ಬಾಲಿವುಡ್ ನಟ, ಭಾರತ ಕ್ರಿಕೆಟ್ ತಂಡದ ಆಟಗಾರ ಕೆಎಲ್ ರಾಹುಲ್ ಅವರ ಮಾವನೂ ಆದ ಸುನಿಲ್ ಶೆಟ್ಟಿ ಇಂದು ( ಏಪ್ರಿಲ್ 20 ) ಉಡುಪಿಯ ಕಾಪುವಿನ ಮಾರಿಗುಡಿ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.
ತಮ್ಮ ತಾಯಿ ಹಾಗೂ ಸಂಬಂಧಿಕರೊಂದಿಗೆ ದೇವಿಯ ದರ್ಶನ ಪಡೆದ ಸುನಿಲ್ ಶೆಟ್ಟಿ ಆಪ್ತರ ಜೊತೆ ತುಳುವಿನಲ್ಲಿ ಮಾತನಾಡುತ್ತಾ ಮಾಹಿತಿಯನ್ನು ಪಡೆದುಕೊಂಡರು. ಬಳಿಕ ಮಾಧ್ಯಮದವರ ಜೊತೆ ಮಾತನಾಡಿ ದೇವಾಲಯದ ಶಕ್ತಿಯ ಬಗ್ಗೆ ಕೇಳಿ ತಿಳಿದುಕೊಂಡೆ ಎಂದರು.
ಜೀವನದಲ್ಲಿ ಎಷ್ಟೇ ಕಷ್ಟವಿದ್ದರೂ ಸಾಕು ಇಲ್ಲಿಗೆ ಬಂದರೆ ದೇವಿ ಎಲ್ಲವನ್ನೂ ನೋಡಿಕೊಳ್ಳುತ್ತಾಳೆ ಎಂದು ಹೇಳುತ್ತಾರೆ. ಅದನ್ನು ನೀವು ಮನಗಾಣಬೇಕೆಂದರೆ ಅನುಭವಿಸಿಯೇ ನೋಡಬೇಕು. ನನಗೂ ಇಂದು ಅದು ಅನುಭವವಾಯಿತು. ಒಮ್ಮೆ ಈ ದೇವಾಲಯಕ್ಕೆ ಭೇಟಿ ನೀಡಿ ನೋಡಿ ಎಂದು ದೇವಾಲಯದ ಬಗ್ಗೆ ಹಾಡಿ ಹೊಗಳಿದ್ದಾರೆ.
ಇಂತಹ ಅದ್ಭುತವಿರುವ ಕಾರಣಕ್ಕೆ ದಕ್ಷಿಣ ಕನ್ನಡ, ಮಂಗಳೂರು ಅತಿ ಸುಂದರ ಹಾಗೂ ದೈವಾಶೀರ್ವಾದಿತ ತಾಣ ಎಂದು ಸುನಿಲ್ ಶೆಟ್ಟಿ ಕೊಂಡಾಡಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


