ಮೈಸೂರು: ಸಂಸಾರ ಅಂದಮೇಲೆ ಸಣ್ಣಪುಟ್ಟ ಜಗಳಗಳು ಸಾಮಾನ್ಯ. ಆದರೆ, ಮೈಸೂರಿನಲ್ಲಿ ಪತಿಯೊಬ್ಬ ತನ್ನ ಪತ್ನಿ ತನಗೆ ಗೌರವ ನೀಡುತ್ತಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಆಕೆಯನ್ನು ಕೊಲ್ಲಲು ಸಂಚು ರೂಪಿಸಿರುವ ಘಟನೆ ಈಗ ಬೆಳಕಿಗೆ ಬಂದಿದೆ. ಕೊಲೆ ಮಾಡಿ ಅದನ್ನು ‘ಅಗ್ನಿ ಅವಘಡ’ ಎಂದು ಬಿಂಬಿಸಲು ಹೋಗಿ ಈಗ ಗಂಡ ಹಾಗೂ ಆತನ ಸ್ನೇಹಿತರು ಪೊಲೀಸರ ಅತಿಥಿಯಾಗಿದ್ದಾರೆ.
ಮೈಸೂರಿನ ಬಿ.ಎಂ. ಶ್ರೀ ನಗರದ ಪಾನಿಪುರಿ ವ್ಯಾಪಾರಿ ಮಹೇಶ್ ಎಂಬಾತನೇ ಈ ಕೃತ್ಯದ ಮಾಸ್ಟರ್ ಮೈಂಡ್. ಈತನ ಪತ್ನಿ ನಾಗರತ್ನ, ಪತಿಯ ಸಂಪಾದನೆಯ ಹಣವನ್ನೆಲ್ಲಾ ಬಡ್ಡಿಗೆ ಬಿಡುತ್ತಿದ್ದರಂತೆ. ಆದರೆ, ಮಹೇಶ್‌ಗೆ ಹಣದ ಅಗತ್ಯವಿದ್ದಾಗ ಹಣ ಕೊಡುತ್ತಿರಲಿಲ್ಲ ಮತ್ತು ಆತನನ್ನು ಗೌರವದಿಂದ ನಡೆಸಿಕೊಳ್ಳುತ್ತಿರಲಿಲ್ಲ ಎನ್ನಲಾಗಿದೆ. ಇದರಿಂದ ಬೇಸತ್ತ ಮಹೇಶ್, ಹೆಂಡತಿಯನ್ನು ಮುಗಿಸಲು ಪ್ಲಾನ್ ಮಾಡಿದ್ದ.
ಹೆಂಡತಿಯನ್ನು ಕೊಲ್ಲಲು ಮಹೇಶ್ ತನ್ನ ಸ್ನೇಹಿತರಾದ ವಿರಾಜಪೇಟೆ ಮೂಲದ ಭಾಸ್ಕರ್ ಮತ್ತು ಅಭಿಷೇಕ್ ಎಂಬುವವರಿಗೆ 5 ಲಕ್ಷ ರೂಪಾಯಿ ಸುಪಾರಿ ನೀಡಿದ್ದ.ಪತ್ನಿ ಒಬ್ಬರೇ ಇರುವಾಗ ಮನೆಗೆ ನುಗ್ಗಿ, ಆಕೆಯನ್ನು ಕೊಂದು, ಬಳಿಕ ಗ್ಯಾಸ್ ಸಿಲಿಂಡರ್ ಸೋರಿಕೆ ಮಾಡಿ ಬೆಂಕಿ ಹಚ್ಚುವುದು. ಇದರಿಂದ ಅದು ಗ್ಯಾಸ್ ಸ್ಫೋಟದ ಅವಘಡ ಎಂದು ಜಗತ್ತನ್ನು ನಂಬಿಸುವುದು ಮಹೇಶನ ಉದ್ದೇಶವಾಗಿತ್ತು.
ಪ್ಲಾನ್‌ನಂತೆ ಸ್ನೇಹಿತರಿಬ್ಬರು ಮನೆಗೆ ನುಗ್ಗಿ ನಾಗರತ್ನ ಅವರ ತಲೆಗೆ ಸುತ್ತಿಗೆಯಿಂದ ಹೊಡೆದಿದ್ದಾರೆ. ಬಳಿಕ ಗ್ಯಾಸ್ ಪೈಪ್ ಕತ್ತರಿಸಿ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನಿಸಿದ್ದಾರೆ. ಈ ವೇಳೆ ಮನೆಯ ವಸ್ತುಗಳು ಹೊತ್ತಿ ಉರಿದಿವೆ. ಗಾಯಗೊಂಡ ನಾಗರತ್ನ ಅವರ ಕಿರುಚಾಟ ಕೇಳಿ ನೆರೆಹೊರೆಯವರು ಬಂದಿದ್ದರಿಂದ ಪ್ರಾಣಾಪಾಯ ತಪ್ಪಿದೆ. ಸದ್ಯ ನಾಗರತ್ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಮೇಟಗಳ್ಳಿ ಪೊಲೀಸರು ಪ್ರಕರಣದ ತನಿಖೆ ನಡೆಸಿದಾಗ, ಸ್ವತಃ ಗಂಡನೇ ಈ ಭೀಕರ ಕೃತ್ಯಕ್ಕೆ ಸುಪಾರಿ ಕೊಟ್ಟಿರುವ ಸತ್ಯ ಹೊರಬಂದಿದೆ. ಪೊಲೀಸರು ಮಹೇಶ್ ಸೇರಿದಂತೆ ಮೂವರು ಆರೋಪಿಗಳನ್ನು ಜೈಲಿಗಟ್ಟಿದ್ದಾರೆ.
ವಿಸಾ, ಮಾಸ್ಟರ್ ಕಾರ್ಡ್‌ಗೆ ಗೂಗಲ್ ಪೇ ಟಕ್ಕರ್! ಆಕ್ಸಿಸ್ ಬ್ಯಾಂಕ್ ಜೊತೆಗೂಡಿ ಭಾರತದಲ್ಲಿ ಮೊದಲ ಜಾಗತಿಕ ಕಾರ್ಡ್ ಲಾಂಚ್
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


