Sunday, November 1, 2026
spot_img
More
    spot_img
    HomeLatest newsನಿಮ್ಮ ಪಿಎಫ್ ಖಾತೆಯಿಂದ ಆನ್‌ಲೈನ್ ಮೂಲಕ ಹಣ ವಿತ್‌ಡ್ರಾ ಮಾಡುವ ಹಂತಗಳು

    ನಿಮ್ಮ ಪಿಎಫ್ ಖಾತೆಯಿಂದ ಆನ್‌ಲೈನ್ ಮೂಲಕ ಹಣ ವಿತ್‌ಡ್ರಾ ಮಾಡುವ ಹಂತಗಳು

    ಎಂಪ್ಲಾಯಿಸ್‌ ಪ್ರಾವಿಡೆಂಟ್‌ ಫಂಡ್‌ ಆರ್ಗನೈಸೇಶನ್ (EPFO) ಜಾಲತಾಣದ ಮುಖಾಂತರ ನೀವು ನಿಮ್ಮ ಇ.ಪಿ.ಎಫ್.ಹಣವನ್ನು ಹಿಂಪಡೆಯಬಹುದು. ನೌಕರರ ಭವಿಷ್ಯ ನಿಧಿಯನ್ನು ಸಾಮಾನ್ಯವಾಗಿ EPF ಎಂದು ಕರೆಯಲಾಗುತ್ತದೆ. ಇದು ಭಾರತದಲ್ಲಿ ಉದ್ಯೋಗಿಗಳಿಗೆ ಉಳಿತಾಯ,ಪಿಂಚಣಿ, ಹಾಗು ವಿಮಾ ಸೌಲಭ್ಯಗಳನ್ನು ನೀಡುವ ಸಂಸ್ಥೆಯಾಗಿದ್ದು,ಇದು ಭಾರತದ ಎಲ್ಲ ಉದ್ಯೋಗಿಗಳಿಗೂ ಕಡ್ಡಾಯವಾಗಿದೆ.ಇಪಿಎಫ್ ಖಾತೆಯಿಂದ ಹಣ ವಿತ್ ಡ್ರಾ ಮಾಡೋಕೆ ಈಗ ಮುಂಚಿನಂತೆ ಕಚೇರಿಯಿಂದ ಕಚೇರಿಗೆ ಅಲೆದಾಟ ನಡೆಸಬೇಕಾಗಿಲ್ಲ.ತಿಂಗಳುಗಟ್ಟಲೆ ಕಾಯಬೇಕಾಗಿಯೂ ಇಲ್ಲ. ಆನ್ ಲೈನ್ ನಲ್ಲಿ ಯುಎಎನ್ ಪೋರ್ಟಲ್ ಗೆ ಭೇಟಿ ನೀಡಿ ನೀವೇ ಪ್ರಕ್ರಿಯೆ ಪೂರ್ಣಗೊಳಿಸಬಹುದು.ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಇಪಿಎಫ್ ಗ್ರಾಹಕರ ಖಾತೆಗಳಿಗೆ ಬಡ್ಡಿಯನ್ನು ಜಮಾ ಮಾಡುತ್ತಿದೆ. ಇಪಿಎಫ್ ಖಾತೆದಾರರು ತಮ್ಮ ಠೇವಣಿ ಮೊತ್ತದಿಂದ ಸ್ವಲ್ಪ ಮೊತ್ತವನ್ನು ಹಿಂಪಡೆಯಬಹುದು. EPF ಹಣವನ್ನು ಆನ್‌ಲೈನ್‌ನಲ್ಲಿ ಹಿಂಪಡೆಯುವುದು ಹೇಗೆ ಎಂದು ಹಂತ ಹಂತವಾಗಿ ವಿವರಿಸಲಾಗಿದೆ.

    ಯಾವಾಗ ಹಣ ವಿತ್ ಡ್ರಾ ಮಾಡಬಹುದು?

    ಉದ್ಯೋಗಿಗಳು ನಿವೃತ್ತಿಯ ಬಳಿಕ ತಮ್ಮ ಇಪಿಎಫ್ ಖಾತೆಯಲ್ಲಿರುವ ಉಳಿತಾಯದ ಸಂಪೂರ್ಣ ಹಣವನ್ನು ಹಿಂಪಡೆಯಬಹುದು. ಆದರೆ, ಕೆಲವೊಂದು ನಿರ್ದಿಷ್ಟ ಸಂದರ್ಭಗಳಲ್ಲಿ ಅವರು ಪಿಎಫ್ ಖಾತೆಯಲ್ಲಿರುವ ಸ್ವಲ್ಪ ಹಣವನ್ನು ವಿತ್ ಡ್ರಾ ಮಾಡಲು ಅವಕಾಶವಿದೆ. ಉದ್ಯೋಗಕ್ಕೆ ರಾಜೀನಾಮೆ ನೀಡಿದ ಎರಡು ತಿಂಗಳ ಬಳಿಕ ಇಪಿಎಫ್‌ನಲ್ಲಿರೋ ಸಂಪೂರ್ಣ ಹಣವನ್ನು ಹಿಂಪಡೆಯಲು ಉದ್ಯೋಗಿ ಅರ್ಹನಾಗಿರುತ್ತಾನೆ. ಆದ್ರೆ ಆತ ಹೊಸ ಉದ್ಯೋಗಕ್ಕೆ ಇದೇ ಪಿಎಫ್‌ ಖಾತೆಯನ್ನು ವರ್ಗಾಯಿಸಿರಬಾರದಷ್ಟೆ. ಬೇರೆ ಉದ್ಯೋಗಕ್ಕೆ ಸೇರದಿರೋರು, ಹೊಸ ಸಂಸ್ಥೆಯಲ್ಲಿ ಹೊಸ ಪಿಎಫ್‌ ಖಾತೆ ತೆರೆದಿರೋರು ಹಾಗೂ ನಿವೃತ್ತಿಯಾದವರು ಎರಡು ತಿಂಗಳ ಬಳಿಕ ಪಿಎಫ್‌ ಖಾತೆಯಲ್ಲಿರೋ ಹಣವನ್ನು ಪಡೆಯಬಹುದು. ಇದೀಗ ಪಿಎಫ್ ಚಂದಾದಾರರು ಅಡ್ವಾನ್ಸ್ ನ್ನು ವಿತ್ ಡ್ರಾ ಮಾಡಿಕೊಳ್ಳುವುದಕ್ಕಾಗಿ ಇಪಿಎಫ್ಓ ಯುನಿಫೈಡ್ ಪೋರ್ಟಲ್ ಆಗಿರುವ mem.epfindia.gov.in ನಲ್ಲಿ ಅರ್ಜಿ ಸಲ್ಲಿಸಬಹುದು. ನಂತರ ನೀವು ಸಲ್ಲಿಸಿದ ಅರ್ಜಿಯ ಅನುಮೋದನೆಗಾಗಿ ನಿಮ್ಮ ಉದ್ಯೋಗದಾತರಿಗೆ ಅದನ್ನು ಕಳುಹಿಸಿಕೊಡಲಾಗುತ್ತದೆ. ಒಮ್ಮೆ ಅನುಮೋದನೆ ದೊರೆತ ನಂತರ ನಿಮ್ಮ ಪಿಎಫ್ ಹಣವು ನಿಮ್ಮ ಖಾತೆಗೆ ಜಮಾಗೊಳ್ಳುತ್ತದೆ. ಅದಕ್ಕಾಗಿ ನೀವು ಹೆಚ್ಚು ದಿನ ಕಾಯಬೇಕಾಗೂ ಇಲ್ಲ. ಕೇವಲ 10 ದಿನದ ಒಳಗೆ ನಿಮ್ಮ ಹಣ ನಿಮ್ಮ ಕೈ ಸೇರುತ್ತದೆ.

    ಆನ್‌ಲೈನ್ ಮುಖಾಂತರ ಪಿಎಫ್ ಹಣ ವಿತ್‌ಡ್ರಾ ಮಾಡುವ ಹಂತಗಳು

    UAN ಪೋರ್ಟ್‌ಲ್‌ಗೆ ಲಾಗಿನ್ ಆಗಿ – EPFO Unified Member Portal ವೆಬ್‌ಸೈಟ್‌ಗೆ ಹೋಗಿ ಮತ್ತು ನಿಮ್ಮ UAN, ಪಾಸ್‌ವರ್ಡ್, ಹಾಗೂ CAPTCHA ನಮೂದಿಸಿ ಲಾಗಿನ್ ಆಗಿ.

    KYC ಪರಿಶೀಲನೆ ಮಾಡಿ – ನಿಮ್ಮ ಆಧಾರ್, ಪ್ಯಾನ್, ಮತ್ತು ಬ್ಯಾಂಕ್ ಖಾತೆ ವಿವರಗಳು KYC ಅನುಮೋದಿತವಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ.

    ಆನ್‌ಲೈನ್ ಕ್ಲೇಮ್ ಸಲ್ಲಿಸಿ

    “Manage” ಮೆನುದಿಂದ “Claim (Form-31, 19, 10C & 10D)” ಆಯ್ಕೆಮಾಡಿ.ನಿಮ್ಮ ಬ್ಯಾಂಕ್ ಖಾತೆ ವಿವರಗಳನ್ನು ದೃಢೀಕರಿಸಿ ಮತ್ತು Proceed for Online Claim ಕ್ಲಿಕ್ ಮಾಡಿ.

    ವಿತ್‌ಡ್ರಾ ಪ್ರಕಾರ ಆಯ್ಕೆಮಾಡಿ ,ಸಂಪೂರ್ಣ ಪಿಎಫ್ ವಿತ್‌ಡ್ರಾ ಮಾಡಲು Form 19 ಆಯ್ಕೆಮಾಡಿ.ಪಿಂಚಣಿ ವಿತ್‌ಡ್ರಾ ಮಾಡಲು Form 10C ಆಯ್ಕೆಮಾಡಿ.ತುರ್ತು ಅವಶ್ಯಕತೆಗಳಿಗೆ Form 31 ಆಯ್ಕೆಮಾಡಿ.

    ಮಾಹಿತಿ ಭರ್ತಿ ಮಾಡಿ ವಿತ್‌ಡ್ರಾ ಮಾಡುವ ಕಾರಣ, ಮತ್ತು ನಿಮ್ಮ ಬ್ಯಾಂಕ್ ಖಾತೆ ವಿವರಗಳನ್ನು ಸರಿಯಾಗಿ ನಮೂದಿಸಿ.

    OTP ದೃಢೀಕರಣ – ನಿಮ್ಮ ಆಧಾರ್-ಲಿಂಕ್ ಮಾಡಿದ ಮೊಬೈಲ್ ಸಂಖ್ಯೆಗೆ ಬಂದ OTP ನಮೂದಿಸಿ.

    ಅರ್ಜಿ ಸಲ್ಲಿಕೆ ಮತ್ತು ಅನುಸರಣೆ ಅರ್ಜಿಯ ಸ್ಥಿತಿಯನ್ನು Track Claim Status ವಿಭಾಗದಲ್ಲಿ ಪರಿಶೀಲಿಸಬಹುದು.

    ಹಣ ಕ್ರೆಡಿಟ್ ಆಗುವುದು ವಿತ್‌ಡ್ರಾ ಮಾಡಿದ ಹಣ ಸಾಮಾನ್ಯವಾಗಿ 5-20 ಕೆಲಸದ ದಿನಗಳೊಳಗೆ ನಿಮ್ಮ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search