Tuesday, August 11, 2026
spot_img
More
    spot_img
    HomeTop StoryChampions Trophy 2025: ನ್ಯೂಜಿಲೆಂಡ್‌ ಪಂದ್ಯದ ವೇಳೆ ನಾಯಕ ರಿಜ್ವಾನ್‌ - ಅಫ್ರಿದಿ ಕಿತ್ತಾಟ; ವಿಡಿಯೊ...

    Champions Trophy 2025: ನ್ಯೂಜಿಲೆಂಡ್‌ ಪಂದ್ಯದ ವೇಳೆ ನಾಯಕ ರಿಜ್ವಾನ್‌ – ಅಫ್ರಿದಿ ಕಿತ್ತಾಟ; ವಿಡಿಯೊ ವೈರಲ್‌

    ಕರಾಚಿ: ನಿನ್ನೆ (ಫೆಬ್ರವರಿ 19) ಕರಾಚಿಯ ನ್ಯಾಷನಲ್‌ ಸ್ಟೇಡಿಯಂನಲ್ಲಿ ನಡೆದ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್‌ ತಂಡಗಳ ನಡುವಿನ ಐಸಿಸಿ ಚಾಂಪಿಯನ್ಸ್‌ ಟ್ರೋಫಿ 2025ರ ಉದ್ಘಾಟನಾ ಪಂದ್ಯದಲ್ಲಿ ಕಿವೀಸ್‌ 60 ರನ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

    Advertisement

    ಅತ್ತ ಲೀಗ್‌ ಹಂತದ ಮೂರು ಪಂದ್ಯಗಳ ಪೈಕಿ ಮೊದಲ ಪಂದ್ಯವನ್ನು ಸೋತ ಪಾಕಿಸ್ತಾನಕ್ಕೆ ಸೆಮಿಫೈನಲ್‌ ಹಾದಿ ಬಲು ಕಠಿಣವಾಗಿ ಪರಿಣಮಿಸಿದ್ದು, ಪಾಕ್‌ ಯಶಸ್ವಿಯಾಗಿ ಸೆಮಿಫೈನಲ್‌ ತಲುಪಬೇಕೆಂದರೆ ಭಾರತ ಹಾಗೂ ಬಾಂಗ್ಲಾದೇಶ ತಂಡಗಳ ನಡುವಿನ ಪಂದ್ಯವನ್ನು ಗೆಲ್ಲಲೇಬೇಕಿದೆ.

    ಇನ್ನು ಪಾಕ್‌ನ ಇತ್ತೀಚೆಗಿನ ಪಂದ್ಯಗಳ ಫಲಿತಾಂಶ ಹಾಗೂ ನಿನ್ನೆಯ ಪಂದ್ಯದ ಸೋಲು ಪಾಕ್‌ ನಾಯಕ ಮೊಹಮ್ಮದ್‌ ರಿಜ್ವಾನ್‌ ಅವರ ನಾಯಕತ್ವದ ಆಲೋಚನೆಗಳ ಕುರಿತು ಚರ್ಚೆಯನ್ನು ಹುಟ್ಟುಹಾಕಿವೆ. ರಿಜ್ವಾನ್‌ ಕಳಪೆ ನಾಯಕತ್ವ ಸಹ ನ್ಯೂಜಿಲೆಂಡ್‌ ವಿರುದ್ಧದ ಸೋಲಿಗೆ ಕಾರಣವಾಗಿದೆ.

    ಹೀಗೆ ನಾಯಕನಾಗಿ ಎಡವಿರುವ ರಿಜ್ವಾನ್‌ ನ್ಯೂಜಿಲೆಂಡ್‌ ವಿರುದ್ಧದ ಪಂದ್ಯದಲ್ಲಿ ಆಟಗಾರರ ಜೊತೆ ತಾಳ್ಮೆ ಕಳೆದುಕೊಂಡು ವರ್ತಿಸಿದ ಘಟನೆ ನಡೆದಿದೆ. ಪಂದ್ಯದ 47ನೇ ಓವರ್‌ ಮಾಡಿದ ಶಾಹಿನ್‌ ಅಫ್ರಿದಿ ಟಾಮ್‌ ಲಾಥಮ್‌ಗೆ ಒಳ್ಳೆಯ ಎಸೆತವನ್ನೇ ಹಾಕಿದರು. ಆದರೆ ಅದು ಔಟ್‌ಸೈಡ್‌ ಎಡ್ಜ್‌ ಆಗಿ ಬೌಂಡರಿ ಹೋಯಿತು. ಈ ಎಸೆತದ ಕುರಿತು ಸ್ಥಳದಲ್ಲಿಯೇ ಅಸಮಾಧಾನ ಹೊರಹಾಕಿದ ರಿಜ್ವಾನ್‌ ಸನ್ನೆಯಲ್ಲೇ ಕೋಪ ಹೊರಹಾಕಿದ್ದಾರೆ. ಇದಕ್ಕೆ ಹೆಚ್ಚೇನೂ ಉತ್ತರ ನೀಡಲಾಗದ ಅಫ್ರಿದಿ ಔಟ್‌ ಸೈಡ್‌ ಎಡ್ಜ್‌ ಆದರೆ ನಾನೇನು ಮಾಡಲಿ ಎಂಬಂತೆ ಸನ್ನೆಯಲ್ಲೇ ಉತ್ತರ ನೀಡಿದ್ದಾರೆ. ಒಳ್ಳೆಯ ಎಸೆತ ಹಾಕಿ ವಿಕೆಟ್ ಪಡೆಯಲು ಯತ್ನಿಸಿದ ಬೌಲರ್‌ ಮೇಲೆ ಕಿಡಿಕಾರಿದ ರಿಜ್ವಾನ್‌ ಅವರದ್ದು ಯಾವ ರೀತಿಯ ನಾಯಕತ್ವ ಎಂಬ ಟೀಕೆ ಶುರುವಾಗಿದೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading