Monday, August 10, 2026
spot_img
More
    spot_img
    HomeLatest newsಸತತ ಏರಿಕೆಯ ಬಳಿಕ ಇಂದು ಚಿನ್ನದ ಬೆಲೆ ₹660 ಇಳಿಕೆ, ಬೆಳ್ಳಿ ಕೆಜಿಗೆ ₹2,000...

    ಸತತ ಏರಿಕೆಯ ಬಳಿಕ ಇಂದು ಚಿನ್ನದ ಬೆಲೆ ₹660 ಇಳಿಕೆ, ಬೆಳ್ಳಿ ಕೆಜಿಗೆ ₹2,000 ಕಡಿಮೆ

    ದೇಶೀಯ ಷೇರು ಮಾರುಕಟ್ಟೆಯಲ್ಲಿ ಸತತವಾಗಿ ಏರುಮುಖದಲ್ಲಿ ಸಾಗಿದ್ದ ಚಿನ್ನ ಹಾಗೂ ಬೆಳ್ಳಿ ಬೆಲೆ ಶುಕ್ರವಾರ ಇಳಿಕೆಗೊಳ್ಳುವ ಮೂಲಕ ಆಭರಣ ಖರೀದಿದಾರರಿಗೆ ಸ್ವಲ್ಪ ಸಮಾಧಾನ ತರಿಸಿದೆ. ಬಂಗಾರ ಅಷ್ಟೇ ಅಲ್ಲದೆ ಬೆಳ್ಳಿ ಬೆಲೆಯಲ್ಲೂ ಸಹ ಇಳಿಕೆ ಕಂಡುಬಂದಿದ್ದು, ದೇಶೀಯ ಮಾರುಕಟ್ಟೆಯಲ್ಲಿ ಹೊಸ ಉತ್ಸಾಹ ಕಂಡುಬಂದಿದೆ. ಭಾರತದ ಷೇರುಪೇಟೆ ಸತತ ಇಳಿಕೆ ಬಳಿಕ ಏರಿಕೆಗೊಂಡಿದ್ದು, ಚಿನ್ನದ ಬೆಲೆ ಸತತ ಜಿಗಿತದ ಬಳಿಕ ಇದೀಗ ಕಡಿಮೆಯಾಗಿದೆ.

    Advertisement

    ನಿನ್ನೆ ಪ್ರತಿ ಗ್ರಾಂಗೆ 30 ರೂ. ಏರಿಕೆಯಾಗಿದ್ದ ಚಿನ್ನದ ಬೆಲೆ, ಇಂದು 60 ರೂ.ಗಳಷ್ಟು ಕುಸಿತ ಕಂಡಿದೆ.ಬೆಳ್ಳಿ ಬೆಲೆಯೂ ವಾರಾಂತ್ಯದಲ್ಲಿ ಸ್ವಲ್ಪ ಮಟ್ಟಿಗೆ ತಗ್ಗಿದ್ದು, ಇಂದು ಪ್ರತಿ 100 ಗ್ರಾಂಗೆ 2 ರೂ. ಇಳಿಕೆಯಾಗಿದೆ.ಷೇರು ಮಾರುಕಟ್ಟೆಯಲ್ಲಿನ ಏರಿಳಿತಗಳ ನಡುವೆಯೂ ಆಭರಣ ಖರೀದಿದಾರರಿಗೆ ಈ ವಾರಾಂತ್ಯದ ಇಳಿಕೆ ತುಸು ನೆಮ್ಮದಿ ನೀಡಿದೆ.

    ಬೆಂಗಳೂರು ಹಾಗೂ ಪ್ರಮುಖ ನಗರಗಳ ಇಂದಿನ ದರ ಪಟ್ಟಿ: ಸದ್ಯ ಭಾರತದ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಹೀಗಿದೆ:

    22 ಕ್ಯಾರಟ್ ಚಿನ್ನ (10 ಗ್ರಾಂ): 1,23,000 ರೂ.

    24 ಕ್ಯಾರಟ್ ಅಪರಂಜಿ ಚಿನ್ನ (10 ಗ್ರಾಂ): 1,34,180 ರೂ.

    ಬೆಳ್ಳಿ (100 ಗ್ರಾಂ): 20,900 ರೂ.

    ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ

    ಬೆಂಗಳೂರು ₹1,34,180

    ನಾಗ್ಪುರ ₹1,34,180

    ಮುಂಬೈ ₹1,34,180

    ಚೆನ್ನೈ ₹1,34,180

    ಕೋಲ್ಕತ್ತಾ ₹1,34,180

    ಪಾಟ್ನಾ ₹1,34,230

    ಸೂರತ್‌ ₹1,34,230

    ಚಂಡೀಗಢ ₹1,34,330

    ಲಕ್ನೋ ₹1,34,330

    ಚಿನ್ನದ ಪವರ್: 40 ವರ್ಷಗಳ ಹಿಂದೆ ಹಾಕಿದ 100 ರೂ. ಇಂದು 65 ಪಟ್ಟು ಲಾಭ! ಹೂಡಿಕೆದಾರರನ್ನು ಬೆರಗುಗೊಳಿಸಿದ ವೈಟ್ ಓಕ್ ವರದಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading