ಎಲಾನ್ ಮಸ್ಕ್ ಮಾಲಕತ್ವದಲ್ಲಿರುವ ಟೆಸ್ಲಾ(Tesla) ಸಂಸ್ಥೆಯು ಭಾರತದಲ್ಲಿ ತನ್ನ ಎಲೆಕ್ಟ್ರಿಕ್ ಕಾರುಗಳನ್ನು(Tesla Electric Car) ಲಾಂಚ್ ಮಾಡಲು ಸಿದ್ಧತೆ ನಡೆಸುತ್ತಿದೆ. ಇತ್ತೀಚಿನ ವರದಿಗಳ ಪ್ರಕಾರ, ಟೆಸ್ಲಾ ಏಪ್ರಿಲ್ ತಿಂಗಳಿಂದ ತನ್ನ ಕಾರ್ಯಾಚರಣೆಗಳನ್ನು ಪ್ರಾರಂಭಿಸುವ ಯೋಜನೆ ಹೊಂದಿದ್ದು, ಆರಂಭಿಕ ಹಂತದಲ್ಲಿ ಜರ್ಮನಿಯ ಬರ್ಲಿನ್ ಗಿಗಾ ಫ್ಯಾಕ್ಟರಿಯಲ್ಲಿ ತಯಾರಿಸಲಾದ ಕಾರುಗಳನ್ನು ಭಾರತಕ್ಕೆ ಆಮದು ಮಾಡುವ ಸಾಧ್ಯತೆ ಇದೆ.ಈ ಕಾರುಗಳ ಆರಂಭಿಕ ಬೆಲೆ ಸುಮಾರು $25,000 (ಸುಮಾರು ₹21-22 ಲಕ್ಷ) ಆಗಿರಬಹುದು ಎಂದು ಹೇಳಲಾಗುತ್ತಿದೆ. ಅಲ್ಲದೆ, ಟೆಸ್ಲಾ ಮುಂಬೈಯ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ ಮತ್ತು ದೆಹಲಿಯ ಏರೋಸಿಟಿಯಲ್ಲಿ ಶೋರೂಮ್ಗಳನ್ನು ಸ್ಥಾಪಿಸಲು ಸ್ಥಳ ಹುಡುಕುತ್ತಿದೆ.ಸದ್ಯಕ್ಕೆ, ಭಾರತದಲ್ಲಿ ಸ್ಥಳೀಯ ಉತ್ಪಾದನೆಗೆ ಸಂಬಂಧಿಸಿದ ಯಾವುದೇ ಅಧಿಕೃತ ಘೋಷಣೆ ಇದುವರೆಗೂ ಟೆಸ್ಲಾ ನೀಡಿಲ್ಲ.

ಭಾರತೀಯ ಮಾರುಕಟ್ಟೆಗೆ ಟೆಸ್ಲಾ ಕಾರುಗಳ ಪ್ರವೇಶವು ದೇಶದ ಎಲೆಕ್ಟ್ರಿಕ್ ವಾಹನ ಕ್ಷೇತ್ರದಲ್ಲಿ ಮಹತ್ತರ ಬೆಳವಣಿಗೆ ಎಂದು ಪರಿಗಣಿಸಲಾಗುತ್ತಿದೆ. ಆದರೆ, ಈ ಕಾರುಗಳ ಅಂತಿಮ ಬೆಲೆ ಮತ್ತು ಲಭ್ಯತೆ ಸ್ಥಳೀಯ ತೆರಿಗೆಗಳು, ಆಮದು ಸುಂಕಗಳು ಹಾಗೂ ಸರ್ಕಾರದ ನೀತಿಗಳ ಮೇಲೆ ಅವಲಂಬಿತವಾಗಿರುತ್ತದೆ.ಭಾರತ ಸರ್ಕಾರವು ಹೈ-ಎಂಡ್ ಎಲೆಕ್ಟ್ರಿಕ್ ಕಾರುಗಳ ಮೇಲೆ ಇರುವ ಮೂಲ ಆಮದು ಸುಂಕವನ್ನು ಶೇ. 110ರಿಂದ ಶೇ. 70ರಷ್ಟು ಇಳಿಸಿರುವುದು, ಟೆಸ್ಲಾ ಮುಂತಾದ ಬ್ರ್ಯಾಂಡ್ಗಳಿಗೆ ಭಾರತೀಯ ಮಾರುಕಟ್ಟೆಗೆ ಪ್ರವೇಶಿಸಲು ಅನುಕೂಲವನ್ನು ಒದಗಿಸಿದೆ.ಈ ಸುಂಕ ಪರಿಷ್ಕರಣೆಯ ನಂತರ, ಟೆಸ್ಲಾ ಮಾಡೆಲ್ ವೈ ಎಲೆಕ್ಟ್ರಿಕ್ ಕಾರು ಭಾರತದಲ್ಲಿ ₹60-70 ಲಕ್ಷ ರೂಪಾಯಿ ರೇಂಜ್ನಲ್ಲಿ ಲಭ್ಯವಾಗುವ ಸಾಧ್ಯತೆ ಇದೆ.

ಟೆಸ್ಲಾ ಕಾರಿನ ಬೆಲೆ ಎಷ್ಟು?
ಟೆಸ್ಲಾ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಎಲೆಕ್ಟ್ರಿಕ್ ಕಾರುಗಳನ್ನು $25,000 (ಸುಮಾರು ₹22 ಲಕ್ಷ) ಆರಂಭಿಕ ಬೆಲೆಯಿಂದ ಲಾಂಚ್ ಮಾಡಲು ಯೋಜಿಸುತ್ತಿದೆ. ಅಲ್ಲದೆ, 2025ರ ಅಂತ್ಯದ ವೇಳೆಗೆ ₹1 ಶತಕೋಟಿ ವಹಿವಾಟು ಗುರಿಯನ್ನು ಸಾಧಿಸುವ ಉದ್ದೇಶವನ್ನು ಹೊಂದಿರುವುದಾಗಿ ವರದಿಗಳು ಸೂಚಿಸುತ್ತವೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


