Sunday, November 1, 2026
spot_img
More
    spot_img
    HomeChampions Trophy 2025Champions Trophy 2025: ಚಿಕನ್‌ ತಿಂದ ಸಸ್ಯಾಹಾರಿ ಕೊಹ್ಲಿ; ವಿಡಿಯೊ ವೈರಲ್‌

    Champions Trophy 2025: ಚಿಕನ್‌ ತಿಂದ ಸಸ್ಯಾಹಾರಿ ಕೊಹ್ಲಿ; ವಿಡಿಯೊ ವೈರಲ್‌

    ದುಬೈ: ನಿನ್ನೆ (ಫೆಬ್ರವರಿ 19) ಪಾಕ್‌ ಹಾಗೂ ನ್ಯೂಜಿಲೆಂಡ್‌ ತಂಡಗಳ ನಡುವೆ ನಡೆದ ಐಸಿಸಿ ಚಾಂಪಿಯನ್ಸ್‌ ಟ್ರೋಫಿ 2025ರ ಉದ್ಘಾಟನಾ ಪಂದ್ಯದಲ್ಲಿ ಪಾಕ್‌ ವಿರುದ್ಧ ಕಿವೀಸ್‌ 60 ರನ್‌ಗಳ ಭರ್ಜರಿ ಗೆಲುವು ಸಾಧಿಸಿ ಶುಭಾರಂಭ ಮಾಡಿದೆ.

    ಅತ್ತ ಸೋಲುಂಡ ಪಾಕ್‌ ಸೆಮಿಫೈನಲ್‌ ಹಾದಿ ಕಠಿಣ ಮಾಡಿಕೊಂಡಿದೆ. ಇನ್ನು ಪಾಕಿಸ್ತಾನದಲ್ಲಿ ಚಾಂಪಿಯನ್ಸ್‌ ಟ್ರೋಫಿ ನಡೆಯುತ್ತಿದ್ದರೂ ಭಾರತದ ಪಂದ್ಯಗಳನ್ನು ದುಬೈನಲ್ಲಿ ಆಯೋಜಿಸಲಾಗಿದ್ದು, ಭಾರತ ಇಂದು (ಫೆಬ್ರವರಿ 20) ನಡೆಯಲಿರುವ ಟೂರ್ನಿಯ ಗ್ರೂಪ್‌ ಹಂತದ ಎರಡನೇ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಕಣಕ್ಕಿಳಿಯಲಿದೆ.

    ಇನ್ನು ಬಾಂಗ್ಲಾದೇಶ ವಿರುದ್ಧದ ಪಂದ್ಯಕ್ಕೂ ಮುನ್ನ ದುಬೈನಲ್ಲಿ ಭಾರತ ತಂಡದ ಆಟಗಾರರು ತಾಲೀಮು ನಡೆಸುತ್ತಿದ್ದು, ವಿಡಿಯೊ ಹಾಗೂ ಫೋಟೊಗಳು ವೈರಲ್‌ ಆಗಿವೆ. ಅತ್ತ ವಿರಾಟ್‌ ಕೊಹ್ಲಿ ಕುರಿತಾದ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಇದರಲ್ಲಿ ವಿರಾಟ್‌ ಕೊಹ್ಲಿ ಚಿಕನ್‌ ತಿನ್ನುತ್ತಿದ್ದಾರೆ ಎಂದು ವಿಡಿಯೊ ಹಂಚಿಕೊಂಡವರು ಆರೋಪಿಸಿದ್ದಾರೆ.

    ನಾನು ಸಸ್ಯಾಹಾರವನ್ನು ಮಾತ್ರ ಸೇವಿಸುವುದು ಎಂದು ಹೇಳಿಕೊಳ್ಳುವ ಕೊಹ್ಲಿ ಚಿಕತ್‌ ತಿನ್ನುತ್ತಿದ್ದಾರೆ ಎಂದು ಕೆಲವರು ಟೀಕಿಸಿದ್ದರೆ, ಇನ್ನೂ ಕೆಲವರು ಯಾವುದಾದರೂ ತರಕಾರಿ ಇರಬಹುದು ಎಂದು ಊಹಿಸಿದ್ದಾರೆ. ಇನ್ನೊಂದಷ್ಟು ಜನ ಪ್ರೇಮಾನಂದ ಮಹಾರಾಜ ಆಶ್ರಮಕ್ಕೆ ಇದಕ್ಕೇ ಹೋಗಿ ಬಂದದ್ದಾ ಎಂದು ಕಿಡಿಕಾರಿದ್ದಾರೆ. ಒಂದಷ್ಟು ಜನ ಅವರು ಏನಾದ್ರೂ ತಿನ್ನಲಿ ಬಿಡಿ, ಚಿಕನ್ ತಿನ್ನಬಾರದು ಅಂತ ರೂಲ್ಸ್‌ ಏನು ಇಲ್ಲವಲ್ಲ ಎಂದು ಟ್ರೋಲ್‌ ಮಾಡುವವರಿಗೆ ಟಾಂಗ್‌ ಕೊಟ್ಟಿದ್ದಾರೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search