ಹಿರಿಯ ನಾಗರಿಕರಿಗೆ ಸಂತೋಷದ ಸುದ್ದಿ ನಿವೃತ್ತಿಯ ನಂತರದ ಆರ್ಥಿಕ ಭದ್ರತೆಯನ್ನು ಖಚಿತಪಡಿಸಲು, ಭಾರತದ ನಂಬರ್ ಒನ್ ವಿಮಾ ಸಂಸ್ಥೆ—ಭಾರತೀಯ ಜೀವ ವಿಮಾ ನಿಗಮ (LIC)—ತನ್ನ ಹೊಸ ಸ್ಮಾರ್ಟ್ ಪೆನ್ಷನ್ ಪ್ಲಾನ್ (Smart Pension Yojana) ಅನ್ನು ಪರಿಚಯಿಸಿದೆ. ಈ ಹೊಸ ಯೋಜನೆ, ನಿವೃತ್ತಿಯ ನಂತರ ನಿರಂತರ ಆದಾಯವನ್ನು ಒದಗಿಸುವಂತೆ ವಿನ್ಯಾಸಗೊಳಿಸಲಾಗಿದೆ. ಹಣಕಾಸು ಸೇವೆಗಳ ಕಾರ್ಯದರ್ಶಿ ಎಂ. ನಾಗರಾಜು ಮತ್ತು LIC ಸಿಇಒ ಸಿದ್ಧಾರ್ಥ ಮೊಹಾಂತಿ ಉದ್ಘಾಟಿಸಿದರು. . ಇದನ್ನು ‘ಸಿಂಗಲ್ ಪ್ರೀಮಿಯಂ ಸ್ಕೀಮ್(Single primium Scheeme) ಎಂದು ಕರೆಯಲಾಗುತ್ತದೆ. ಈ ಯೋಜನೆ ಭಾಗವಹಿಸದ, ಲಿಂಕ್ ಮಾಡದ, ವೈಯಕ್ತಿಕ ಅಥವಾ ಗುಂಪು ಪಿಂಚಣಿ ಆಯ್ಕೆಗಳೊಂದಿಗೆ ಉಳಿತಾಯ ಮತ್ತು ತಕ್ಷಣದ ವರ್ಷಾಶನ ಲಾಭಗಳನ್ನು ಒದಗಿಸುತ್ತದೆ. LIC ಸ್ಮಾರ್ಟ್ ಪಿಂಚಣಿ ಯೋಜನೆ ನಿಮ್ಮ ನಿವೃತ್ತಿಯ ಭವಿಷ್ಯಕ್ಕೆ ಭದ್ರತೆ ನೀಡುವಲ್ಲಿ ಮತ್ತು ಏಕ ಅಥವಾ ಜಂಟಿ ಪಿಂಚಣಿ ಪ್ರಯೋಜನಗಳ ಅನುಭವವನ್ನು ಸುಲಭಗೊಳಿಸುವಲ್ಲಿ ಸಹಾಯಕವಾಗುತ್ತದೆ.
ಹೊಸ ಪಿಂಚಣಿ ಯೋಜನೆ ಸ್ಮಾರ್ಟ್ ಪಿಂಚಣಿ ಯೋಜನೆ ಖರೀದಿಸುವ ವಿಧಾನಗಳು:
ಆಫ್‌ಲೈನ್ ವಿಧಾನ:
LIC ಏಜೆಂಟ್‌ಗಳ ಮೂಲಕ – ಅಧಿಕೃತ LIC ಏಜೆಂಟ್ ಅನ್ನು ಸಂಪರ್ಕಿಸಿ.
ಮಧ್ಯವರ್ತಿಗಳು (Intermediaries) – LIC ಜೊತೆ ಸಂಪರ್ಕ ಹೊಂದಿರುವ ವಿಮಾ ಕಂಪನಿಗಳು ಅಥವಾ ಬ್ಯಾಂಕ್‌ಗಳ ಮೂಲಕ.
POSP-LI (Point of Sales Person – Life Insurance) – ಅಂಗೀಕೃತ POSP ವಿತರಕರ ಮೂಲಕ.
CPSC-SPV (Common Public Service Center – Special Purpose Vehicle) – ಸರ್ಕಾರಿ ಅನುಮೋದಿತ ಸಾರ್ವಜನಿಕ ಸೇವಾ ಕೇಂದ್ರಗಳಲ್ಲಿ ಲಭ್ಯ.
ಆನ್‌ಲೈನ್ — ಎಲ್ಐಸಿಯ ಅಧಿಕೃತ ವೆಬ್‌ಸೈಟ್ http://www.licindia.in ಮೂಲಕ.

ಎಲ್ಐಸಿ ಸ್ಮಾರ್ಟ್ ಪಿಂಚಣಿ ಯೋಜನೆಯ ವೈಶಿಷ್ಟ್ಯಗಳು
ಆರ್ಥಿಕ ಭದ್ರತೆ: ನಿವೃತ್ತಿಯ ನಂತರ ನಿರಂತರ ಪಿಂಚಣಿ(Pension) ಆದಾಯವನ್ನು ಒದಗಿಸುವ ಈ ಯೋಜನೆ ನಿಮ್ಮ ಭವಿಷ್ಯವನ್ನು ಆರ್ಥಿಕವಾಗಿ ಭದ್ರವಾಗಿರಿಸುತ್ತದೆ.
ಒಮ್ಮೆ ಮಾತ್ರ ಪ್ರೀಮಿಯಂ ಪಾವತಿ: ಪಿಂಚಣಿ ಪಡೆಯಲು ನೀವು ಸಂಪೂರ್ಣ ಪ್ರೀಮಿಯಂ ಅನ್ನು ಒಂದೇ ಬಾರಿಗೆ ಪಾವತಿಸಬೇಕು. ಹೂಡಿಕೆಯ ಬಳಿಕ, ನೀವು ಆಯ್ಕೆ ಮಾಡಿದ ವರ್ಷಾಶನ ವಿಧಾನವನ್ನು ಅನುಸರಿಸಿ ನಿರಂತರ ಪಿಂಚಣಿ ಪಡೆಯಲು ಆರಂಭಿಸಬಹುದು.
ವಿವಿಧ ಪಿಂಚಣಿ ಆಯ್ಕೆಗಳು: ಈ ಯೋಜನೆಯಡಿ ಸಿಂಗಲ್ ಲೈಫ್ ವರ್ಷಾಶನ (ವ್ಯಕ್ತಿಗತ) ಮತ್ತು ಜಾಯಿಂಟ್ ಲೈಫ್ ವರ್ಷಾಶನ (ಪತ್ನಿ/ಪತಿಗಾಗಿ) ಆಯ್ಕೆಗಳನ್ನು ನೀಡಲಾಗುತ್ತದೆ, ನೀವು ನಿಮ್ಮ ಅಗತ್ಯಗಳ ಪ್ರಕಾರ ಆಯ್ಕೆ ಮಾಡಬಹುದು.
ಲಿಕ್ವಿಡಿಟಿ ಆಯ್ಕೆಗಳು: ಈ ಯೋಜನೆಯಡಿಯಲ್ಲಿ ನೀವು ಅರ್ಧ ಅಥವಾ ಸಂಪೂರ್ಣ ಹಣ ಹಿಂತೆಗೆದುಕೊಳ್ಳಲು ಅವಕಾಶ ಪಡೆಯಬಹುದು, ತುರ್ತು ಆರ್ಥಿಕ ಅವಶ್ಯಕತೆಗಳಿಗೆ ಇದು ಸಹಾಯ ಮಾಡುತ್ತದೆ.ಈಗಾಗಲೇ ಎಲ್ಐಸಿ(LIC) ಪಾಲಿಸಿ ಮಾಡಿಸಿರುವವರಿಗೆ ಹೆಚ್ಚಿನ ಆ್ಯನುಟಿ ದರಗಳ ಆಫರ್ ನೀಡಲಾಗುತ್ತದೆ.
ಕನಿಷ್ಠ ಹೂಡಿಕೆ: ಈ ಯೋಜನೆಯಲ್ಲಿ ಭಾಗವಹಿಸಲು ಕನಿಷ್ಠ ಹೂಡಿಕೆ ₹1 ಲಕ್ಷ ಆಗಿರುತ್ತದೆ.ಅಗತ್ಯಬಿದ್ದರೆ ಪಾಲಿಸಿದಾರರು ಪೂರ್ಣ ಹಣ ಹಿಂಪಡೆಯುವ ಅವಕಾಶವೂ ಇರುತ್ತದೆ
ಸಾಲ ಸೌಲಭ್ಯ: ಯೋಜನೆ ಪ್ರಾರಂಭವಾದ ಮೂರು ತಿಂಗಳ ನಂತರ, ನೀವು ಈ ಯೋಜನೆಯಡಿ ಸಾಲ ಪಡೆಯುವ ಅವಕಾಶವನ್ನು ಪಡೆಯಬಹುದು.ಅಥವಾ ಫ್ರೀ-ಲುಕ್ ಅವಧಿ ಮುಗಿದ ನಂತರ, ವಿವಿಧ ವರ್ಷಾಶನ ನಿಯಮಗಳಿಗೆ ಒಳಪಟ್ಟು ಸಾಲವನ್ನು ಪಡೆಯಬಹುದು.ನಿಮ್ಮ ಪ್ರೀಮಿಯಮ್ ಮೊತ್ತಕ್ಕೆ ಅನುಗುಣವಾಗಿ ನೀವು ಸಾಲ ಪಡೆಯಲು ಸಾಧ್ಯ.
ಎಲ್ಐಸಿ ಸ್ಮಾರ್ಟ್ ಪಿಂಚಣಿ ಯೋಜನೆಗೆ ಕನಿಷ್ಠ ಮತ್ತು ಗರಿಷ್ಠ ಪ್ರವೇಶ ವಯಸ್ಸು ಕ್ರಮವಾಗಿ 18 ವರ್ಷಗಳು ಮತ್ತು ಕೆಲವು ಆಯ್ಕೆಗಳಿಗೆ 100 ವರ್ಷಗಳು.
ಎಲ್‌ಐಸಿ ಸ್ಮಾರ್ಟ್ ಪೆನ್ಷನ್ ಪ್ಲಾನ್‌ನಲ್ಲಿ ನೀವು ಆರಿಸಿಕೊಳ್ಳುವ ಪಾವತಿ ಅವಧಿಯ ಪ್ರಕಾರ ಕನಿಷ್ಠ ಆದಾಯ ಏರುತ್ತದೆ
ತಿಂಗಳಿಗೊಮ್ಮೆ: ಕನಿಷ್ಠ ₹1,000
ಮೂರು ತಿಂಗಳಿಗೊಮ್ಮೆ (quarterly): ಕನಿಷ್ಠ ₹3,000
ಆರು ತಿಂಗಳಿಗೊಮ್ಮೆ (Half year): ಕನಿಷ್ಠ ₹6,000
ವರ್ಷಕ್ಕೊಮ್ಮೆ: ಕನಿಷ್ಠ ₹12,000
ನಿಮ್ಮ ಬಂಡವಾಳ ಮತ್ತು ಆಯ್ಕೆ ಮಾಡಿದ ಆ್ಯನುಟಿ ಪ್ಲಾನ್‌ನ ಪ್ರಕಾರ ಈ ಆದಾಯ ಹೆಚ್ಚಾಗಬಹುದು. ಇವುಗಳು ನಿಮ್ಮ ನಿವೃತ್ತಿ ಜೀವನದಲ್ಲಿ ಆರ್ಥಿಕ ಸ್ಥಿರತೆ ಮತ್ತು ಭದ್ರತೆಯನ್ನು ನೀಡುತ್ತವೆ.ಎಲ್‌ಐಸಿ ಸ್ಮಾರ್ಟ್ ಪೆನ್ಷನ್ ಪ್ಲಾನ್‌ನ ಇನ್ನೊಂದು ಪ್ರಮುಖ ವಿಶೇಷತೆಯೇನೆಂದರೆ, ಪಾಲಿಸಿದಾರನಿಗೆ ಜೀವಮಾನ ಕಾಲದವರೆಗೆ ನಿರಂತರ ಆ್ಯನುಟಿ (ಪಿಂಚಣಿ) ದೊರೆಯುತ್ತದೆ.ಪಾಲಿಸಿದಾರರ ನಿಧನದ ನಂತರ, ನಾಮಿನಿಗೆ ಪ್ಲಾನ್‌ನ ಅನುಗುಣವಾಗಿ ಲಾಭ ಲಭ್ಯವಿರುತ್ತದೆ. ಪಾಲಿಸಿದಾರರು ಪಾಲಿಸಿ ಖರೀದಿಸುವ ಸಂದರ್ಭದಲ್ಲಿ ಈ ಆಯ್ಕೆಗಳನ್ನು ಮೊದಲೇ ನಿರ್ಧರಿಸಿರಬೇಕು
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


