Thursday, September 3, 2026
spot_img
More
    spot_img
    HomeSportsCricketದ್ರಾವಿಡ್‌ ಕೀಪರ್‌, ನಾನು ತಂಡದಲ್ಲಿದ್ರೂ ಅವಕಾಶವಿಲ್ಲ, ವಾಟರ್‌ ಬಾಟಲ್‌ ಸಪ್ಲೈ ಮಾಡಿಯೇ ಮನೆ ಕಟ್ಟಿಸಿಬಿಟ್ಟೆ ಎಂದ...

    ದ್ರಾವಿಡ್‌ ಕೀಪರ್‌, ನಾನು ತಂಡದಲ್ಲಿದ್ರೂ ಅವಕಾಶವಿಲ್ಲ, ವಾಟರ್‌ ಬಾಟಲ್‌ ಸಪ್ಲೈ ಮಾಡಿಯೇ ಮನೆ ಕಟ್ಟಿಸಿಬಿಟ್ಟೆ ಎಂದ ಮಾಜಿ ಕ್ರಿಕೆಟಿಗ

    2003ರ ವಿಶ್ವಕಪ್‌ ಟೂರ್ನಿ.. ಈ ಟೂರ್ನಿಯಲ್ಲಿ ಭಾರತ ಫೈನಲ್‌ ತಲುಪಿ 2023ರ ರೀತಿಯೇ ಕೊನೆಯ ಪಂದ್ಯದಲ್ಲಿ ದೈತ್ಯ ಆಸ್ಟ್ರೇಲಿಯಾ ವಿರುದ್ಧ ಹೀನಾಯವಾಗಿ ಸೋತು ರನ್ನರ್‌ ಅಪ್‌ ಆಗಿ ಹೊರಹೊಮ್ಮಿತ್ತು.

    Advertisement

    ಈ ಮೂಲಕ ಸೌರವ್‌ ಗಂಗೂಲಿ ಪಡೆ ಕೊನೆಯ ಹಂತದಲ್ಲಿ ಎಡವಿ ವಿಶ್ವ ಚಾಂಪಿಯನ್‌ ಆಗುವ ಬೃಹತ್‌ ಅವಕಾಶವನ್ನು ಕೈತಪ್ಪಿಸಿಕೊಂಡಿತು. ಈ ಟೂರ್ನಿಗೆ ಬಿಸಿಸಿಐ 15 ಆಟಗಾರರ ತಂಡವನ್ನು ಪ್ರಕಟಿಸಿತ್ತು. ಇದೇ ತಂಡದಲ್ಲಿದ್ದ ಓರ್ವ ಆಟಗಾರ ಇದೀಗ ಮೈದಾನಕ್ಕೆ ತೆರಳಿ ಆಟಗಾರರಿಗೆ ನೀರನ್ನು ಸರಬರಾಜು ಮಾಡುವುದರ ಕುರಿತು ತಮ್ಮ ಸ್ವಂತ ಅನುಭವವನ್ನು ಹೇಳಿಕೊಂಡಿದ್ದಾರೆ.

    ಹೌದು, ಕಾಮಿಡಿ ಫ್ಯಾಕ್ಟರಿಯ ಲವರಿ ಶೋನಲ್ಲಿ ಭಾಗವಹಿಸಿದ್ದ ಭಾರತದ ಮಾಜಿ ಕ್ರಿಕೆಟಿಗ ನೀರು ಸರಬರಾಜು ಮಾಡುವ ಕುರಿತು ತಮಾಷೆ ಮಾಡಿದ್ದಾರೆ. ʼನೀರಿನ ಬಗ್ಗೆ ಮಾತನಾಡಬೇಡಿ. ನಾನು 85 ಏಕದಿನ ಪಂದ್ಯಗಳಲ್ಲಿ ನೀರು ಸರಬರಾಜು ಮಾಡಿದ್ದೇನೆ. ರಾಹುಲ್‌ ದ್ರಾವಿಡ್‌ ವಿಕೆಟ್‌ ಕೀಪರ್‌ ಆಗಿದ್ದಾಗ ನಾನು ನೀರು ಸರಬರಾಜು ಮಾಡುತ್ತಿದ್ದೆ. 2003ರ ವಿಶ್ವಕಪ್‌ ಟೂರ್ನಿಯುದ್ದಕ್ಕೂ ನಾನು ನೀರು ಸರಬರಾಜು ಮಾಡಿದ್ದೇನೆ. ಆದರೆ ನಾನು ಆ ಸಮಯಕ್ಕೆ ಕೇವಲ ನೀರು ಸರಬರಾಜು ಮಾಡಿಯೇ ಮನೆ ಕಟ್ಟಿಕೊಂಡಿದ್ದೇನೆʼ ಎಂದರು.

    ಪಾರ್ಥಿವ್‌ ಪಟೇಲ್‌ 2003ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ತಂಡಕ್ಕೆ ಆಯ್ಕೆಯಾಗಿದ್ದರಾದರೂ ಒಂದೇ ಒಂದು ಪಂದ್ಯದಲ್ಲಿಯೂ ಕಣಕ್ಕಿಳಿಯುವ ಅವಕಾಶ ಪಡೆಯಲಿಲ್ಲ. ರಾಹುಲ್‌ ದ್ರಾವಿಡ್‌ರ ಹೆಚ್ಚುವರಿ ವಿಕೆಟ್‌ ಕೀಪರ್‌ ಆಗಿ ಪಟೇಲ್‌ ಆಯ್ಕೆಯಾಗಿದ್ದರು.

    ಆಂಧ್ರಪ್ರದೇಶದಲ್ಲಿ ಮತ್ತೆ ಎನ್‌ಕೌಂಟರ್:‌ ಮತ್ತೆ 7 ನಕ್ಸಲರ ಹತ್ಯೆ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading