ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ನಿರ್ದೇಶಕ ಪ್ರಕಾಶ್ ವೀರ್ ಕಾಂಬಿನೇಶನ್ನ ಬಹು ನಿರೀಕ್ಷಿತ ಚಿತ್ರ ದಿ ಡೆವಿಲ್ ಕಳೆದ ಗುರುವಾರ ಬಿಡುಗಡೆಯಾಗಿ ನಿನ್ನೆಗೆ ( ಡಿಸೆಂಬರ್ 18 ) ಎಂಟು ದಿನಗಳ ಓಟವನ್ನು ಪೂರೈಸಿದೆ.
ಬಿಡುಗಡೆಗೂ ಮುನ್ನ ದರ್ಶನ್ ಚಿತ್ರವೆಂಬ ಕಾರಣಕ್ಕೆ ದೊಡ್ಡ ಹೈಪ್ ಹುಟ್ಟುಹಾಕಿದ್ದ ಚಿತ್ರಕ್ಕೆ ಮೊದಲ ದಿನ ಅಭಿಮಾನಿಗಳು ದೊಡ್ಡ ಮಟ್ಟದಲ್ಲಿ ಚಿತ್ರಮಂದಿರಗಳಿಗೆ ನುಗ್ಗಿದ ಕಾರಣ ಆ ದಿನದಂದು ಭರ್ಜರಿ ಗಳಿಕೆಯನ್ನು ಮಾಡಿತ್ತು.
ಬಳಿಕ ಎರಡನೇ ದಿನ ಶುಕ್ರವಾರ ದಿಢೀರ್ ಕುಸಿತ ಕಂಡ ಡೆವಿಲ್ ಶನಿವಾರ ಹಾಗೂ ಭಾನುವಾರ ರಜಾ ದಿನಗಳಿದ್ದ ಕಾರಣ ಗಳಿಕೆಯಲ್ಲಿ ಸುಧಾರಣೆ ಕಂಡಿತ್ತು. ಆದರೆ ಸೋಮವಾರ ಬರುತ್ತಿದ್ದಂತೆ ಡೆವಿಲ್ ಬಾಕ್ಸ್ಆಫೀಸ್ನಲ್ಲಿ ತೆವಳಲಾರಂಭಿಸಿದೆ.
ಸ್ಯಾಕ್ನಿಲ್ಕ್ ವೆಬ್ಸೈಟ್ ಪ್ರಕಾರ ಮೊದಲ ದಿನ 10 ಕೋಟಿ ಗಳಿಕೆ ಮಾಡಿದ್ದ ಡೆವಿಲ್ ಎರಡನೇ ದಿನ 3.4, ಮೂರನೇ ದಿನ 3.8, ನಾಲ್ಕನೇ ದಿನ 4, ಐದನೇ ದಿನ 1.45, ಆರನೇ ದಿನ 1.05, ಏಳನೇ ದಿನ 0.8 ಹಾಗೂ ನಿನ್ನೆ ಎಂಟನೇ ದಿನ ಕೇವಲ 0.53 ಕೋಟಿ ರೂ ನೆಟ್ ಗಳಿಕೆ ಮಾಡಿದೆ ಎಂದು ವರದಿ ಮಾಡಿದೆ.
ಈ ಮೂಲಕ ಚಿತ್ರ ಎಂಟು ದಿನಗಳಲ್ಲಿ ಒಟ್ಟು 25.03 ಕೋಟಿ ಗಳಿಕೆ ಮಾಡಿದೆ ಎಂದು ಸ್ಯಾಕ್ನಿಲ್ಕ್ ವರದಿ ಮಾಡಿದೆ.
ಹೀಗಾಗಿ ದರ್ಶನ್ ಬಾಕ್ಸ್ಆಫೀಸ್ನಲ್ಲಿ ಸೋತಿದೆ ಎಂದು ಸಿನಿ ರಸಿಕರ ವಲಯದಲ್ಲಿ ಚರ್ಚೆ ಆರಂಭವಾಗಿದೆ. ಬಿಡುಗಡೆಯಾದ ಮೂರ್ನಾಲ್ಕು ದಿನ ಪರವಾಗಿಲ್ಲ ಎಂಬ ಗಳಿಕೆ ಮಾಡಿದ ಡೆವಿಲ್ ನಂತರ ಸಿನಿ ರಸಿಕರಿಂದ ಚಿತ್ರದ ಬಗ್ಗೆ ಮೆಚ್ಚುಗೆ ಬಾರದ ಕಾರಣ ಗಳಿಕೆಯಲ್ಲಿ ಎಡವಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


