ಮುಂಬೈ: ಇಂದು ( ಏಪ್ರಿಲ್ 20 ) ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಡಬಲ್ ಹೆಡರ್ ಪಂದ್ಯಗಳು ಆಯೋಜನೆಗೊಂಡಿದ್ದು, ಪ್ರಥಮ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿದ್ದು, ಸಂಜೆ ಆರಂಭಗೊಳ್ಳಲಿರುವ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಲಿವೆ.
ಮುಂಬೈನ ವಾಂಖೆಡೆ ಕ್ರಿಕೆಟ್ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದ್ದು, ಈ ಬಾರಿ ಎರಡನೇ ಬಾರಿಗೆ ಇತ್ತಂಡಗಳು ಮುಖಾಮುಖಿಯಾಗುತ್ತಿವೆ. ಇನ್ನು ಟೂರ್ನಿಯಲ್ಲಿ ಎರಡೂ ತಂಡಗಳು ಸಹ ಕಳಪೆ ಆರಂಭ ಪಡೆದುಕೊಂಡಿದ್ದು, ಮುಂಬೈ ಇಂಡಿಯನ್ಸ್ ಹ್ಯಾಟ್ರಿಕ್ ಜಯ ದಾಖಲಿಸುವ ಮೂಲಕ ಗೆಲುವಿನ ಪ್ಲೇಆಫ್ ರೇಸ್‌ಗೆ ಇಳಿದಿದೆ. ಇನ್ನು ಚೆನ್ನೈ ಸೂಪರ್ ಕಿಂಗ್ಸ್ ಏಳು ಪಂದ್ಯಗಳ ಪೈಕಿ ಕೇವಲ ಎರಡು ಪಂದ್ಯಗಳಲ್ಲಿ ಗೆದ್ದು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.
ಹೀಗಾಗಿ ಈ ಪಂದ್ಯ ಎರಡೂ ತಂಡಗಳಿಗೂ ಬಹು ಮುಖ್ಯದ್ದಾಗಿದ್ದು, ಯಾವ ತಂಡ ಗೆಲ್ಲಲಿದೆ ಎಂಬ ಕುತೂಹಲ ಮೂಡಿದೆ. ಇನ್ನು ಇದೇ ಪ್ರಶ್ನೆಯನ್ನು ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕೆಲಸ ನಿರ್ವಹಿಸುತ್ತಿರುವ ಮಾಜಿ ಕ್ರಿಕೆಟಿಗರ ಬಳಿ ಸಹ ಕೇಳಲಾಗಿದೆ. ಇದಕ್ಕೆ 15 ಮಂದಿ ಉತ್ತರಿಸಿದ್ದು, ಓರ್ವ ಆಟಗಾರನನ್ನು ಬಿಟ್ಟು ಉಳಿದ ಎಲ್ಲರೂ ಸಹ ಮುಂಬೈ ಗೆಲ್ಲಲಿದೆ ಎಂದು ಆಯ್ಕೆ ಮಾಡಿದ್ದಾರೆ.
ಅದರಲ್ಲಿಯೂ ಸದಾ ಎಂಎಸ್ ಧೋನಿ, ಸಿಎಸ್‌ಕೆ ಎಂದು ಜಪ ಮಾಡುವ ರಾಯುಡು ಚೆನ್ನೈ ಸೂಪರ್ ಕಿಂಗ್ಸ್ ಆಯ್ಕೆ ಮಾಡಲಾಗದೇ ಧೋನಿ ನಾಯಕತ್ವದ ಬಗ್ಗೆ ಇಂತಹ ಮಹಾ ಅಭಿಮಾನಿಗೆ ನಂಬಿಕೆ ಇಲ್ವಾ ಎಂಬ ನಗೆಪಾಟಲಿಗೀಡಾಗಿದ್ದಾರೆ. ಇನ್ನು ಸುರೇಶ್ ರೈನಾ ಸಹ ಮುಂಬೈ ಇಂಡಿಯನ್ಸ್ ಎಂದು ಆಯ್ಕೆ ಮಾಡಿದ್ದಾರೆ, ಶ್ರೀಶಾಂತ್ ಸಹ ಮುಂಬೈಗೆ ವೋಟ್ ಹಾಕಿದ್ದಾರೆ.
ಆದರೆ ಶೇನ್ ವಾಟ್ಸನ್ ಮಾತ್ರ ಚೆನ್ನೈ ಸೂಪರ್ ಕಿಂಗ್ಸ್ ಈ ಪಂದ್ಯವನ್ನು ಗೆಲ್ಲಲೇಬೇಕೆಂಬ ಹಸಿವಿನಲ್ಲಿದ್ದಾರೆ, ಅವರು ಈ ಪಂದ್ಯವನ್ನು ಗೆಲ್ಲಲಿದ್ದಾರೆ ಎಂದು ಆರಿಸಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


