Tuesday, August 4, 2026
spot_img
More
    spot_img
    HomeLatest newsವಿಸಾ, ಮಾಸ್ಟರ್ ಕಾರ್ಡ್‌ಗೆ ಗೂಗಲ್ ಪೇ ಟಕ್ಕರ್! ಆಕ್ಸಿಸ್ ಬ್ಯಾಂಕ್ ಜೊತೆಗೂಡಿ ಭಾರತದಲ್ಲಿ ಮೊದಲ ಜಾಗತಿಕ...

    ವಿಸಾ, ಮಾಸ್ಟರ್ ಕಾರ್ಡ್‌ಗೆ ಗೂಗಲ್ ಪೇ ಟಕ್ಕರ್! ಆಕ್ಸಿಸ್ ಬ್ಯಾಂಕ್ ಜೊತೆಗೂಡಿ ಭಾರತದಲ್ಲಿ ಮೊದಲ ಜಾಗತಿಕ ಕಾರ್ಡ್ ಲಾಂಚ್

    ಬೆಂಗಳೂರು: ಡಿಜಿಟಲ್ ಪಾವತಿ ಲೋಕದ ದಿಗ್ಗಜ ‘ಗೂಗಲ್ ಪೇ’ (Google Pay), ಭಾರತೀಯ ಗ್ರಾಹಕರಿಗಾಗಿ ತನ್ನ ಮೊದಲ ಜಾಗತಿಕ ಕ್ರೆಡಿಟ್ ಕಾರ್ಡ್ ಅನ್ನು ಬಿಡುಗಡೆ ಮಾಡುವ ಮೂಲಕ ಹೊಸ ಕ್ರಾಂತಿ ಮಾಡಿದೆ. ಆಕ್ಸಿಸ್ ಬ್ಯಾಂಕ್ ಜೊತೆಗಿನ ಸಹಯೋಗದಲ್ಲಿ “ಗೂಗಲ್ ಪೇ ಫ್ಲೆಕ್ಸ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್” (Google Pay Flex Axis Bank Credit Card) ಅನ್ನು ಡಿಸೆಂಬರ್ 17, 2025 ರಂದು ಅನಾವರಣಗೊಳಿಸಲಾಗಿದೆ.

    Advertisement

    ವಿಶೇಷತೆ ಏನು?
    ಈ ಕಾರ್ಡ್‌ನ ಅತ್ಯಂತ ದೊಡ್ಡ ಪ್ಲಸ್ ಪಾಯಿಂಟ್ ಎಂದರೆ ಇದನ್ನು ರುಪೇ (RuPay) ನೆಟ್‌ವರ್ಕ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಇದರಿಂದಾಗಿ ಗ್ರಾಹಕರು ಈ ಕ್ರೆಡಿಟ್ ಕಾರ್ಡ್ ಅನ್ನು ನೇರವಾಗಿ ತಮ್ಮ UPI ಖಾತೆಗೆ ಲಿಂಕ್ ಮಾಡಬಹುದು. ಸಾಮಾನ್ಯವಾಗಿ ಡೆಬಿಟ್ ಕಾರ್ಡ್‌ಗಳಿಂದ ಪಾವತಿ ಮಾಡುವಂತೆ, ಈಗ ಈ ಕ್ರೆಡಿಟ್ ಕಾರ್ಡ್ ಮೂಲಕವೇ ಸ್ಕ್ಯಾನ್ ಮಾಡಿ ಅಂಗಡಿಗಳಲ್ಲಿ ಮತ್ತು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸುಲಭವಾಗಿ ಪಾವತಿ ಮಾಡಬಹುದಾಗಿದೆ.

    ಭಾರತವನ್ನೇ ಮೊದಲು ಆರಿಸಿಕೊಂಡಿದ್ದೇಕೆ?
    ಭಾರತದಲ್ಲಿ ಯುಪಿಐ (UPI) ವ್ಯವಸ್ಥೆ ಜಾಗತಿಕ ಮಟ್ಟದಲ್ಲಿ ವೇಗವಾಗಿ ಬೆಳೆಯುತ್ತಿರುವುದನ್ನು ಗಮನಿಸಿ, ಗೂಗಲ್ ತನ್ನ ಈ ಮಹತ್ವಾಕಾಂಕ್ಷಿ ಜಾಗತಿಕ ಕಾರ್ಡ್ ಅನ್ನು ಬಿಡುಗಡೆ ಮಾಡಲು ಭಾರತವನ್ನೇ ಮೊದಲ ತಾಣವಾಗಿ ಆರಿಸಿಕೊಂಡಿದೆ. ಕ್ರೆಡಿಟ್ ಕಾರ್ಡ್ ಬಳಕೆಯನ್ನು ಸಾಮಾನ್ಯ ಯುಪಿಐ ಪಾವತಿಯಷ್ಟೇ ಸರಳಗೊಳಿಸುವುದು ಇದರ ಮುಖ್ಯ ಉದ್ದೇಶವಾಗಿದೆ

    ಪ್ರತಿಯೊಂದು ಪಾವತಿಗೂ ಸಿಗಲಿದೆ ತಕ್ಷಣದ ‘ಕ್ಯಾಶ್‌ಬ್ಯಾಕ್’!

    ಗೂಗಲ್ ಪೇ ಕ್ರೆಡಿಟ್ ಕಾರ್ಡ್‌ನ ಅತ್ಯಂತ ಆಕರ್ಷಕ ವೈಶಿಷ್ಟ್ಯವೆಂದರೆ ಅದರ ‘ಕ್ವಿಕ್ ರಿವಾರ್ಡ್’ ಸೌಲಭ್ಯ. ಸಾಮಾನ್ಯವಾಗಿ ಇತರ ಕ್ರೆಡಿಟ್ ಕಾರ್ಡ್‌ಗಳಲ್ಲಿ ನೀವು ಗಳಿಸಿದ ಕ್ಯಾಶ್‌ಬ್ಯಾಕ್ ಅಥವಾ ರಿವಾರ್ಡ್ ಪಾಯಿಂಟ್‌ಗಳನ್ನು ಪಡೆಯಲು ತಿಂಗಳ ಅಂತ್ಯದವರೆಗೆ ಅಥವಾ ಬಿಲ್ ಜನರೇಟ್ ಆಗುವವರೆಗೆ ಕಾಯಬೇಕಾಗುತ್ತದೆ. ಆದರೆ, ಗೂಗಲ್ ಈ ಸಂಪ್ರದಾಯವನ್ನು ಮುರಿದಿದೆ.

    ಏನಿದು ‘ಇನ್ಸ್ಟಂಟ್’ ಮ್ಯಾಜಿಕ್?

    ನೀವು ಮಾಡುವ ಪ್ರತಿಯೊಂದು ವ್ಯವಹಾರಕ್ಕೂ (Transaction) ಬೆನ್ನುಬೆನ್ನಲ್ಲೇ ರಿವಾರ್ಡ್ ಮತ್ತು ಕ್ಯಾಶ್‌ಬ್ಯಾಕ್ ನಿಮ್ಮ ಖಾತೆಗೆ ಜಮೆಯಾಗುತ್ತದೆ.

    ಗಳಿಸಿದ ರಿವಾರ್ಡ್ ಪಾಯಿಂಟ್‌ಗಳನ್ನು ಮುಂದಿನ ಖರೀದಿಗೆ ತಕ್ಷಣವೇ ಬಳಸಿಕೊಳ್ಳುವ (Redeem) ಅವಕಾಶವನ್ನು ಗೂಗಲ್ ಕಲ್ಪಿಸಿದೆ.

    ಗೂಗಲ್ ಹಿರಿಯ ನಿರ್ದೇಶಕ ಶರತ್ ಬುಲುಸು ಅವರು ಹೇಳುವಂತೆ, “ಗ್ರಾಹಕರು ರಿವಾರ್ಡ್‌ಗಳನ್ನು ಪಡೆದುಕೊಳ್ಳಲು ಸಂಕೀರ್ಣ ಪ್ರಕ್ರಿಯೆಗಳನ್ನು ಎದುರಿಸಬಾರದು ಎಂಬ ಉದ್ದೇಶದಿಂದ ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದೆ.” ಇದರಿಂದಾಗಿ ರಿವಾರ್ಡ್ ರಿಡೀಮ್ ಮಾಡುವುದು ಈಗ ಕೇವಲ ಒಂದು ಕ್ಲಿಕ್‌ನಷ್ಟೇ ಸರಳವಾಗಲಿದೆ.

    ಮಾಸಿಕ ಬಿಲ್ ಈಗ ಸುಲಭ ಕಂತುಗಳಲ್ಲಿ (EMI)!
    ಗೂಗಲ್ ಪೇ ಮತ್ತು ಆಕ್ಸಿಸ್ ಬ್ಯಾಂಕ್‌ನ ಈ ಹೊಸ ಕ್ರೆಡಿಟ್ ಕಾರ್ಡ್ ಕೇವಲ ಶ್ರೀಮಂತರಿಗೆ ಮಾತ್ರವಲ್ಲ, ಮಧ್ಯಮ ವರ್ಗದ ಗ್ರಾಹಕರ ಜೇಬನ್ನೂ ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ.

    ಏನಿದು EMI ಆಫರ್?

    ಹಗುರವಾಗಲಿದೆ ಮಾಸಿಕ ಹೊರೆ: ನಿಮ್ಮ ತಿಂಗಳ ದೊಡ್ಡ ಮೊತ್ತದ ಖರ್ಚುಗಳನ್ನು ಒಮ್ಮೆಯೇ ಪಾವತಿಸಲು ಕಷ್ಟವಾದರೆ, ಅವುಗಳನ್ನು ಸುಲಭವಾಗಿ 6 ಅಥವಾ 9 ತಿಂಗಳ EMI ಗಳಾಗಿ ಪರಿವರ್ತಿಸಬಹುದು.

    ದೀರ್ಘಕಾಲಿಕ ಗುರಿ: ಭಾರತದಲ್ಲಿ ಇಂದಿಗೂ ಕೇವಲ 20% ಜನರಿಗೆ ಮಾತ್ರ ಕ್ರೆಡಿಟ್ ಕಾರ್ಡ್ ಸೌಲಭ್ಯ ಸಿಗುತ್ತಿದೆ. ಈ ಸುಲಭ EMI ಮತ್ತು UPI ಲಿಂಕ್ ಸೌಲಭ್ಯದ ಮೂಲಕ ಉಳಿದ 80% ಮಾರುಕಟ್ಟೆಯನ್ನು ತಲುಪಲು ಗೂಗಲ್ ಮಾಸ್ಟರ್ ಪ್ಲಾನ್ ಮಾಡಿದೆ.

    ಸದ್ಯದ ನಿಯಮಗಳ ಪ್ರಕಾರ, ವಿಸಾ (Visa) ಮತ್ತು ಮಾಸ್ಟರ್‌ಕಾರ್ಡ್‌ಗಳನ್ನು (MasterCard) ನೇರವಾಗಿ ಯುಪಿಐಗೆ ಲಿಂಕ್ ಮಾಡಲು ಸಾಧ್ಯವಿಲ್ಲ. ಆದರೆ, ಗೂಗಲ್ ಈ ಕಾರ್ಡ್ ಅನ್ನು RuPay ನೆಟ್‌ವರ್ಕ್‌ನಲ್ಲಿ ಬಿಡುಗಡೆ ಮಾಡಿರುವುದರಿಂದ ಯುಪಿಐ ಮಾರುಕಟ್ಟೆಯಲ್ಲಿ ಗೂಗಲ್ ಮೇಲುಗೈ ಸಾಧಿಸುವುದು ಗ್ಯಾರಂಟಿ ಎನ್ನಲಾಗುತ್ತಿದೆ. ಈಗಾಗಲೇ ಮಾರುಕಟ್ಟೆಯಲ್ಲಿರುವ Paytm, PhonePe, SBI, ಮತ್ತು HDFC ಕಾರ್ಡ್‌ಗಳಿಗೆ ಗೂಗಲ್ ಈಗ ಪ್ರಬಲ ಪೈಪೋಟಿ ನೀಡಲು ಸಜ್ಜಾಗಿದೆ.

    ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ಆದಾಯ ಮಿತಿ ಪರಿಷ್ಕರಣೆ: ಸಚಿವ ಕೆ.ಹೆಚ್. ಮುನಿಯಪ್ಪ ಘೋಷಣೆ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading