img
More
    spot_img
    HomeLatest newsಮಗಳು ಹುಟ್ಟಿದ ಸಂಭ್ರಮಕ್ಕೆ 'ಧುರಂಧರ್' ಸ್ಟೆಪ್ ಹಾಕಿದ ತಂದೆ:ವೈರಲ್ ವಿಡಿಯೊ ಇಲ್ಲಿದೆ 

    ಮಗಳು ಹುಟ್ಟಿದ ಸಂಭ್ರಮಕ್ಕೆ ‘ಧುರಂಧರ್’ ಸ್ಟೆಪ್ ಹಾಕಿದ ತಂದೆ:ವೈರಲ್ ವಿಡಿಯೊ ಇಲ್ಲಿದೆ 

    ಮನೆಗೆ ಹೆಣ್ಣು ಮಗು ಜನಿಸಿದರೆ ಅದು ಸಾಕ್ಷಾತ್ ಮಹಾಲಕ್ಷ್ಮಿಯ ಆಗಮನವೇ ಸರಿ. ಇತ್ತೀಚಿನ ವರ್ಷಗಳಲ್ಲಿ ಹೆಣ್ಣು ಮಕ್ಕಳನ್ನು ರಾಜಕುಮಾರಿಯಂತೆ ಸಂಭ್ರಮದಿಂದ ಸ್ವಾಗತಿಸುವ ಸುಂದರ ಸಂಸ್ಕೃತಿ ದೇಶಾದ್ಯಂತ ಮನೆಮಾಡುತ್ತಿದೆ. ಇದಕ್ಕೆ ಉದಾಹರಣೆ ಎಂಬಂತೆ, ನವದೆಹಲಿಯ ಆಸ್ಪತ್ರೆಯೊಂದರಲ್ಲಿ ತನಗೆ ‘ದೇವತೆ’ಯಂತಹ ಮಗಳು ಹುಟ್ಟಿದ ಸುದ್ದಿ ತಿಳಿಯುತ್ತಿದ್ದಂತೆಯೇ, ಅಪ್ಪನೊಬ್ಬ ಸಂಭ್ರಮ ತಡೆಯಲಾರದೆ ಕುಣಿದು ಕುಪ್ಪಳಿಸಿದ್ದಾರೆ. ಆಸ್ಪತ್ರೆಯ ಕಾರಿಡಾರ್‌ನಲ್ಲೇ ಆತ ಹಾಕಿದ ಭರ್ಜರಿ ಸ್ಟೆಪ್ಸ್‌ ಈಗ ಇಂಟರ್ನೆಟ್‌ನಲ್ಲಿ ಸಂಚಲನ ಮೂಡಿಸಿದೆ.

    Advertisement

    ಬಾಲಿವುಡ್ ಸ್ಟಾರ್ ರಣವೀರ್ ಸಿಂಗ್ ಅಭಿನಯದ ಇತ್ತೀಚಿನ ಚಿತ್ರ ‘ಧುರಂಧರ್ʼ (Dhurandhar) ಸದ್ಯ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಈ ಚಿತ್ರದ ‘FA9LA’ ಹಾಡು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡ್‌ನಲ್ಲಿದೆ. ಇದೇ ಹಾಡಿನ ಸಿಗ್ನೇಚರ್ ಸ್ಟೆಪ್‌ಗಳನ್ನು ಹಾಕುತ್ತಾ ದೆಹಲಿಯ ಈ ತಂದೆ ತನ್ನ ಮಗಳ ಆಗಮನವನ್ನು ಸಂಭ್ರಮಿಸಿದ್ದಾರೆ.ವೈರಲ್ ವಿಡಿಯೋದಲ್ಲಿ, ನರ್ಸ್‌ಗಳು ಮಗುವನ್ನು ಎತ್ತಿಕೊಂಡು ಬರುತ್ತಿರುವುದನ್ನು ಕಾಣಬಹುದು. ಮಗಳನ್ನು ಕಂಡ ತಕ್ಷಣ ಆ ತಂದೆಯ ಸಂಭ್ರಮಕ್ಕೆ ಪಾರವೇ ಇರಲಿಲ್ಲ.

    ನಟ ಅಕ್ಷಯ್ ಖನ್ನಾ ಅವರ ಐಕಾನಿಕ್ ಡ್ಯಾನ್ಸ್ ಸ್ಟೆಪ್‌ಗಳನ್ನು ಆಸ್ಪತ್ರೆಯ ಕಾರಿಡಾರ್‌ನಲ್ಲೇ ಹಾಕಿ ಅವರು ತಮ್ಮ ಸಂತಸ ಹಂಚಿಕೊಂಡಿದ್ದಾರೆ. ಇವರ ಈ ಮುಗ್ಧ ನಗು ಮತ್ತು ಡ್ಯಾನ್ಸ್ ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ.ಈ ವಿಡಿಯೋ ಎಷ್ಟು ವೈರಲ್ ಆಗಿದೆ ಎಂದರೆ, ಚಿತ್ರದ ನಿರ್ದೇಶಕ ಆದಿತ್ಯ ಧರ್ ಅವರ ಪತ್ನಿ, ಖ್ಯಾತ ನಟಿ ಯಾಮಿ ಗೌತಮ್ ಅವರೇ ಇದನ್ನು ಶೇರ್ ಮಾಡಿಕೊಂಡಿದ್ದಾರೆ. “ಈ ಟ್ರೆಂಡ್‌ನಲ್ಲಿ ಇವರೇ ನಿಜವಾದ ವಿನ್ನರ್!” ಎಂದು ಕ್ಯಾಪ್ಷನ್ ನೀಡಿ ಆ ತಂದೆಯ ಸಂಭ್ರಮಕ್ಕೆ ಸಾಥ್ ಕೊಟ್ಟಿದ್ದಾರೆ.

    ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದ್ದು, ಈಗಾಗಲೇ 8 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಕಂಡಿದೆ. ಅಪ್ಪ-ಮಗಳ ಈ ಅಪೂರ್ವ ಬಂಧಕ್ಕೆ ನೆಟ್ಟಿಗರು ಫಿದಾ ಆಗಿದ್ದು, ಕಮೆಂಟ್‌ಗಳ ಸುರಿಮಳೆಯನ್ನೇ ಹರಿಸುತ್ತಿದ್ದಾರೆ. ಒಬ್ಬ ಬಳಕೆದಾರ ಇಂದು ಇಂಟರ್ನೆಟ್‌ನಲ್ಲಿ ನಾನು ನೋಡಿದ ಅತ್ಯುತ್ತಮ ದೃಶ್ಯವಿದು ಎಂದು ಭಾವುಕರಾದರೆ, ಮತ್ತೊಬ್ಬರು ಜೀವನದಲ್ಲಿ ದೊಡ್ಡ ಯುದ್ಧವನ್ನೇ ಗೆದ್ದಂತಹ ಸಂಭ್ರಮ ಆ ತಂದೆಯ ಮುಖದಲ್ಲಿದೆ’ ಎಂದು ಕೊಂಡಾಡಿದ್ದಾರೆ. ಎಲ್ಲರಿಗೂ ಮಗಳ ಆಗಮನವನ್ನು ಇಷ್ಟು ಅದ್ಭುತವಾಗಿ ಸಂಭ್ರಮಿಸಲು ಸಾಧ್ಯವಿಲ್ಲ, ಇವರೇ ನಿಜವಾದ ಅದೃಷ್ಟವಂತ ತಂದೆ ಎಂಬ ಮಾತುಗಳು ಕೇಳಿಬರುತ್ತಿವೆ

    ಸತತ ಏರಿಕೆಯ ಬಳಿಕ ಇಂದು ಚಿನ್ನದ ಬೆಲೆ ₹660 ಇಳಿಕೆ, ಬೆಳ್ಳಿ ಕೆಜಿಗೆ ₹2,000 ಕಡಿಮೆ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading