ಕಳೆದ ಕೆಲ ದಿನಗಳ ಹಿಂದಷ್ಟೇ ಧರ್ಮಸ್ಥಳ ಹಾರರ್ ಎಂಬ ವಿಡಿಯೊ ಮಾಡಿದ್ದ ಯುಟ್ಯೂಬರ್ ಸಮೀರ್ ಎಂಡಿ ಈ ವಿಡಿಯೊದಲ್ಲಿ ಧರ್ಮಸ್ಥಳ ಸೌಜನ್ಯ ಅತ್ಯಾಚಾರ ಹಾಗೂ ಕೊಲೆಯ ತನಿಖೆಯ ಸಂಪೂರ್ಣ ಹಂತವನ್ನು ಬಿಚ್ಚಿಟ್ಟಿದ್ದರು.
ಪ್ರಕರಣದಲ್ಲಿ ಏನೆಲ್ಲ ಅಂಶಗಳನ್ನು ಮುಚ್ಚಿಡಲಾಯಿತು, ಹೇಗೆಲ್ಲ ಪ್ರಾಥಮಿಕ ಸಾಕ್ಷಿಗಳನ್ನು ನಾಶ ಮಾಡಲಾಯಿತು ಎಂಬ ಅಂಶಗಳನ್ನು ಎಐ ಟೂಲ್ ಬಳಸಿ ಅಚ್ಚುಕಟ್ಟಾಗಿ ವಿಡಿಯೊ ಮೂಲಕ ಕಟ್ಟಿಕೊಟ್ಟಿದ್ದರು.
ಹೀಗೆ ಈ ಒಂದು ವಿಡಿಯೊ ಮೂಲಕ ಮೂಲೆಗುಂಪಾಗಿದ್ದ ಸೌಜನ್ಯ ಪ್ರಕರಣವನ್ನು ಸಮೀರ್ ಮುನ್ನೆಲೆಗೆ ತಂದಿಟ್ಟದ್ದು ಸುಳ್ಳಲ್ಲ. ಈ ವಿಡಿಯೊ ಎಷ್ಟರಮಟ್ಟಿಗೆ ಪ್ರಭಾವ ಉಂಟುಮಾಡಿತ್ತೆಂದರೆ ಹಲವಾರು ಮಂದಿ ಸೌಜನ್ಯ ಪ್ರಕರಣದಲ್ಲಿ ಇಷ್ಟು ದಿನಗಳ ಕಾಲ ನಾವು ತಿಳಿದುಕೊಂಡಿದ್ದು ಸುಳ್ಳು, ಒಳ್ಳೆಯವರಂತೆ ಮುಖವಾಡ ಹಾಕಿಕೊಂಡವರೇ ಕೊಲೆಗಾರರು ಎಂದು ಸಾಮಾಜಿಕ ಜಾಲತಾಣದಲ್ಲಿ ಮುಕ್ತವಾಗಿ ಆರೋಪಿಸಲು ಮುಂದಾದರು.
ಹೀಗೆ ಮೊದಲ ವಿಡಿಯೊ ಹತ್ತಿರತ್ತಿರ ಎರಡು ಕೋಟಿ ವೀಕ್ಷಣೆ ಪಡೆದುಕೊಂಡು ಬೃಹತ್ ಯಶಸ್ಸು ಸಾಧಿಸಿದ ಬೆನ್ನಲ್ಲೇ ಸಮೀರ್ ವಿರುದ್ಧ ಅನೇಕ ಯುಟ್ಯೂಬರ್‌ಗಳು ದಂಗೆ ಎದ್ದರು. ತನಗಿಂತ ತಡವಾಗಿ ಬಂದವನು ಬೆಳೆದ ಎಂತಲೊ ಅಥವಾ ಆತ ಆರೋಪ ಮಾಡುತ್ತಿರುವವರ ಆರಾಧಕರು ನಾವು ಎನ್ನುವ ಕಾರಣಕ್ಕೋ ಸಮೀರ್ ವಿರುದ್ಧ ಕೈಲಾದಷ್ಟು ವಿಡಿಯೊಗಳನ್ನು ಮಾಡಿದರು. ಆದರೆ ಈ ವಿಡಿಯೊಗಳನ್ನಾರೂ ಪ್ರಶಂಶಿಸಲಿಲ್ಲ.
ಹೀಗೆ ತನ್ನ ವಿರುದ್ಧ ವಿಡಿಯೊ ಮಾಡಿದವರಿಗೆ ಎರಡನೇ ವಿಡಿಯೊದಲ್ಲಿ ತಿರುಗೇಟು ನೀಡಿರುವ ಸಮೀರ್ ತಾನೊಬ್ಬ ಮುಸ್ಲಿಂ ಎಂಬ ಕಾರಣಕ್ಕೆ ಸತ್ಯವನ್ನು ಮುಚ್ಚಲು ಯತ್ನಿಸಬೇಡಿ ಎಂದು ಸೌಜನ್ಯ ಕೇಸ್‌ನಲ್ಲಿ ಸಾಕ್ಷಿಯಾಗಿದ್ದವರ ಸಾಲು ಸಾಲು ಹತ್ಯೆ ನಡೆಯಿತು ಎಂಬುದನ್ನು ತಿಳಿಸಿದ್ದಾರೆ.
ಐದಾರು ಮಂದಿ ಸಾಕ್ಷಿಗಳನ್ನು ಸೌಜನ್ಯಳನ್ನು ಕೊಂದವರು ಹತ್ಯೆಗೈದಿದ್ದಾರೆ ಎಂದು ತಿಳಿಸಿದ ಸಮೀರ್ ಪ್ರಶಾಂತ್ ಎಂಬಾತ ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ನಡೆದ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದ, ಆತ ಘಟನೆ ನಡೆದ ಸಂದರ್ಭದಲ್ಲಿ ಅದನ್ನು ತಡೆಯಲು ಯತ್ನಿಸಿದ್ದ. ಆದರೆ ಅದು ಸಾಧ್ಯವಾಗಲ್ಲ. ನಂತರ ಕೆಲವೇ ದಿನಗಳಲ್ಲಿ ಪ್ರಶಾಂತ್ ಸಹ ಕೊಲೆಯಾಗಿಹೋಗುತ್ತಾನೆ ಎಂದು ಸಮೀರ್ ಹೇಳಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


