Thursday, September 3, 2026
spot_img
More
    spot_img
    HomeLatest newsನ್ಯೂಸ್‌ ಚಾನೆಲ್‌ ಲೈವ್‌ನಲ್ಲೇ ಕಾಂಗ್ರೆಸ್‌ ನಾಯಕನಿಗೆ ಬಿಜೆಪಿ ನಾಯಕನಿಂದ ಗುನ್ನಾ; ವಿಡಿಯೊ

    ನ್ಯೂಸ್‌ ಚಾನೆಲ್‌ ಲೈವ್‌ನಲ್ಲೇ ಕಾಂಗ್ರೆಸ್‌ ನಾಯಕನಿಗೆ ಬಿಜೆಪಿ ನಾಯಕನಿಂದ ಗುನ್ನಾ; ವಿಡಿಯೊ

    ತೆಲುಗು ಸುದ್ದಿ ವಾಹಿನಿಯಾದ ಯೊಯೊ ಟಿವಿ ಮತ್ತೊಮ್ಮೆ ವಿವಿದ ಪಕ್ಷಗಳ ಕಾರ್ಯಕರ್ತರನ್ನು ಚರ್ಚೆಗೆ ಕರೆಸಿ ಹೊಡೆದಾಡಿಕೊಳ್ಳಲು ವೇದಿಕೆ ನಿರ್ಮಿಸಿಕೊಟ್ಟಿದೆ. ಹೌದು, ಇದೇ ಸುದ್ದಿ ವಾಹಿನಿಯಲ್ಲಿ ಈ ಹಿಂದೆಯೂ ಹಲವು ಬಾರಿ ಇಂತಹ ಘಟನೆಗಳು ನಡೆದಿವೆ.

    Advertisement

    ಮಹಿಳಾ ನಿರೂಪಕಿ ನಡೆಸಿಕೊಡುತ್ತಿದ್ದ ಈ ಚರ್ಚಾ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌, ಬಿಜೆಪಿ ಹಾಗೂ ಬಿಆರ್‌ಎಸ್‌ ಪಕ್ಷದ ಕೆಲ ನಾಯಕರು ಭಾಗವಹಿಸಿದ್ದರು. ಈ ವೇಳೆ ಚರ್ಚೆ ಮಿತಿ ಮೀರಿದ್ದು, ಬಿಆರ್‌ಎಸ್‌ ಹಾಗೂ ಬಿಜೆಪಿ ಪಕ್ಷದ ಕಾರ್ಯಕರ್ತರು ಕಾಂಗ್ರೆಸ್‌ ಕಾರ್ಯಕರ್ತನ ವಿರುದ್ಧ ಕಿಡಿಕಾರಿದ್ದರು.

    ಈ ವೇಳೆ ಮಾತಿಗೆ ಮಾತು ಬೆಳೆದು ಇಂತಹ ಚರ್ಚೆ ಮಾಡಲು ಸುದ್ದಿ ವಾಹಿನಿಗಳಿಗೇಕೆ ಬರಬೇಕು ಕಮರ್ಷಿಯಲ್‌ ಚಾನೆಲ್‌ಗಳ ಕಾಮಿಡಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಉತ್ತಮ ಎಂದು ಕಾಂಗ್ರೆಸ್‌ ಕಾರ್ಯಕರ್ತ ಬಿಜೆಪಿ ಹಾಗೂ ಬಿಆರ್‌ಎಸ್‌ ಕಾರ್ಯಕರ್ತರ ಕಾಲೆಳೆದಿದ್ದಾನೆ.

    ಇನ್ನು ಇದರಿಂದ ಭಾರೀ ಕೋಪಗೊಂಡ ಬಿಜೆಪಿ ಕಾರ್ಯಕರ್ತ ಗಂಭೀರವಾಗಿ ನಡೆಯುತ್ತಿರುವ ಚರ್ಚೆ ವೇಳೆ ಈ ರೀತಿ ಕಾಮಿಡಿ ಕಾರ್ಯಕ್ರಮವನ್ನು ಉಲ್ಲೇಖಿಸಿ ಮಾತನಾಡುವುದು ತಪ್ಪು ಎಂದು ಕಿಡಿಕಾರಿದ್ದಾನೆ. ಅಲ್ಲದೇ ನಿರೂಪಕಿಯತ್ತ ಕೈಜೋಡಿಸಿ ಮೇಡಂ ಇದು ತಪ್ಪು ಎಂದು ದೂರಿದ್ದಾನೆ.

    ಈ ಸಮಯದಲ್ಲಿ ಕಾಂಗ್ರೆಸ್‌ನ ಕಾರ್ಯಕರ್ತ ಉದ್ವೇಗಕ್ಕೊಳಗಾಗಿ ಏಯ್‌ ಎಂದು ಕಿರುಚುತ್ತಾ ಟೇಬಲ್‌ ಕುಟ್ಟಿದ್ದಾನೆ. ಇಷ್ಟಕ್ಕೆ ತಾಳ್ಮೆ ಕಳೆದುಕೊಂಡ ಬಿಜೆಪಿ ಕಾರ್ಯಕರ್ತ ಕಾಂಗ್ರೆಸ್‌ ಕಾರ್ಯಕರ್ತನನ್ನು ತಳ್ಳಿ ಕೆಳಗೆ ಬೀಳಿಸಿ ಹಲ್ಲೆಗೆ ಮುಂದಾಗಿದ್ದಾನೆ. ಪ್ರತಿಯಾಗಿ ಕಾಂಗ್ರೆಸ್‌ ಕಾರ್ಯಕರ್ತನೂ ಸಹ ಮರು ಹಲ್ಲೆ ನಡೆಸಿದ್ದಾನೆ. ಸದ್ಯ ಈ ವಿಡಿಯೊ ಭಾರೀ ವೈರಲ್ ಆಗಿದೆ.

    ಇನ್ನು ಯೊಯೊ ಟಿವಿಯಲ್ಲಿ ಪ್ರಸಾರವಾಗುವ ಚರ್ಚಾ ಕಾರ್ಯಕ್ರಮಗಳಲ್ಲಿ ಮಾತ್ರ ಯಾವಾಗಲೂ ಜಗಳಗಳು ನಡೆಯುವುದನ್ನು ಕಂಡು ವೀಕ್ಷಕರು ಇದು ನಿಜವಾದ ಜಗಳವೇ ಅಥವಾ ತಾವೇ ಬೇಕಂತ ಇದನ್ನು ಸೃಷ್ಟಿಸುವ ಕೆಲಸವನ್ನೇನಾದರೂ ಮಾಡುತ್ತಿದ್ದೀರ ಎಂದು ಪ್ರಶ್ನಿಸಿದ್ದಾರೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading