ಹೈದರಾಬಾದ್: ತೆಲುಗು ನಟ ಹಾಗೂ ಶಾಸಕ ನಂದಮೂರಿ ಬಾಲಕೃಷ್ಣ ಅವರ ಬಳಿ ಈಗಾಗಲೇ ಸಾಕಷ್ಟು ಐಷಾರಾಮಿ ಕಾರುಗಳಿದ್ದು, ಈಗ ಅವರ ಮನೆಯ ಹೊಸ ಅತಿಥಿಯಾಗಿ ಐಷಾರಾಮಿ ಬಿಎಂಡಬ್ಲ್ಯು ಕಾರ್ ಆಗಮನವಾಗಿದೆ. ಇದಕ್ಕೆ ಫ್ಯಾನ್ಸಿ ನಂಬರ್ ಪಡೆಯಲು ಸ್ವತಃ ಸ್ಟಾರ್ ನಟನೇ ಹರಾಜಿನಲ್ಲಿ ಪಾಲ್ಗೊಂಡು ತಮ ನೆಚ್ಚಿನ ಟಿಜಿ09 ಎಫ್ 0001 ನಂಬರ್ ಪಡೆಯಲು 7.75 ಲಕ್ಷ ರೂ.ಗಳನ್ನು ವ್ಯಯಿಸಿದ್ದು, ಈಗ ಈ ಸುದ್ದಿಯು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.
ಖೈರ್ತಾಬಾದ್ ಆರ್ಟಿಒ ವತಿಯಿಂದ ಹಮಿಕೊಂಡಿದ್ದ ಈ ಹರಾಜಿನಲ್ಲಿ ತಮ ವಾಹನಗಳಿಗೆ ಫ್ಯಾನ್ಸಿ ನಂಬರ್ ಖರೀದಿಸಲು ದೊಡ್ಡ ಮಟ್ಟದಲ್ಲಿ ಮಾಲೀಕರು ಆಗಮಿಸಿದ್ದು, ಒಂದೇ ದಿನದಲ್ಲಿ ದಾಖಲೆಯ 37.15 ಲಕ್ಷ ರೂ.ಗಳು ಸಂಗ್ರಹವಾಗಿದೆ ಎಂದು ತಿಳಿದುಬಂದಿದೆ.
ಈ ಹರಾಜಿನಲ್ಲಿ ಬಾಲಯ್ಯ ಅವರು ಪಾಲ್ಗೊಂಡು ತಮ ಮನೆಯ ಹೊಸ ಅತಿಥಿ (ಬಿಎಂಡಬ್ಲ್ಯು)ಗೆ ನಾವು ಮೆಚ್ಚುಗೆ ಪಡೆದಿರುವ ನಂಬರ್ ಅನ್ನೇ ಖರೀದಿಸಿರುವುದು ಸಂತಸ ತಂದಿದೆ ಎಂದು ಹೇಳಿದ್ದಾರೆ.
ಸಾಮಾನ್ಯವಾಗಿ ವಾಹನಗಳ ನಂಬರ್ ಪ್ಲೇಟ್ ಗಳು ಆರ್ಟಿಒಗಳು ವಿತರಿಸುತ್ತವೆ. ಆದರೆ ಕೆಲವರು ತಮಗೆ ಮೆಚ್ಚಿನ ಫ್ಯಾನ್ಸಿ ನಂಬರ್ ಪಡೆಯಲು ಇಲಾಖೆಯು ನಡೆಸುವ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಅದಕ್ಕಾಗಿ ದೊಡ್ಡ ಮಟ್ಟದ ಮೊತ್ತ ವ್ಯಯಿಸಿ ಖರೀದಿಸುವ ಕ್ರೇಜ್ ಬಹಳಷ್ಟುಮಂದಿಯಲ್ಲಿದ್ದು, ಇದರಿಂದ ಸರ್ಕಾರಕ್ಕೆ ಅಪಾರ ಪ್ರಮಾಣದ ಲಾಭವು ಹರಿದುಬರಲಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


