ದುಬೈ: ಇಲ್ಲಿನ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾರತ ಹಾಗೂ ಬಾಂಗ್ಲಾದೇಶ ತಂಡಗಳ ನಡುವೆ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಎರಡನೇ ಪಂದ್ಯ ನಡೆಯುತ್ತಿದ್ದು, ಟಾಸ್ ಗೆದ್ದ ಬಾಂಗ್ಲಾದೇಶ ಮೊದಲು ಬ್ಯಾಟಿಂಗ್ ಆರಿಸಿಕೊಂಡಿದೆ.
ಆದರೆ ಈ ನಿರ್ಧಾರ ಬಾಂಗ್ಲಾದೇಶಕ್ಕೆ ಹಿನ್ನಡೆ ಉಂಟು ಮಾಡಿದ್ದು, 9 ಓವರ್‌ಗೆಲ್ಲಾ ತನ್ನ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದೆ.
ಮೊದಲಿಗೆ ಶಮಿ ಎರಡು ವಿಕೆಟ್ ಹಾಗೂ ಹರ್ಷಿತ್ ರಾಣಾ ಒಂದು ವಿಕೆಟ್ ಪಡೆದರೆ, ಒಂಬತ್ತನೇ ಓವರ್ ಮಾಡಿದ ಅಕ್ಷರ್ ಪಟೇಲ್ ಅದೇ ಓವರ್‌ನಲ್ಲಿ ಎರಡು ವಿಕೆಟ್ ಪಡೆದರು ಹಾಗೂ ಹ್ಯಾಟ್ರಿಕ್ ವಿಕೆಟ್ ವಂಚಿತರಾದರು.
ಓವರ್‌ನ ಎರಡನೇ ಎಸೆತದಲ್ಲಿ ತನ್ಜಿದ್ ಹಸನ್ ಕೆಎಲ್ ರಾಹುಲ್‌ಗೆ ಕ್ಯಾಚ್ ನೀಡಿ ಔಟ್ ಆದರೆ, ಮೂರನೇ ಎಸೆತದಲ್ಲಿ ಮುಸ್ಫಿಕರ್ ರಹಮಾನ್ ವಿಕೆಟ್ ಒಪ್ಪಿಸಿದರು. ಹೀಗೆ ಬ್ಯಾಕ್ ಟು ಬ್ಯಾಕ್ ಎರಡು ವಿಕೆಟ್ ಪಡೆದು ಹ್ಯಾಟ್ರಿಕ್ ಸನಿಹದಲ್ಲಿದ್ದ ಅಕ್ಷರ್ ಪಟೇಲ್ ಎಸೆದ ಮುಂದಿನ ಎಸೆತಕ್ಕೆ ಜೇಕರ್ ಅಲಿ ಸಹ ಸ್ಲಿಪ್‌ಗೆ ಕ್ಯಾಚ್ ನೀಡಿದ್ದರು. ಆದರೆ ಸ್ಲಿಪ್‌ನಲ್ಲಿದ್ದ ರೋಹಿತ್ ಶರ್ಮಾ ಚೆಂಡಿನ ವೇಗವನ್ನು ಗ್ರಹಿಸಲಾಗದೇ ಕ್ಯಾಚ್ ಕೈ ಚೆಲ್ಲಿದರು.
ಕ್ಯಾಚ್ ಕೈಬಿಟ್ಟ ಬಳಿಕ ರೋಹಿತ್ ಶರ್ಮಾ ನೆಲಕ್ಕೆ ಕೈನಿಂದ ಹೊಡೆದು ತನ್ನಿಂದ ಆದ ತಪ್ಪಿಗೆ ಪರಿತಪಿಸಿದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


