Sunday, November 1, 2026
spot_img
More
    spot_img
    HomeTop Storyಲವ್ ಮ್ಯಾರೇಜ್ ಆದವನನ್ನೇ ಮತ್ತೊಬ್ಬ ಲವರ್ ಜೊತೆ ಸೇರಿ ಕೊಂದ ಪಾಪಿ ಪತ್ನಿ ಹನಿಮೂನ್‌ನಲ್ಲಿದ್ದಾಗ ಸಿಕ್ಕಿಬಿದ್ದಿದ್ದೇಗೆ?

    ಲವ್ ಮ್ಯಾರೇಜ್ ಆದವನನ್ನೇ ಮತ್ತೊಬ್ಬ ಲವರ್ ಜೊತೆ ಸೇರಿ ಕೊಂದ ಪಾಪಿ ಪತ್ನಿ ಹನಿಮೂನ್‌ನಲ್ಲಿದ್ದಾಗ ಸಿಕ್ಕಿಬಿದ್ದಿದ್ದೇಗೆ?

    ಮೀರತ್: ನೌಕಾಪಡೆ ಅಧಿಕಾರಿಯೊಬ್ಬರನ್ನು ಪ್ರೀತಿಸಿ ಮದುವೆಯಾದ ಪತ್ನಿಯೇ ತನ್ನ ಮತ್ತೊಬ್ಬ ಲವರ್ ಜೊತೆ ಸೇರಿ ಕೊಲೆ ಮಾಡಿರುವ ಘಟನೆ ಮೀರತ್‌ನಲ್ಲಿ ನಡೆದಿದೆ.

    ಸೌರಭ್ ರಜಪೂತ್ ಎಂಬ ಮರ್ಚೆಂಟ್ ನೇವಿ ಅಧಿಕಾರಿ ಮುಸ್ಕಾನ್ ರಸ್ತೋಗಿ ಎಂಬಾಕೆಗಾಗಿ ತನ್ನ ಕುಟುಂಬವನ್ನೇ ತ್ಯಜಿಸಿದ್ದರು. ಮುಸ್ಕಾನ್‌ಳನ್ನು ಮನಸಾರೆ ಪ್ರೀತಿಸಿದ್ದ ಸೌರಭ್ ರಜಪೂತ್ ವಿವಾಹ ಮಾಡಿಕೊಂಡಿದ್ದರು.

    ಮೀರತ್‌ನಲ್ಲಿದ್ದ ಮುಸ್ಕಾನ್ ನೋಡಲೆಂದು ಲಂಡನ್‌ನಿಂದ ಬಂದಿದ್ದ ಸೌರಭ್ ರಜಪೂತ್ ಅವರನ್ನು ಮುಸ್ಕಾನ್ ಹಾಗೂ ಆಕೆಯ ಪ್ರಿಯಕರ ಸಾಹಿಲ್ ಶುಕ್ಲಾ ಸೇರಿ ಕೊಲೆ ಮಾಡಿದ್ದಾರೆ. ಬಳಿಕ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಡ್ರಮ್ ಒಂದಕ್ಕೆ ಹಾಕಿ ಸಿಮೆಂಟ್ ಸೊಲ್ಯೂಷನ್‌ನಿಂದ ಮುಚ್ಚಿದ್ದಾರೆ.

    ಹೀಗೆ ದೇಹದ ಭಾಗಗಳನ್ನು ಇಂಗುವ ಹಾಗೆ ಮಾಡಲು ಸಿಮೆಂಟ್ ಸೊಲ್ಯೂಷನ್ ಹಾಕಿದ್ದ ಮುಸ್ಕಾನ್ ಹಾಗೂ ಸಾಹಿಲ್ ಮೀರತ್‌ನಿಂದ ಶಿಮ್ಲಾಗೆ ತೆರಳಿ ದೇವಾಲಯವೊಂದರಲ್ಲಿ ವಿವಾಹವಾಗಿ ಅಲ್ಲಿಯೇ 12 ದಿನಗಳ ಕಾಲ ಹನಿಮೂನ್‌ ಆಚರಿಸಿದ್ದಾರೆ.

    ಪ್ರೀತಿಸಿ ಮದುವೆಯಾದ ಗಂಡನನ್ನೇ ಕೊಂದು ಹೊಸ ಪ್ರಿಯಕರನ ಜೊತೆ ಶಿಮ್ಲಾದಲ್ಲಿ ಹನಿಮೂನ್ ಖುಷಿಯಲ್ಲಿದ್ದ ಮುಸ್ಕಾನ್‌ಗೆ ಆಕೆಯ ತಾಯಿಯೇ ಪಾಠ ಕಲಿಸಿದ್ದಾರೆ. ಮಗಳ ಕೃತ್ಯವನ್ನು ಅವರೇ ಪೊಲೀಸರಿಗೆ ತಿಳಿಸಿ ಕೊಲೆಯನ್ನು ಬಹಿರಂಗಪಡಿಸಿದ್ದಾರೆ. ಈ ಮಾಹಿತಿ ಆಧಾರದ ಮೇಲೆ ದೇಹದ ತುಂಡುಗಳನ್ನು ಮನೆಯಿಂದ ಹೊರ ತೆಗೆದ ಪೊಲೀಸರು ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ. ಮುಸ್ಕಾನ್ ತಾನು ಮಾಡಿದ ಕೃತ್ಯವನ್ನು ಒಪ್ಪಿಕೊಂಡಿದ್ದಾಳೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search