Sunday, November 1, 2026
spot_img
More
    spot_img
    HomeLatest newsಅಜ್ಜಿ ಮಾಡುತ್ತಿದ್ದ ರುಚಿ: ಜೋಳದ ರೊಟ್ಟಿ ಮುಟಗಿ ಸವಿದರೆ ಬಾಲ್ಯ ನೆನಪಾಗುತ್ತೆ

    ಅಜ್ಜಿ ಮಾಡುತ್ತಿದ್ದ ರುಚಿ: ಜೋಳದ ರೊಟ್ಟಿ ಮುಟಗಿ ಸವಿದರೆ ಬಾಲ್ಯ ನೆನಪಾಗುತ್ತೆ

    ದಕ್ಷಿಣ ಕರ್ನಾಟಕದಲ್ಲಿ ಇಡ್ಲಿ, ದೋಸೆ, ಕಡುಬು ಮುಂತಾದವು ಬೆಳಗಿನ ತಿಂಡಿಯ ಸಾಮಾನ್ಯ ಆಯ್ಕೆಯಾಗಿದ್ದರೆ, ಉತ್ತರ ಕರ್ನಾಟಕದಲ್ಲಿ ಜೋಳದ ರೊಟ್ಟಿ ದಿನನಿತ್ಯದ ಮುಖ್ಯ ಆಹಾರ. ಇದು ಕೇವಲ ರುಚಿಯ ವಿಷಯವಲ್ಲ, ಆರೋಗ್ಯದ ದೃಷ್ಟಿಯಿಂದಲೂ ತುಂಬಾ ಲಾಭದಾಯಕ.ದೊಡ್ಡವರಾದಂತೆ ನಾನಾ ಕಾರಣಗಳಿಂದ ಕುಟುಂಬದಿಂದ (Family) ದೂರ ಬರುತ್ತವೆ. ಇನ್ನು ಮಧ್ಯವಯಸ್ಸಿಗೆ ತಲುಪುತ್ತಿದ್ದಂತೆ ಎಲ್ಲರಿಗೂ ಬಾಲ್ಯದ ನೆನಪುಗಳು (Childhood Memory), ಅಮ್ಮ ಮಾಡಿಕೊಡುತ್ತಿದ್ದ ತಿಂಡಿಗಳು ಕಣ್ಮುಂದೆ ಬರುತ್ತವೆ. ಅಮ್ಮನ ಕೈ ರುಚಿಯು ಮರೆತು ಹೋಗದ ಅಪರೂಪದ ಅನುಭವ. ಏನೇ ಇಲ್ಲದಿದ್ದರೂ, ಅವರ ಕೈಯಲ್ಲಿ ಎಲ್ಲವೂ ಸವಿಯಾದ ತಿಂಡಿಯಾಗಿ ಬದಲಾಗುತ್ತಿತ್ತು.ಪೀಜಾ-ಬರ್ಗರ್‌ಗಿಂತಲೂ ರುಚಿಯಾಗಿದ್ದು, ನೈಸರ್ಗಿಕ ಪೌಷ್ಟಿಕತೆಯನ್ನು ಹೊಂದಿರುವುದರಿಂದ ಆರೋಗ್ಯಕ್ಕೂ ಒಳ್ಳೆಯದು.ಅದು ಕೇವಲ ಆರೋಗ್ಯಕರವಾಗಿರದೆ, ಶಕ್ತಿದಾಯಕವೂ ಆಗಿದೆ. ಉತ್ತರ ಕರ್ನಾಟಕ ಭಾಗದ ಫೇಮಸ್ ಖಾದ್ಯವಾಗಿರುವ ಜೋಳದ ರೊಟ್ಟಿ ಮುಟಿಗಿಯನ್ನು ಮಾಡುವುದು ಸುಲಭ ರುಚಿಯು ಕೂಡ ಅಷ್ಟೇ ಅದ್ಭುತವಾಗಿರುತ್ತದೆ.

    ಜೋಳದ ರೊಟ್ಟಿ ಮುಟಿಗಿ ಬೇಕಾಗುವ ಸಾಮಾಗ್ರಿಗಳು

    ಜೋಳದ ರೊಟ್ಟಿ – 1

    ಜೀರಿಗೆ: ಅರ್ಧ ಟೀ ಸ್ಪೂನ್

    ಅಚ್ಚ ಖಾರದ ಪುಡಿ: ಅರ್ಧ ಟೀ ಸ್ಪೂನ್

    ಕೋತಂಬರಿ ಸೊಪ್ಪು

    ಬೆಳ್ಳುಳ್ಳಿ: ಎರಡರಿಂದ ಮೂರು ಎಸಳು

    ರುಚಿಗೆ ತಕ್ಕಷ್ಟು ಉಪ್ಪು

    ಜೋಳದ ರೊಟ್ಟಿ ಮುಟಿಗಿ ಮಾಡುವ ವಿಧಾನ

    *ಮೊದಲಿಗೆ ಜೋಳದ ಹಿಟ್ಟನ್ನು ರೊಟ್ಟಿ ಮಾಡುವ ಹದಕ್ಕೆ ಕಲಿಸಿಕೊಳ್ಳಿ. ನಂತರ ಎರಡು ರೊಟ್ಟಿಗೆ ಬೇಕಾಗುವಷ್ಟು ಹಿಟ್ಟನ್ನು ತೆಗೆದುಕೊಂಡು ದಪ್ಪವಾಗಿ ತಟ್ಟಿಕೊಳ್ಳಿ.

    *ಈಗ ಒಲೆ ಆನ್ ಮಾಡ್ಕೊಂಡು ತವೆ ಇರಿಸಿಕೊಳ್ಳಿ. ತವೆ ಬಿಸಿ ಆಗುತ್ತಿದ್ದಂತೆ ತಟ್ಟಿಕೊಂಡಿರುವ ರೊಟ್ಟಿಯನ್ನು ಹಾಕಿಕೊಳ್ಳಿ. ನಂತರ ರೊಟ್ಟಿ ಮೇಲೆ ಬಟ್ಟೆಯಿಂದ ನೀರು ಸವರಬೇಕು. ನಂತರ ರೊಟ್ಟಿಯನ್ನು ಚೆನ್ನಾಗಿ ಎರಡು ಬದಿಯಲ್ಲಿ ಬೇಯಿಸಿಕೊಳ್ಳಿ.

    • ನಂತರ ಅದನ್ನು ತಟ್ಟೆಯಲ್ಲಿ ತೆಗೆದಿಟ್ಟುಕೊಳ್ಳಿ. ಬಿಸಿ ಇರುವಾಗಲೇ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ.

    *ಬಳಿಕ ಖಾರದ ಪುಡಿ, ಗರಂ ಮಸಾಲ ಪುಡಿ, ಕೊತ್ತಂಬರಿ ಸೊಪ್ಪು, ಮೆಣಸಿನಕಾಯಿ, ಜೀರಿಗೆ, ಎಣ್ಣೆ ಹಾಕಿ ಚೆನ್ನಾಗಿ ನಾದಿಕೊಳ್ಳಿ

    *ಒರಳು ಕಲ್ಲಿನಲ್ಲಿ ಉಪ್ಪು, ಒಣ ಖಾರದ ಪುಡಿ,(ಅಚ್ಚ ಖಾರದ ಪುಡಿ ಬದಲಾಗಿ ಹಸಿಮೆಣಸಿನಕಾಯಿಯನ್ನು ಸಹ ಬಳಸಿಕೊಳ್ಳಬಹುದು) ಬೆಳ್ಳುಳ್ಳಿ ಎಸಳು , ಜೀರಿಗೆ ಹಾಗೂ ಚೂರು ಮಾಡಿದ ಜೋಳದ ರೊಟ್ಟಿ ಸೇರಿಸಿ ಚೆನ್ನಾಗಿ ಕುಟ್ಟಿಕೊಳ್ಳಿ.

    *ಇದಕ್ಕೆ ಸ್ವಲ್ಪ ತುಪ್ಪ ಸೇರಿಸಿ ಕುಟ್ಟಿ ಕೈಯಿಂದ ಉಂಡೆ ಕಟ್ಟಿದರೆ ರುಚಿಕರವಾದ ಜೋಳದ ಮುಟಿಗಿ ಸವಿಯಲು ಸಿದ್ಧ.ಇದನ್ನು ಬಿಸಿಯಾಗಿರುವಾಗಲೇ ತಿಂದರೆ ಅದ್ಬುತ ರುಚಿ ಬರುತ್ತದೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search