ಗ್ರೀನ್ ಟೀ(Green tea) ತುಂಬಾ ಆರೋಗ್ಯಕರ ಪಾನೀಯವೆಂದು ಪರಿಗಣಿಸಲಾಗಿದೆ.ಜಪಾನಿನ ಸಂಸ್ಕೃತಿಯ ಪ್ರಧಾನ ಅಂಶವಾದ ಗ್ರೀನ್ ಟೀ , ಅದರ ಹಲವಾರು ಆರೋಗ್ಯ ಪ್ರಯೋಜನಗಳಿಂದಾಗಿ ಪ್ರಪಂಚದಾದ್ಯಂತ ಜನಪ್ರಿಯತೆಯನ್ನು ಗಳಿಸಿದೆ.ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಚಹಾ ಆಯ್ಕೆಯಲ್ಲಿ ಪೈಪೋಟಿ ನೀಡುವ ಗ್ರೀನ್ ಟೀ ತ್ವರಿತ ಸಮಯದಲ್ಲಿಯೇ ಮನೆಮಾತಾಗಿ ಬೆಳೆದಿದೆ.ಗ್ರೀನ್ ಟೀಯಲ್ಲಿರುವ ಪೋಷಕಾಂಶಗಳು, ಅಂಟಿ ಆಕ್ಸಿಡೆಂಟ್‌ಗಳು (Antioxidant) ಮತ್ತು ಇತರ ಖನಿಜಗಳ ಪ್ರಮಾಣವನ್ನು ಪರಿಗಣಿಸಿದರೆ ಇದೊಂದು ಅತ್ಯುತ್ತಮವಾದ ಪಾನೀಯ ಎನ್ನುವುದರಲ್ಲಿ ಎರಡು ಮಾತಿಲ್ಲ,ಹಸಿರು ಚಹಾ ಹಾಗೂ ಊಟ ಮಾಡುವುದಕ್ಕೆ ಒಂದು ಗಂಟೆ ಅಂತರವಿರಲಿ. ಇದು ತಿಂದ ಆಹಾರ ಸುಲಭವಾಗಿ ಜೀರ್ಣವಾಗುತ್ತದೆ.ಗ್ರೀನ್ ಟೀ ಸ್ಮರಣಶಕ್ತಿ ಹೆಚ್ಚಿಸುತ್ತದೆ. ಇದರೊಂದಿಗೆ ಆಲ್ಝೈಮರ್, ಪಾರ್ಕಿನ್ಸನ್ ನಂತಹ ನರ ಕ್ಷೀಣಗೊಳ್ಳುವ ಕಾಯಿಲೆಗಳಿಂದ ರಕ್ಷಿಸುವ ಸಾಮರ್ಥ್ಯ ಇದಕ್ಕಿದೆ. ನಿಯಮಿತವಾಗಿ ಗ್ರೀನ್ ಟೀ ಸೇವಿಸುವುದರಿಂದ ಆರೋಗ್ಯಕ್ಕೆ ಯಾವೆಲ್ಲಾ ಪ್ರಯೋಜನಗಳು ದೊರೆಯುತ್ತವೆ ಎಂಬದನ್ನು ಅರಿತುಕೊಳ್ಳೋಣ.
ಡಯಾಬಿಟಿಸ್ ನಿಯಂತ್ರಣ :
ರಕ್ತದಲ್ಲಿನ ಶುಗರ್ ಲೆವೆಲ್ ನಿಯಂತ್ರಣಕ್ಕೆ ಗ್ರೀನ್ ಟೀ ಪರಿಣಾಮಕಾರಿವಾಗಿದೆ. American Journal of Clinical Nutrition ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಗ್ರೀನ್ ಟೀವು ಟೈಪ್-2 ಮಧುಮೇಹದ ಅಪಾಯವನ್ನು ಕಡಿಮೆ ಮಾಡುವುದು ಮತ್ತು ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸಲು ಸಹಾಯ ಮಾಡುವುದು ಎಂದು ತಿಳಿಸಿದೆ.ಹೀಗಾಗಿ, ದಿನನಿತ್ಯ ಗ್ರೀನ್ ಟೀ ಸೇವನೆ ಮಾಡುವುದು ಮಧುಮೇಹ ನಿಯಂತ್ರಣಕ್ಕೆ ಸಹಾಯವಾಗಬಹುದು

ತೂಕ ಇಳಿಕೆ :
ಗ್ರೀನ್ ಟೀನಲ್ಲಿರುವ ಕ್ಯಾಟೆಚಿನ್‌ಗಳು ಹಾಗೂ ಕೆಫೀನ್ ಕೊಬ್ಬನ್ನು ಸುಡಲು ಸಹಾಯ ಮಾಡುತ್ತದೆ. ಇಂಟರ್ನ್ಯಾಷನಲ್ ಜರ್ನಲ್ ಆಫ್ ಒಬೆಸಿಟಿಯಲ್ಲಿ ಪ್ರಕಟವಾದ ಅಧ್ಯಯನವು ಗ್ರೀನ್ ಟೀ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಚಯಾಪಚಯ ಕ್ರಿಯೆಯನ್ನು ಸುಧಾರಿಸಲು ಗ್ರೀನ್ ಟೀ ಉಪಯುಕ್ತವಾಗಿದೆ.ಇನ್ನೊಂದು ಅಧ್ಯಯನದ ಪ್ರಕಾರ ಗ್ರೀನ್ ಟೀಯಲ್ಲಿ ಇರುವಂತಹ ಕೆಫಿನ್ ಅಂಶವು ದೈಹಿಕ ಪ್ರದರ್ಶನವನ್ನು ಶೇ.11ರಿಂದ 12ರಷ್ಟು ಹೆಚ್ಚಿಸುವುದು.
ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ
ಮಚ್ಚಾ ಗ್ರೀನ್ ಟೀಯಲ್ಲಿರುವ ಉತ್ಕರ್ಷಣ ನಿರೋಧಕಗಳು, ಜೀವಸತ್ವಗಳು ಮತ್ತು ಖನಿಜಗಳ ಸಮೃದ್ಧ ಶ್ರೇಣಿಯು ಬಲವಾದ ರೋಗನಿರೋಧಕ ವ್ಯವಸ್ಥೆಯನ್ನು ಬೆಂಬಲಿಸುತ್ತದೆ. ನಿರ್ದಿಷ್ಟವಾಗಿ ಹೇಳುವುದಾದರೆ, EGCG ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳನ್ನು ಹೊಂದಿದೆ ಎಂದು ತೋರಿಸಲಾಗಿದೆ, ಇದು ದೇಹವು ಸೋಂಕುಗಳು ಮತ್ತು ವೈರಸ್‌ಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಗ್ರೀನ್ ಟೀ ವಿಟಮಿನ್ A ಮತ್ತು C ಯ ಉತ್ತಮ ಮೂಲವಾಗಿದೆ,
ಬಾಯಿಯ ಆರೋಗ್ಯ :
ಗ್ರೀನ್ ಟೀ ಬ್ಯಾಕ್ಟೀರಿಯಾ ವಿರೋಧಿ ಹಾಗೂ ಆ್ಯಂಟಿವೈರಲ್ ಗುಣಗಳನ್ನು ಹೊಂದಿದೆ. ಇದು ಬಾಯಿಯಲ್ಲಿರುವ ಬ್ಯಾಕ್ಟೀರಿಯಾ ಕೊಲ್ಲುತ್ತದೆ. ವಸಡಿನ ಕಾಯಿಲೆಯನ್ನು ಬರದಂತೆ ತಡೆಯುತ್ತದೆ. ಬಾಯಿಯ ಆರೋಗ್ಯ ಕಾಪಾಡಿಕೊಳ್ಳಲು ನಿಯಮಿತವಾಗಿ ಒಂದು ಇಲ್ಲವೇ ಎರಡು ಗ್ಲಾಸ್ ಗ್ರೀನ್ ಟೀ ಸೇವಿಸುವುದು ಒಳ್ಳೆಯದು ಎಂದು ತಜ್ಞರು ತಿಳಿಸುತ್ತಾರೆ.ಇದು ಹಲ್ಲಿನಲ್ಲಿ ಪದರ ನಿರ್ಮಾಣ, ದಂತಕುಳಿ ಮತ್ತು ಒಸಡಿನ ಸಮಸ್ಯೆ ಉಂಟು ಮಾಡುವಂತಹ ಸ್ಟ್ರೆಪ್ಟೋಕೊಕಸ್ ಮ್ಯುಟಾನ್ಸ್ ಎನ್ನುವ ಬ್ಯಾಕ್ಟೀರಿಯಾದ ಬೆಳವಣಿಗೆ ತಡೆಯುವುದು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


