ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿದರ ಕಡಿತಗೊಳಿಸುವ ಸಾಧ್ಯತೆ ಮತ್ತು ಜಾಗತಿಕ ಮಾರುಕಟ್ಟೆಯ ಬೆಳವಣಿಗೆಯಿಂದಾಗಿ ಭಾರತದಲ್ಲಿ ಚಿನ್ನದ ಬೆಲೆ ಗಗನಕ್ಕೇರುತ್ತಿದೆ,ಅಮೆರಿಕದಲ್ಲಿ ನಿರುದ್ಯೋಗ ದರ (Unemployment) ಹೆಚ್ಚಾಗಿರುವುದು ಕೂಡ ಬಂಗಾರದ ಮೌಲ್ಯ ಹೆಚ್ಚಲು ಪ್ರಮುಖ ಕಾರಣ.
ಪ್ರಸ್ತುತ ‘ಎಂಸಿಎಕ್ಸ್’ (MCX) ಮಾರುಕಟ್ಟೆಯಲ್ಲಿ 10 ಗ್ರಾಂ ಚಿನ್ನದ ಬೆಲೆ ಬರೋಬ್ಬರಿ 1,35,150 ರೂಪಾಯಿ ತಲುಪಿದೆ!ವೈಟ್ ಓಕ್ ಕ್ಯಾಪಿಟಲ್ ಇತ್ತೀಚೆಗೆ ಬಿಡುಗಡೆ ಮಾಡಿದ ವರದಿ ಹೂಡಿಕೆದಾರರ ಕಣ್ಣು ಕೆಂಪಾಗಿಸಿದೆ. 1985ರಲ್ಲಿ ನೀವೇನಾದರೂ ಚಿನ್ನದ ಮೇಲೆ ಕೇವಲ 100 ರೂಪಾಯಿ ಹೂಡಿಕೆ ಮಾಡಿದ್ದರೆ, 2025ರ ಮಾರ್ಚ್ ಹೊತ್ತಿಗೆ ಅದರ ಬೆಲೆ 6,518 ರೂಪಾಯಿ ಆಗಿರುತ್ತಿತ್ತು.
ಚಿನ್ನದ ಹೂಡಿಕೆಯ ಶಕ್ತಿ: 40 ವರ್ಷಗಳ ಲಾಭದ ಲೆಕ್ಕಾಚಾರ
ವೈಟ್‌ಓಕ್ ಕ್ಯಾಪಿಟಲ್ (WhiteOak Capital) ವರದಿಯ ಪ್ರಕಾರ, ಕಳೆದ ನಾಲ್ಕು ದಶಕಗಳಲ್ಲಿ ಚಿನ್ನವು ಹಣದುಬ್ಬರ ಮತ್ತು ಮಾರುಕಟ್ಟೆಯ ಅನಿಶ್ಚಿತತೆಯ ನಡುವೆಯೂ ಹೂಡಿಕೆದಾರರಿಗೆ ಬಲವಾದ ರಕ್ಷಣೆ ನೀಡಿದೆ.1985ರಲ್ಲಿ ₹100 ಹೂಡಿಕೆ ಮಾಡಿದ್ದರೆ, ಮಾರ್ಚ್ 2025ರ ವೇಳೆಗೆ ಅದರ ಮೌಲ್ಯ ₹6,518 ಆಗುತ್ತಿತ್ತು.ಅದೇ ₹100 ಅನ್ನು ಬ್ಯಾಂಕ್ ಡೆಪಾಸಿಟ್ ಮಾಡಿದ್ದರೆ ಕೇವಲ ₹2,100 ಆಗುತ್ತಿತ್ತು.ಹಣದುಬ್ಬರಕ್ಕೆ (Inflation) ಹೋಲಿಸಿದರೆ ₹100ರ ಅಂದಿನ ಮೌಲ್ಯ ಇಂದು ₹1,478ಕ್ಕೆ ಸಮನಾಗಿದೆ. ಅಂದರೆ ಚಿನ್ನವು ಹಣದುಬ್ಬರಕ್ಕಿಂತಲೂ ಅಧಿಕ ಲಾಭ ನೀಡಿದೆ.ಷೇರು ಮಾರುಕಟ್ಟೆಯಲ್ಲಿ (Sensex) ಅದು ₹13,484 ಆಗುತ್ತಿದ್ದರೂ, ಅಲ್ಲಿನ ಏರಿಳಿತಗಳು (Volatility) ಚಿನ್ನಕ್ಕೆ ಹೋಲಿಸಿದರೆ ಬಹಳ ಹೆಚ್ಚು.
ಚಿನ್ನ ಯಾಕೆ ಅತ್ಯುತ್ತಮ ಹೂಡಿಕೆ?
ಆರ್ಥಿಕ ಕುಸಿತದ ವೇಳೆ ರಕ್ಷಣೆ: 2012, 2017 ಮತ್ತು 2020ರಲ್ಲಿ ಷೇರು ಮಾರುಕಟ್ಟೆ ಭಾರೀ ಕುಸಿತ ಕಂಡಾಗ ಚಿನ್ನವು ಧನಾತ್ಮಕ ಲಾಭ ನೀಡಿತ್ತು. ಉದಾಹರಣೆಗೆ, 2020ರಲ್ಲಿ ಷೇರು ಮಾರುಕಟ್ಟೆ -22.9% ಕುಸಿದಾಗ ಚಿನ್ನವು 29.7% ಲಾಭ ನೀಡಿ ಹೂಡಿಕೆದಾರರನ್ನು ಕಾಪಾಡಿತ್ತು.
ಸ್ಥಿರವಾದ ಬೆಳವಣಿಗೆ (CAGR): 1985ರಿಂದ ಇಲ್ಲಿಯವರೆಗೆ ಚಿನ್ನವು ಸರಾಸರಿ 10.2% ವಾರ್ಷಿಕ ಬೆಳವಣಿಗೆ ಕಂಡಿದೆ. ಇದು ಬ್ಯಾಂಕ್ ಡೆಪಾಸಿಟ್ (8.1%) ಮತ್ತು ಹಣದುಬ್ಬರಕ್ಕಿಂತ (7.2%) ಅಧಿಕವಾಗಿದೆ.
ದಶಕಗಳ ಸಾಧನೆ: 2005ರಿಂದ 2015ರ ದಶಕದಲ್ಲಿ ಚಿನ್ನವು 14.3% ನಷ್ಟು ಗಮನಾರ್ಹ ವಾರ್ಷಿಕ ಬೆಳವಣಿಗೆಯನ್ನು ದಾಖಲಿಸಿದೆ.
ತುರ್ತು ಸಂದರ್ಭದಲ್ಲಿ ಚಿನ್ನವನ್ನು ಅತಿ ವೇಗವಾಗಿ ನಗದು ರೂಪಕ್ಕೆ ಪರಿವರ್ತಿಸಬಹುದು. ನೀವು ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ ಚಿನ್ನಕ್ಕೆ ತಕ್ಷಣದ ಮೌಲ್ಯ ಸಿಗುತ್ತದೆ. ಇದು ಇತರ ಆಸ್ತಿಗಳಿಗೆ (ಉದಾಹರಣೆಗೆ ಸೈಟ್ ಅಥವಾ ಮನೆ) ಹೋಲಿಸಿದರೆ ಅತಿ ದೊಡ್ಡ ಪ್ಲಸ್ ಪಾಯಿಂಟ್.
ಹಣದುಬ್ಬರ ಹೆಚ್ಚಾದಾಗ ಹಣದ ಮೌಲ್ಯ ಕಡಿಮೆಯಾಗುತ್ತದೆ, ಆದರೆ ಚಿನ್ನದ ಮೌಲ್ಯ ಹೆಚ್ಚುತ್ತಲೇ ಹೋಗುತ್ತದೆ. ಕಳೆದ 40 ವರ್ಷಗಳ ಅಂಕಿಅಂಶಗಳ ಪ್ರಕಾರ, ಚಿನ್ನವು ಸತತವಾಗಿ ಹಣದುಬ್ಬರವನ್ನೂ ಮೀರಿಸಿ ಲಾಭ ನೀಡಿದೆ.
ಮರ್ಯಾದೆ ಕೊಡಲ್ಲ’ ಎಂಬ ಕಾರಣಕ್ಕೆ ಹೆಂಡತಿಯನ್ನೇ ಮುಗಿಸಲು 5 ಲಕ್ಷ ಸುಪಾರಿ ಕೊಟ್ಟ ಪತಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


